ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

IISER Pune

Bengaluru
28 Apr 2022

ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ. 

ಬೆಂಗಳೂರು
21 ಮೇ 2020

ಇಲ್ಲೊಂದು ಚಿಲಿಪಿಲಿ, ಅಲ್ಲೊಂದು ವಾಹನದ ಹಾರ್ನ್! ಕೀಟಗಳ ಕಿರುಗುಡುವಿಕೆ,  ನಾಯಿಯ ಬೊಗಳುವಿಕೆ, ಚರ್ಚ್‌ನ ಗಂಟೆ ಮತ್ತು ವಿವಿಧ ಪಕ್ಷಿಗಳ ಕಲರವ -  ನಗರದಲ್ಲಿ ಇವೆಲ್ಲವೂ ಒಟ್ಟೊಟಿಗೆ ಕೇಳಿಸಬಹುದಾಗಿದ್ದು, ಇದೇ ಕಾರಣದಿಂದಲೇ ನಗರದಲ್ಲಿ ಪಕ್ಷಿಯಾಗಿ ಬದುಕುವುದು ಕಠಿಣಕಾರ್ಯ!. ಈ ಗಡಿಬಿಡಿಯ ಗಲಗಲದಲ್ಲಿ, ಸಂಗಾತಿಗೆ ಪಕ್ಷಿಯ ಕರೆ ಕೇಳಿಸುವುದು ಅಸಾಧ್ಯ! ಹಾಗಾಗಿ ಇಂತಹ ಸಮಸ್ಯೆಗಳನ್ನು ತಪ್ಪಿಸಲು, ನಗರಗಳೂ ಸೇರಿದಂತೆ ಎಲ್ಲೆಡೆ, ಪಕ್ಷಿಗಳು ತಮ್ಮ ಸಮೂಹಗಾನದಲ್ಲಿ ಸಮಯ, ಆವಾಸಸ್ಠಾನ ಮತ್ತು ವಿಶಿಷ್ಟ ಸೂಚನೆ ನೀಡುವ ಸಲುವಾಗಿ ಕೂಗಿನ ಸಂಖ್ಯೆಯಲ್ಲಿ ಬದಲಾವಣೆ ತರುವ ವಿವಿಧ ತಂತ್ರಗಳನ್ನು ಬಳಸುತ್ತವೆ.