ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಹೆಚ್ಚಿನ ಲವಣಾಂಶವನ್ನು ಸಹಿಸುವಂತೆ ಭಾರತೀಯ ದೇಶೀ ಭತ್ತದ ಸಸಿಗಳ ಪ್ರಭೇದಗಳನ್ನು ಅಭಿವೃದ್ಧಿ ಪಡಿಸಿರುವ ಸಂಶೋಧಕರು

Read time: 1 min
ಬೆಂಗಳೂರು
23 Oct 2019

ಈ ವರ್ಷದ ಬೇಸಿಗೆ ಕಾಲ, ಮಳೆಗಾಲದ ಅವಧಿಯಲ್ಲಿ ಭಾರತದ ಅನೇಕ ಪ್ರದೇಶಗಳು ಬರಗಾಲ ಮತ್ತು ಪ್ರವಾಹಗಳಿಂದ ತತ್ತರಿಸಿದವು. ನೀರಾವರಿಗಾಗಿ ಮಳೆಯ ಮೇಲೆ ಅವಲಂಬಿತವಾಗಿರುವ ದೇಶದಲ್ಲಿ (ವ್ಯತಿರಿಕ್ತ) ವಿನಾಶಕಾರಿ ಹವಾಮಾನದಿಂದಾಗಿ ಉಂಟಾಗುವ ಬೆಳೆಗಳ ನಷ್ಟವು ರೈತರಿಗೆ ತೊಂದರೆ ಉಂಟು ಮಾಡಿದೆ. ದೇಶದಲ್ಲಿ ವ್ಯವಸಾಯ ಯೋಗ್ಯ ಭೂಮಿಯ ಅರ್ಧದಷ್ಟು ಭಾಗ ಮಳೆಯ ಮೇಲೆ ಆಶ್ರಯಿಸಿರುವುದರಿಂದ, ಬೆಳೆಗಳು ಹವಾಮಾನದ ವೈಪರೀತ್ಯಗಳನ್ನು (ಅಸ್ಥಿರತೆಗಳನ್ನು) ಸಹಿಸಿಕೊಳ್ಳುವ ವಿಧಾನಗಳು ಅಗತ್ಯವಾಗಿದೆ.

