ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ZSI

Bengaluru
4 Nov 2020

(ಅ) ಶೋಲ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಶೋಲೈ) [ಚಿತ್ರ ಕೃಪೆ: ಕ. ಅ. ಸುಬ್ರಮಣಿಯನ್]; (ಬೀ) ಬ್ಲೂ-ಲೆಗ್ಗಡ್ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಸಯನೋಫೆಮೊರ) [ಚಿತ್ರ ಕೃಪೆ: ಶಂತನು ಜೋಶಿ];  (ಸೀ) ಮಿರಿಸ್ಟಿಕ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಮಿರಿಸ್ಟಿಕೇನ್ಸಿಸ್) [ಚಿತ್ರ ಕೃಪೆ: ಶಂತನು ಜೋಶಿ]

ಬೆಂಗಳೂರು
4 Dec 2019

‘ಸಗಣಿ’ ಜೀರುಂಡೆಗಳು ಆಕರ್ಷಕ ಜೀವಿಗಳು. ಇವು ಪ್ರಾಣಿಗಳ ಸಗಣಿಗಳನ್ನು ಆಹಾರವಾಗಿ ಸೇವಿಸುತ್ತವೆ ಮತ್ತು ಅದರಿಂದ ಅವುಗಳ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತವೆ. ಈ ಸಣ್ಣ ಜೀರುಂಡೆಗಳು, ಸಗಣಿಯನ್ನು  ತಿನ್ನುವ ಮೂಲಕ ಮಣ್ಣಿನ ರಚನೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತವೆ. ಹಾಗಾಗಿ, ಇವು ಕೃಷಿಯಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ.   ಪ್ರಾಣಿಗಳ ಸಗಣಿಯಲ್ಲಿ ಇರುವ ಬೀಜಗಳನ್ನು ಹರಡಲು, ಬೀಜಗಳನ್ನು ಮಣ್ಣಲ್ಲಿ ಸೇರಿಸುವ ಮೂಲಕ, ಉಷ್ಣವಲಯಪ್ರದೇಶಗಳಲ್ಲಿ ಗಿಡಮರಗಳು ಬೆಳೆಯಲು ಸಹಾಯ ಮಾಡುತ್ತವೆ. ಇವು ಸರ್ವಭಕ್ಷಕಗಳಿಗಿಂತ ಸಸ್ಯಹಾರಿಗಳ ಸಗಣಿಗಳಿಗೆ ಆದ್ಯತೆ ನೀಡುತ್ತವೆ.

Bengaluru
8 Jun 2018

ಭಾರತದ ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ತಲಾ ಒಂದೊಂದು ಹೊಸ ಜಾತಿಯ ಚಿಮ್ಮಂಡೆ ಕಪ್ಪೆಗಳನ್ನು ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆ ಮತ್ತು ಉತ್ತರ ಒರಿಸ್ಸಾ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.