ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Language

ಬೆಂಗಳೂರು
21 ಮೇ 2018

ವೈವಿಧ್ಯತೆಯಲ್ಲಿ ಶ್ರೀಮಂತವೆನಿಸಿದ ತಾಣವಾದ ಭಾರತದಲ್ಲಿ ಹಲವಾರು ಬಗೆಯ ಸಂಸ್ಕೃತಿಗಳನ್ನು ನಾವು ಕಾಣಬಹುದು. ಇಲ್ಲಿ ಮಾತನಾಡಲಾಗುವ ಹೆಚ್ಚಿನ ಸಂಖ್ಯೆಯ ಭಾಷೆಗಳೇ ಇದಕ್ಕೆ ಒಂದು ಪ್ರಮಾಣಪತ್ರವಾಗಿದೆ. ಈ ಭಾಷೆಗಳನ್ನು ಕಲಿಯುವುದು ಆಸಕ್ತಿಕರವೇನೋ ಹೌದು; ಜೊತೆಗೇ, ಅವುಗಳನ್ನು ಅಧ್ಯಯನ ಮಾಡುವುದು ಇನ್ನೊಂದು ಕಾರಣಕ್ಕಾಗಿ ಆಕರ್ಷಕವಾಗಿದೆ; ಅದೇನೆಂದರೆ ಭಾರತೀಯ ಆರ್ಯ ಭಾಷಿಕರು ಕ್ರಿಸ್ತ ಪೂರ್ವ ೧೫೦೦ರಲ್ಲಿ ಆಗಮಿಸುವ ಮೊದಲು, ಭಾರತೀಯ ಉಪಖಂಡದಲ್ಲಿ ವಾಸವಾಗಿದ್ದ ದ್ರಾವಿಡರ ಅಲ್ಪ-ಪ್ರಸಿದ್ಧ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಈ ಭಾಷೆಗಳು ನಮಗೆ ಸಹಾಯ ಮಾಡುತ್ತವೆ. ಇಲ್ಲಿಯವರೆಗೆ, ದ್ರಾವಿಡರ ಮೂಲ ಮತ್ತು ದೇಶದಾದ್ಯಂತ ಅವರ ಪ್ರಸರಣದ ಬಗ್ಗೆ ಹೆಚ್ಚು ತಿಳಿದಿಲ್ಲ.