ಸಸ್ಯದ ತೂಕದ ಹೆಚ್ಚಿನ ಭಾಗವು ಇದು ಭೂಮಿಯಿಂದ ಹೀರಿಕೊಳ್ಳುವ ನೀರಿನಿಂದ ಕೂಡಿದೆ. ಬೇಸಿಗೆ ಕಾಲದಲ್ಲಿ ಸೂರ್ಯನ ಶಾಖದಿಂದ ಭೂಮಿಯೊಳಗಿನ ನೀರು ನಿರಂತರವಾಗಿ ಆವಿಯಾಗುವುದು ಆದರೆ ನೀರಿನಲ್ಲಿ ಕರಗಿರುವ ಲವಣಾಂಶವು ಭೂಮಿಯಲ್ಲಿಯೇ ಉಳಿದುಕೊಳ್ಳುವುದು, ಇದರಿಂದ ಲವಣಾಂಶದ ಪ್ರಮಾಣವು ಮಣ್ಣಿನಲ್ಲಿ ಹೆಚ್ಚಾಗುತ್ತದೆ. ಹೀಗೆ ಅಂತರ್ಜಲದಲ್ಲಿರುವ ಲವಣಾಂಶದ ಪ್ರಮಾಣವು ಸಸ್ಯದಲ್ಲಿರುವ ಲವಣಾಂಶಕ್ಕಿಂತ ಹೆಚ್ಚಾದಾಗ, ನೀರಿನ ಹರಿವು ದಿಕ್ಕನ್ನು ಬದಲಾಯಿಸುತ್ತದೆ ಮತ್ತು ಬಿಸಿಲಿನ ತಾಪಕ್ಕೆ ಒಣಗಿದ ಭೂಮಿಯು ಸಸ್ಯದಿಂದ ನೀರಿನ ಅಂಶವನ್ನು ಹೀರಿ ಸಸ್ಯವನ್ನು ಒಣಗಿಸುತ್ತದೆ. ಇತ್ತೀಚಿನ ಅದ್ಯಯನವೊಂದರಲ್ಲಿ ಕಲ್ಕತ್ತಾ ವಿಶ್ಯವಿದ್ಯಾಲಯದ ಜೆ.ಸಿ.ಬೋಸ್ ಸಂಸ್ಥೆ ಮತ್ತು ಕಲ್ಕತ್ತಾದ ಬೆಥೂನ್ ಕಾಲೇಜು ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ಅಮೆರಿಕಾದ  ಲೂಸಿಯಾನ ರಾಜ್ಯ ವಿಶ್ವವಿದ್ಯಾಲಯದ ಸಂಶೋಧಕರು ಭತ್ತದ ಸಸಿಯಲ್ಲಿ ನಿರ್ಧಿಷ್ಟ ವಂಶವಾಹಿಗಳನ್ನು ಮಾರ್ಪಡಿಸುವ ಮೂಲಕ , ಸಾಮಾನ್ಯವಾಗಿ ನಿರ್ಜಲೀಕರಣದಿಂದ ಸಾಯುವ ಭತ್ತದ ಸಸ್ಯಗಳನ್ನು ಅವುಗಳಿಗೆ ಒದಗಿಸುವ ನೀರಿನಲ್ಲಿ ಹೆಚ್ಚಿನ ಲವಣಾಂಶಗಳು ಇದ್ದಾಗ್ಯೂ ಕೂಡ ಜೀವಂತವಾಗಿರಿಸಿಕೊಳ್ಳಬಹುದು ಎಂದು ತೋರಿಸಿದ್ದಾರೆ. ಈ ಅಧ್ಯಯನವು ನೇಚರ್ ಸೈಂಟಿಫಿಕ್ ರಿಪೋರ್ಟ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆಯ್ದ ಸಂತಾನೋತ್ಪತ್ತಿಯ ಮೂಲಕ ಸಸ್ಯಗಳನ್ನು ಮಾರ್ಪಡಿಸುವುದು ಅಥವಾ ಸುಧಾರಿಸುವುದು ನಮ್ಮ ನಾಗರೀಕತೆಯಷ್ಟೇ ಹಳೆಯ ವಿಧಾನವಾಗಿದೆ. ಅಧ್ಯಯನದಿಂದ ನಿರ್ಧಿಷ್ಟವಾಗಿ ಭತ್ತದ ಸಸಿಗಳನ್ನು ಬಲಿಷ್ಟವಾಗಿ ಮತ್ತು ಹೆಚ್ಚಿನ ಇಳುವರಿಯನ್ನು ಪಡೆಯಲು 10,000 ವರ್ಷಗಳಷ್ಟು ಕಾಲ ಬೆಳೆಸಬೇಕಾಗುತ್ತದೆ ಎಂದು ಕೆಲ ಅಧ್ಯಯನಗಳು ಸೂಚಿಸುತ್ತವೆ. ಸಾಂಪ್ರದಾಯಿಕ ಸಂತಾನೋತ್ಪತ್ತಿ ವಿಧಾನಗಳು, ಪ್ರತೀ ಪೀಳಿಗೆಯಲ್ಲಿ ಅತ್ಯುತ್ತಮ ಸಸ್ಯಗಳನ್ನು ಆಯ್ಕೆ ಮಾಡುವುದನ್ನು ಒಳಗೊಂಡಿದ್ದು, ಇದು ಒಂದು ಸುದೀರ್ಘ ಪ್ರಕ್ರಿಯೆಯಾಗಿದೆ. ಆದಾಗ್ಯೂ, ಆಧುನಿಕವಾದ ಜೀನ್-ಎಡಿಟಿಂಗ್ (ಅನುವಂಶಿಕಧಾತು ಪರಿಷ್ಕರಣೆ) ತಂತ್ರಜ್ಞಾನವನ್ನು ಬಳಸಿ ವಿಜ್ಞಾನಿಗಳು ಸಸ್ಯದ ಇಳುವರಿ ಅಥವಾ ಅದರ ಪರಿಸರಕ್ಕೆ ಹೊಂದಿಕೊಳ್ಳುವಿಕೆಯ ಮೇಲೆ ಪ್ರಭಾವ ಬೀರುವ ನಿರ್ದಿಷ್ಟ ಅನುವಂಶಿಕ ಧಾತುಗಳನ್ನು ಮಾರ್ಪಡಿಸುವ ಮೂಲಕ ತ್ವರಿತ ಫಲಿತಾಂಶಗಳನ್ನು ಪಡೆಯಬಹುದು. ಹೀಗೆಯೇ ಅನುವಂಶಿಕ ಧಾತುಗಳನ್ನು  ಗುರುತಿಸಲು ವಿಜ್ಞಾನಿಗಳಿಗೆ ಸಸ್ಯದ ಜೈವಿಕ ಕ್ರಿಯೆಯ ವಿವರವಾದ ಜ್ಞಾನವನ್ನು ತಿಳಿಯುವ ಅಗತ್ಯವಿದೆ.

