ಪಂಜಾಬ್ ನಲ್ಲಿ ಚಳಿಗಾಲವು ಪ್ರಾರಂಭವಾಗುತ್ತಿದ್ದಂತೆ, ಲಕ್ಷಾಂತರ ಹೆಕ್ಟೇರ್ ಭತ್ತದ ಗದ್ದೆಗಳಲ್ಲಿ ಭತ್ತವನ್ನು ಕೊಯ್ಲು ಮಾಡುವ ನೂರಾರು ಯಂತ್ರಗಳ ಸದ್ದನ್ನು ಕೇಳಬಹುದು. ಇನ್ನು, ಮಹಾರಾಷ್ಟ್ರದಲ್ಲಿನ ವಿದರ್ಭದ ಹಳ್ಳಿಗಳು ತಮ್ಮ ಹಿಮದಷ್ಟು ಬಿಳಿಯ ಹತ್ತಿರಾಶಿಯನ್ನು ಲೆಕ್ಕವಿಲ್ಲದಷ್ಟು ಮೂಟೆಗಳಲ್ಲಿ ತುಂಬಿ ಮಾರುಕಟ್ಟೆಗೆ ಕಳಿಸುತ್ತಿರುತ್ತವೆ. ಹಲವು ವರ್ಷಗಳ ಹಿಂದೆ, ಇದೇ ಕೃಷಿಭೂಮಿಗಳು ವಿಸ್ತಾರವಾದ ಕಾಡುಗಳು, ಹುಲ್ಲುಗಾವಲುಗಳು, ಗದ್ದೆಗಳು ಮತ್ತು ಅನೇಕ ಬೆಳೆಗಳನ್ನುಆವರ್ತಿಯ ಆಧಾರದ ಮೇಲೆ ಬೆಳೆಸಲಾಗುವಂತಹ ಪ್ರದೇಶಗಳಾಗಿದ್ದವು.