ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Hindustani music

ಬೆಂಗಳೂರು
11 Dec 2019

ಅಧಿಕ ರಕ್ತದೊತ್ತಡವು ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ದೀರ್ಘಕಾಲದ ಕಾಯಿಲೆಗಳಲಿೢ ಒಂದು. ರಾಷ್ಟ್ರೀಯ ಆರೋಗ್ಯ ವಿವರ (ನ್ಯಾಷನಲ್ ಹೆಲ್ತ್ ಪೋರ್ಟಲ್ - ಎನ್‌.ಎಚ್‌.ಪಿ) ೨೦೧೯ ರ ಪ್ರಕಾರ, ೨೦೧೮ ರಲ್ಲಿ ಸರ್ಕಾರಿ ಚಿಕಿತ್ಸಾಲಯಗಳಿಗೆ ಭೇಟಿನೀಡಿದ ಎಲ್ಲ ರೋಗಿಗಳಲ್ಲಿ ೬.೧೯% ಜನರು ಅಧಿಕರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಮಧುಮೇಹದಿಂದ ಬಳಲುತ್ತಿರುವ ಜನರಿಗಿಂತ ಹೆಚ್ಚಾಗಿದೆ (ಸುಮಾರು ೪.೭೫% ರಷ್ಟು). ಆದರೆ ಎನ್‌.ಎಚ್‌.ಪಿಯಲ್ಲಿ ಖಾಸಗಿ ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ಜನರನ್ನು ಪರಿಗಣಿಸುವುದಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್  ಪ್ರಕಾರ, ನಮ್ಮ ದೇಶದಲ್ಲಿ ೧೦.೧೮ %ರಷ್ಟು ಮರಣಗಳಿಗೆ ಅಧಿಕ ರಕ್ತದೊತ್ತಡ ಮುಖ್ಯ ಕಾರಣವಾಗಿದೆ.