ಇನೋಸಿಟಾಲ್ ಎಂಬ ರಸಾಯನಿಕ ಸಂಯುಕ್ತವು ಜೀವಕೋಶದ ಜೈವಿಕ ಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ಇದು ಸಸ್ಯದ ಬೆಳವಣೆಗೆಗೆ ಕಾರಣವಾಗಿದೆ. ಇನೋಸಿಟಾಲ್ ನಿಂದ ಉತ್ಪತ್ತಿಯಾಗುವ ಸಂಯುಕ್ತಗಳು ಜೀವಕೋಶದ ಒಳಗೆ ಮತ್ತು ಜೀವಕೋಶ ಹಾಗೂ ಅದರ ಪರಿಸರದ ನಡುವಿನ ಪ್ರಕ್ರಿಯೆಗಳು  ಸೇರಿದಂತೆ ಸಸ್ಯಕೋಶದ ವಿವಿಧ ಕಾರ್ಯಗಳಲ್ಲಿ ತೊಡಗಿಕೊಂಡಿವೆ.

ಸಸ್ಯಕೋಶದಲ್ಲಿನ ಇನೋಸಿಟಾಲ್ ಅಂಶದ ಸಮತೋಲನಕ್ಕೆ ಯಾವುದೇ ತೊಂದರೆಯು ಆದಲ್ಲಿ ಅದು ಸಸ್ಯವನ್ನು ಹಾನಿಗೊಳಿಸುತ್ತದೆ. ಈ ಸಮತೋಲನವನ್ನು ಕಾಡಬಲ್ಲ ಅಂಶವೆಂದರೆ ಮಣ್ಣಿನಲ್ಲಿ ಹೆಚ್ಚಿದ ಲವಣಾಂಶ. ಲವಣಾಂಶದ ಮಟ್ಟವು ಹೆಚ್ಚಾದಾಗ, ಕೋಶಗಳಲ್ಲಿ ಇನೋಸಿಟಾಲ್ ಉತ್ಪಾದನೆಯು ಸ್ಥಗಿತಗೊಳ್ಳುತ್ತದೆ ಮತ್ತು ಇದರ ಪರಿಣಾಮವಾಗಿ ಸಸ್ಯವು ಆಹಾರವನ್ನು ಉತ್ಪಾದಿಸಲು ಅಥವಾ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸಲು ಸಾಧ್ಯವಾಗದೆ ಒಣಗಿ ಸಾಯುತ್ತವೆ. ಅನೇಕ ಬಗೆಯ ಭತ್ತದ ಸಸಿಗಳ ಪ್ರಭೇದಗಳು ಇದಕ್ಕೆ ಹೊರತಾಗಿಲ್ಲ. ಆದಾಗ್ಯೂ, ಪೋರ್ಟೆರೆಸಿಯಾ ಕೊರ್ಕ್ಟಾಟಾದಂತಹ ಭತ್ತದ ಸಸಿಯ ಪ್ರಭೇದಗಳು ಹೆಚ್ಚಿನ ಲವಣಾಂಶದಲ್ಲಿಯೂ ಕೂಡ ಸುಮಾರು ಹತ್ತು ದಿನಗಳವರೆಗೆ ಬದುಕಬಲ್ಲವು.

"ಪೋರ್ಟೆರೆಸಿಯಾ ಪ್ರಭೇದವು ಹೇಗೆ ಹೆಚ್ಚಿನ ಲವಣಾಂಶವನ್ನು ಸಹಿಸುಕೊಳ್ಳುತ್ತದೆ ಎಂಬ ಕಾರ್ಯವಿಧಾನವನ್ನು ಇತರ ಭತ್ತದ ತಳಿಗಳಿಗೆ ವರ್ಗಾಹಿಸಬಹುದು ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ” ಎಂದು ಸಂಶೋಧಕರು ಹೇಳುತ್ತಾರೆ.

