ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

News

ಮುಂಬೈ
9 Mar 2022

ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 

ಮುಂಬೈ
2 Mar 2022

ಸ್ಥಳ ಆಧಾರಿತ ಸೇವೆಗಳು ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗವಾಗಿದೆ. ವಿಶೇಷವಾಗಿ ಸ್ಮಾರ್ಟ್ ಫೋನ್‌ ಮೂಲಕ ಬಳಸುವ ಗೂಗಲ್ ಮ್ಯಾಪ್ಸ್, ಓಲಾ, ಉಬರ್ ನಂತಹ ಆಪ್ ಗಳು ಇಂತಹ ಸ್ಥಳ ಆಧಾರಿತ ಸೇವೆಯ ಮೇಲೆ ಅವಲಂಬಿತವಿವಾಗಿದೆ. ಈ ಸೇವೆಯನ್ನು ಕಲ್ಪಿಸುವುದಕ್ಕೆ ಪೂರಕವಾದ ಅಂಶವೆಂದರೆ ಅಮೇರಿಕಾ ದೇಶಕ್ಕೆ ಸೇರಿದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್), ರಷ್ಯಾದ ಗ್ಲೊನಾಸ್ (GLONAS), ಅಥವಾ ಯುರೋಪ್ ನ ಗೆಲಿಲಿಯೋ (Galileo) ಎಂಬ ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ.

ಬೆಂಗಳೂರು
12 Jun 2019

ಪ್ರಸ್ತುತ ದಿನಗಳಲ್ಲಿ ಅದೃಶ್ಯವಾಗಿ ಪ್ರಾಣಕ್ಕೆ ಅಪಾಯವನ್ನೊಡ್ಡುತ್ತಿರುವ ವಾಯುಮಾಲಿನ್ಯವು ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಪ್ರಮುಖ ಜಾಗತಿಕ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲಿನ 15 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತವೊಂದೇ 14 ನಗರಗಳನ್ನು ಹೊಂದಿದೆ. ವಾಯುಮಾಲಿನ್ಯದ ಮಟ್ಟ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವ್ಯಾಪಿ ಎಲ್ಲಾ ರಾಜ್ಯಗಳಲ್ಲಿ ಸಮಗ್ರವಾದ ಅಧ್ಯಯನವನ್ನು ಕೈಗೊಂಡು ಅದಕ್ಕೆ ಪ್ರತಿಯಾಗಿ ಸರಿಯಾದ ಪ್ರತಿಕ್ರಮಗಳನ್ನು ಕೈಗೊಳ್ಳಬೇಕಿರುವುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ.

ಬೆಂಗಳೂರು
19 Feb 2020

ಪಕ್ಷಿ ವೀಕ್ಷಣೆ, ಪಕ್ಷಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ಗಮನಿಸುವ ಒಂದು ಕಲೆ. ಪಕ್ಷಿ ವೀಕ್ಷಣೆ, ಕೇವಲ ಪಕ್ಷಿಗಳನ್ನು ನೋಡುವುದಲ್ಲದೇ, ನಮ್ಮ ಆರಾಮ ವಲಯವನ್ನು ಮೀರಿ, ಅವುಗಳ ವೈವಿಧ್ಯಮಯ ಜಗತ್ತನ್ನು, ಅವುಗಳ  ವರ್ತನೆಯನ್ನು ತಾಳ್ಮೆಯಿಂದ ಗಮನಿಸುವುದು ಮತ್ತು ಕೆಲ ನಿಯಮಗಳನ್ನು ಪಾಲಿಸುವುದೂ ಒಳಗೊಂಡಿದೆ.  ಪಕ್ಷಿ ವೀಕ್ಷಣೆಯಲ್ಲಿ ವಯಸ್ಸು ಅಥವಾ ಅರ್ಹತೆಯ ನಿರ್ಬಂಧನೆಗಳಿಲ್ಲ ಹಾಗಾಗಿ ಎಲ್ಲರೂ ಆನಂದಿಸಬಹುದು. ಕೇವಲ ಅರಣ್ಯಗಳಲ್ಲದೇ, ನಮ್ಮ ಕಿಟಕಿಗಳೂ ಸಹ ಪಕ್ಷಿಗಳ ಜಗತ್ತಿನಲ್ಲಿ ಒಂದು ಇಣುಕು ನೋಟವನ್ನು ನೀಡಬಹುದು. ಸರಿಯಾದ ಮನಃಸ್ಥಿತಿಯೊಂದಿಗೆ ಕೆಲ ನಿಯಮಗಳನ್ನು ಪಾಲಿಸಿದಲ್ಲಿ ಪಕ್ಷಿ ವೀಕ್ಷಣೆ ದಿನನಿತ್ಯವೂ ಆಚರಿಸಬಲ್ಲಂತಹ ಒಂದು ಹಬ್ಬವಾಗಬಹುದು!

