ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Agriculture

ಬೆಂಗಳೂರು
31 Jan 2020

ಪಂಜಾಬ್ ನಲ್ಲಿ ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ಲಕ್ಷಾಂತರ ಹೆಕ್ಟೇರ್ ಭತ್ತದ ಗದ್ದೆಗಳಲ್ಲಿ ಭತ್ತವನ್ನು ಕೊಯ್ಲು ಮಾಡುವ ನೂರಾರು ಯಂತ್ರಗಳ ಸದ್ದನ್ನು ಕೇಳಬಹುದು. ಇನ್ನು, ಮಹಾರಾಷ್ಟ್ರದಲ್ಲಿನ ವಿದರ್ಭದ ಹಳ್ಳಿಗಳು ತಮ್ಮ ಹಿಮದಷ್ಟು ಬಿಳಿಯ ಹತ್ತಿರಾಶಿಯನ್ನು ಲೆಕ್ಕವಿಲ್ಲದಷ್ಟು ಮೂಟೆಗಳಲ್ಲಿ ತುಂಬಿ  ಮಾರುಕಟ್ಟೆಗೆ ಕಳಿಸುತ್ತಿರುತ್ತವೆ. ಹಲವು ವರ್ಷಗಳ ಹಿಂದೆ, ಇದೇ ಕೃಷಿಭೂಮಿಗಳು ವಿಸ್ತಾರವಾದ ಕಾಡುಗಳು, ಹುಲ್ಲುಗಾವಲುಗಳು, ಗದ್ದೆಗಳು ಮತ್ತು ಅನೇಕ ಬೆಳೆಗಳನ್ನುಆವರ್ತಿಯ ಆಧಾರದ ಮೇಲೆ ಬೆಳೆಸಲಾಗುವಂತಹ ಪ್ರದೇಶಗಳಾಗಿದ್ದವು.