ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ಒಂದು ತಂಡ ಪಶ್ಚಿಮ ಘಟ್ಟಗಳ ಹಾವುಗಳನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸಲು ಪ್ರಯತ್ನಿಸುತ್ತಿದ್ದರು. ಈ ಕ್ರಮಬದ್ಧ ಅಧ್ಯಯನ ನಡೆಸುವಾಗ ಪಶ್ಚಿಮ ಘಟ್ಟಗಳ ಕಾಡುಗಳಿಗೆ ಸ್ವಂತವಾದ “ಪ್ರೊಹೇಟುಲ್ಲಾ ಆಂಟಿಕಾ” ಎನ್ನುವ ಒಂದು ಬಳ್ಳಿಹಾವನ್ನು ಅಕಸ್ಮಾತಾಗಿ ಕಂಡರು. ಇದು ಒಂದು ಪುರಾತನ ಪ್ರಭೇದವೆಂದು, ಸುಮಾರು ೨೬ ಮಿಲಿಯನ್ ವರುಷಗಳ ಹಿಂದೆ, ಮಧ್ಯ ಒಲಿಗೋಸೀನ್ ಯುಗದಲ್ಲಿ ವಿಕಾಸನಗೊಂಡಿತೆಂದು ಅಂದಾಜಿಸಲಾಗಿದೆ.