ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

highlights

ಬೆಂಗಳೂರು
31 Dec 2017

ಕಳೆದ ಕೆಲವು ದಶಕಗಳಲ್ಲಿ ಭಾರತದ ವಿಜ್ಞಾನ ಕ್ಷೇತ್ರವು ಅಪಾರ ವೇಗದಿಂದ ಔನತ್ಯದೆಡೆಗೆ ಮುನ್ನಡೆಯುತ್ತಿದ್ದು, ಇದರ ಹಿಂದಿರುವ ಕಾರಣ ಇಲ್ಲಿ ಯಥೇಚ್ಛವಾಗಿ ಲಭ್ಯವಿರುವ ಪ್ರತಿಭೆ ಮತ್ತು ಮೂಲಭೂತ ಸೌಕರ್ಯ. ಖಗೋಳಶಾಸ್ತ್ರದಿಂದ ಮೊದಲ್ಗೊಂಡು ಜೀವಶಾಸ್ತ್ರದವರೆಗೂ, ರಸಾಯನಶಾಸ್ತ್ರದಿಂದ ಕೃಷಿಯವರೆಗೂ ಎಲ್ಲಾ ವೈಜ್ಞಾನಿಕ ಕ್ಷೇತ್ರಗಳನ್ನೂ ಒಳಗೊಂಡಂತೆ ಹೆಮ್ಮೆ ಪಡಬೇಕಾದ ಹಲವಾರು ಸಾಧನೆಗಳು, ಅದರ ಹಿಂದಿನ ವಿಜ್ಞಾನಿಗಳು ಇಲ್ಲಿರುವುದು ಸಂತಸದ ಸತ್ಯ; ಆದರೆ ೨೦೧೭ ಹೇಗೆ ವಿಭಿನ್ನವಾಗಿತ್ತು? ಭಾರತೀಯ ವೈಜ್ಞಾನಿಕ ಸಮುದಾಯದಿಂದ ಕೆಲವು ಪ್ರಮುಖ ಸಂಶೋಧನಾ ಮುಖ್ಯಾಂಶಗಳು ಯಾವುವು?