ಬೆಂಗಳೂರು
26 Jun 2019

2014ರಲ್ಲಿ, ಡಾ. ಸಾಹಿಲ್ ನಿಝಾವಾನ್ ನೇತೃತ್ವದ ಸ್ಥಳೀಯ ಇಡು-ಮಿಷ್ಮಿ ಜನಾಂಗದ ಒಂದು ಸಂಶೋಧನಾ ತಂಡ ಮಧ್ಯಮ ಹಾಗೂ ದೊಡ್ಡ ಗಾತ್ರದ ಸಸ್ತನಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ, ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯ ಕಾಡುಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದರು. ೨೦ ತಿಂಗಳುಗಳ ನಂತರ, ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದ ವಿಚಿತ್ರ ಹಾಗೂ ಅನಿರೀಕ್ಷಿತ ದೃಶ್ಯಗಳನ್ನು ಕಂಡು ನಿಬ್ಬೆರಗಾದರು. ಒಂದೇ ಪ್ರಭೇದದ ಆರು ಪ್ರತ್ಯೇಕ ಬಣ್ಣ ವಿಧಗಳ, ಮಧ್ಯಮ ಗಾತ್ರದ ಏಷ್ಯಾದ ಕಾಡು ಬೆಕ್ಕುಗಳು ಈ ಕಣಿವೆಯಲ್ಲಿ ಇರುವುದು ಈ ಕ್ಯಾಮೆರಾಗಳ ಮುಖೇನ ತಿಳಿದು ಬಂದಿದೆ.

ಬೆಂಗಳೂರು
4 Jan 2019

ಇತ್ತೀಚಿನ ಅಧ್ಯಯನವೊಂದರ ಭಾಗವಾಗಿ, ಕೇರಳದ ಪಶ್ಚಿಮ ಘಟ್ಟಗಳಲ್ಲಿ ಮತ್ತೊಂದು ಹೊಸ ಪ್ರಭೇದದ ಕಪ್ಪೆಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ‘ಮೈಕ್ರೊಹೈಲಾ ಡಾರ್ರೆಲಿ’ ಎಂಬ ಹೆಸರಿನ ಈ ಕಪ್ಪೆ, ‘ಮೈಕ್ರೊಹೈಲಾ’ ಕುಲಕ್ಕೆ ಸೇರಿದ ಜೀವಿಯಾಗಿದೆ; ಈ ಕುಲದ ಕಪ್ಪೆಗಳಿಗೆ ‘ಕಿರಿ ಮೂತಿಯ ಕಪ್ಪೆ’ (ನ್ಯಾರೋ ಮೌಥ್ಡ್ ಫ್ರಾಗ್) ಎಂಬ ಸಾಮಾನ್ಯ ಹೆಸರಿದ್ದು, ಇದಕ್ಕೆ ಕಾರಣ ಅವುಗಳ ತ್ರಿಕೋನಾಕಾರದ ಪುಟ್ಟ ದೇಹ ಮತ್ತು  ಕಿರಿದಾದ ಮೂತಿ.  ಈ ಕುಲದ ಕಪ್ಪೆಗಳು ಜಪಾನ್, ಚೀನಾ, ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಬೆಂಗಳೂರು
15 ಮೇ 2019

ವೈದ್ಯರ ಬಳಿ ಹುಶಾರಿಲ್ಲದೆ ತೆರಳಿದಾಗ ನನಗೆ ಇಂಜೆಕ್ಷನ್ (ಚುಚ್ಚುಮದ್ದು) ಬೇಡವೇ, ಬೇಡ ಎಂದು ಹಠ ಮಾಡಿದ್ದೀರ? ನೀವು ಬೇಡವೆಂದರೂ ರೋಗಕ್ಕೆ ಚುಚ್ಚುಮದ್ದು ಅನಿವಾರ್ಯ ಎಂದು ವೈದ್ಯರು ಕಥೆ ಹೇಳಿ ನಿಮಗೆ ಚುಚ್ಚಿ ನೋವುಂಟು ಮಾಡಿದ್ದಾರಾ? ಮಿತ್ರರೆ, ನಿಮಗೊಂದು ಶುಭಸುದ್ದಿ ಕಾದಿದೆ. ‘ಹಳೆಯ ನೋವನ್ನು’ ಮರೆಯುವ ಸಲುವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ವಿಜ್ಞಾನಿಗಳು ಸೂಜಿ-ಮುಕ್ತ, ನೋವುರಹಿತ ಔಷಧಿ ವಿತರಣೆಯ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಆಶ್ಚರ್ಯವಾಗುತ್ತಿದೆಯೆ? ಈ ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸಿದಲ್ಲಿ ಅತೀ ಶೀಘ್ರದಲ್ಲೆ ಔಷಧಿ ವಿತರಣೆಯಲ್ಲಿ ಬಳಸುವ ಚುಚ್ಚುಮದ್ದುಗಳನ್ನು ಬದಲಿಸಬಹುದು.