ನಾವೆಲ್ಲರೂ ಓದುವುದನ್ನು ಹೇಗೆ ಕಲಿತೆವು ಎಂದು ನೆನಪಿಸಿಕೊಂಡರೆ- ಮೊದಲಿಗೆ ನಾವು ಪ್ರತಿಯೊಂದು ಅಕ್ಷರ ಹೇಗೆ ಉಚ್ಚರಿಸುವುದು ಎಂದು ಕಲಿಯುತ್ತೇವೆ. ನಂತರ ಪೂರ್ತಿ ಪದ(ಗಳು) ಮತ್ತು ವಾಕ್ಯಗಳನ್ನು ಸುಲಭವಾಗಿ ಹೇಳಲು ಕಲಿಯುತ್ತೇವೆ. ಆದರೆ, ನಾವು ಓದಲು ಕಲಿಯುವಾಗ, ನಮ್ಮ ಮೆದುಳಿನಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.