ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Pandemic

ಬೆಂಗಳೂರು
30 Apr 2020

ಮೂಲ ಲೇಖನ ಬರೆದವರು: ಜ್ಯೋತಿ ಶರ್ಮಾ  ಮತ್ತು ಎಸ್.ಕೆ.ವರ್ಶ್ನಿ, ಹಿರಿಯ ವಿಜ್ಞಾನಿಗಳು  ಮತ್ತು ಮುಖ್ಯಸ್ಥರು, ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಹಕಾರ ವಿಭಾಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ     

ಬೆಂಗಳೂರು
17 Apr 2020

ಬಾವಲಿಗಳು ತಮ್ಮ ಪಾಡಿಗೆ ತಾವು ರಾತ್ರಿಯಲ್ಲಿ ಹಾರಾಡುವ ಸಸ್ತನಿಗಳು. ಇವು ಪ್ರಪಂಚದಾದ್ಯಂತ ಹರಡಿದ್ದು, ಇವುಗಳಲ್ಲಿ ಸುಮಾರು ೧೨೦೦ ಪ್ರಭೇದಗಳಿವೆ. ಈಗಿನ ಲಾಕ್ ಡೌನ್ ಗೆ ಕಾರಣವಾಗಿರುವ ಕೋವಿಡ್-೧೯ ಸಾಂಕ್ರಾಮಿಕವನ್ನು ಬಾವಲಿಗಳು ಹರಡುತ್ತಿವೆ ಎಂದು ಜನರು ತಿಳಿದಿದ್ದಾರೆ. ಇದಕ್ಕೆ ಪೂರಕವಾಗಿ, ಕೆಲವೇ ದಿನಗಳ ಹಿಂದೆ, ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್)ನ  ಅಧ್ಯಯನವೊಂದು ದಕ್ಷಿಣ ಭಾರತದಲ್ಲಿ ಕಂಡುಬರುವ ಬಾವಲಿಗಳಲ್ಲಿ “ಬ್ಯಾಟ್-ಕೊರೊನ ವೈರಸ್” ಇದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೆಲ್ಲಾ ಓದಿದ ಜನ, ಭಯಭೀತರಾಗಿ ಕೆಲವೆಡೆ ಬಾವಲಿಗಳನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ. ಕೆಲವರಂತೂ ಮನೆ ಅಂಗಳದಲ್ಲಿರುವ ಸಪೋಟಾ, ಮಾವು ಹಾಗೂ ಬಾವಲಿಗಳು ಬರುವ ಇತರ ಗಿಡ-ಮರಗಳನ್ನು ಕಡಿಯುತ್ತಿದ್ದಾರೆ.