ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Rain

ಪುಣೆ
17 Apr 2018

ಕಳೆದ ವಾರ, ಭಾರತೀಯ ಹವಾಮಾನ ಇಲಾಖೆಯು, ಈ ವರ್ಷದ ಮುಂಗಾರು ಸಾಮಾನ್ಯವಾಗಿರುತ್ತದೆ ಎಂದು ಊಹಿಸಿದೆ. ಆದರೆ ನಾವಿನ್ನೂ ಬೇಸಿಗೆಯ ತಿಂಗಳುಗಳಲ್ಲಿಯೇ ಇದ್ದೇವಲ್ಲವೇ? ನಮ್ಮ ರೈತರು ಬೀಜಗಳನ್ನು ಬಿತ್ತನೆ ಮಾಡಲು ಮತ್ತು ತಮ್ಮ ನೀರಾವರಿ ಸಂಪನ್ಮೂಲಗಳನ್ನು ಸನ್ನದ್ಧವಾಗಿಸಿಕೊಳ್ಳಲು, ನಾಗರಿಕ ಸೇವಾ ಅಧಿಕಾರಿಗಳು ಗೃಹಬಳಕೆ ಮತ್ತು ಕೈಗಾರಿಕಾ ಬಳಕೆಗಾಗಿ ನೀರಿನ ವಿತರಣೆಯನ್ನು ಯೋಜಿಸಲು ಈ ಮಾಹಿತಿ ಬೇಕು, ನಿಜ; ಆದರೆ ಸಮಯಕ್ಕೆ ಮುಂಚಿತವಾಗಿ ಈ ನಿಖರ ಊಹೆಯನ್ನು ಇಲಾಖೆಯ ವಿಜ್ಞಾನಿಗಳು ಹೇಗೆ ಮಾಡಿದರು? ಮುಂಗಾರಿನ ಮೇಲೆ ನಮ್ಮ ದೇಶದ ಹೆಚ್ಚಿನ ಜನರು ಅವಲಂಬಿತರಾಗಿರುವ ಕಾರಣ, ಅದರ ಆಗಮನದ ಊಹೆಯನ್ನು ನಿಖರವಾಗಿ ಮಾಡುವ ಕಲೆಯಲ್ಲಿ ವಿಜ್ಞಾನಿಗಳು ಪರಿಪೂರ್ಣರಾಗುವುದು ಅತ್ಯಾವಶ್ಯಕ.