ಪೋರ್ಟೆರೆಸಿಯಾ  ಎರಡು ಅನುವಂಶಿಕ ಧಾತುಗಳನ್ನು  ಹೊಂದಿದ್ದು, ಅವುಗಳು ಜೀವಕೋಶಗಳಲ್ಲಿ ಇನೋಸಿಟಾಲ್ ಉತ್ಪಾದನೆಯನ್ನು ಹೆಚ್ಚಿನ ಲವಣಾಂಶದಲ್ಲಿಯೂ ಕೂಡ ಉತ್ಪಾದಿಸಸುವಲ್ಲಿ ಕಾರಣೀಭೂತವಾಗಿದೆ. ಮೊದಲನೆಯದು ಪಿಸಿಐಎನ್ 01, ಕಿಣ್ವವನ್ನು ಉತ್ಪಾದಿಸುತ್ತದೆ, ಈ ಕಿಣ್ವವು ಮೈಯೊಸಿನಾಲ್ ಎಂದು ಕರೆಯಲ್ಪಡುವ ಇನೋಸಿಟಾಲ್ ನ್ನು ಉತ್ಪಾದಿಸಿತ್ತದೆ. ಎರಡನೇ ಅನುವಂಶಿಕ ಧಾತು  ಪಿಸಿಐಎಂಟಿ 1 ಪಿನಿಟಾಲ್ ಎಂದು ಕರೆಯಲ್ಪಡುವ ಇದು ಇನೋಸಿಟಾಲ್ ಉತ್ಪನ್ನವನ್ನು ಉತ್ಪಾದಿಸುವ ಪ್ರೋಟಿನ್ ಗೆ ಸಂಕೇತಿಸುತ್ತದೆ.

ಪ್ರಸ್ತುತ ಅಧ್ಯಯನದಲ್ಲಿ, ಸಂಶೋಧಕರು ಈ ಎರಡು ಅನುವಂಶಿಕ ಧಾತುಗಳನ್ನು  ಐಆರ್ 64 ಎನ್ನುವ ಪ್ರಭೇದದ 20 ದಿನಗಳ ಭತ್ತದ ಸಸಿಗಳಿಗೆ ವರ್ಗಾಹಿಸಿದರು. ಇದು ಹೆಚ್ಚಿನ ಇಳುವರಿಯನ್ನು ನೀಡಿತು ಆದರೆ ಹೆಚ್ಚಿನ ಲವಣಾಂಶವನ್ನು ಸಹಿಸುವ ಶಕ್ತಿ ಹೊಂದಿರಲಿಲ್ಲ. ಸಂಶೋಧಕರು ಅನುವಂಶಿಕ ಧಾತುಗಳನ್ನು ಮಾರ್ಪಡಿಸಿದ ಸಸ್ಯಗಳನ್ನು, ಮಾರ್ಪಡಿಸದ ಐಆರ್ 64 ಸಸ್ಯಗಳೊಂದಿಗೆ ಮತ್ತು ಸಾಮಾನ್ಯವಾಗಿ ಇನೋಸಿಟಾಲ್ ಉತ್ಪಾದಿಸುವ ಅನುವಂಶಿಕ ಧಾತುಗಳನ್ನು ಹೆಚ್ಚುವರಿಯಾಗಿ ಹೊಂದಿರುವ ಸಸ್ಯಗಳೊಂದಿಗೆ ಹೋಲಿಸಿದ್ದಾರೆ.

ಹೆಚ್ಚಿನ ಲವಣಾಂಶವನ್ನು ಸಹಿಸಿಕೊಳ್ಳುವ ಅನುವಂಶಿಕ ಧಾತುಗಳನ್ನು ಹೊಂದಿರುವ ಸಸ್ಯಗಳು 18 ಪಿಪಿಎಂ (ಗ್ರಾಮ್ /ಲೀಟರ್) ನಷ್ಟು ಲವಣಾಂಶವನ್ನು ಸುಮಾರು ಹತ್ತು ದಿನಗಳವರೆಗೂ ತಡೆದುಕೊಳ್ಳಬಲ್ಲವು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಲವಣಾಂಶವು ಸಮುದ್ರದ ನೀರಿನ ಲವಣಾಂಶದ ಅರ್ಧದಷ್ಟಕ್ಕೆ ಸಮಾನವಾಗಿರುತ್ತದೆ. ನಿಯಮಿತವಾದ ನೀರು ಸರಬರಾಜನ್ನು ಮಾಡಿದಾಗ ಮಾರ್ಪಡಿಸಿದ ಸಸ್ಯಗಳು ಆರೋಗ್ಯಕರ ಬೆಳವಣೆಗೆಯನ್ನು ಹೊಂದಿದ್ದು ಮತ್ತೊಂದೆಡೆ ಮಾರ್ಪಡಿಸದ ಸಸ್ಯಗಳು ಒಣಗಿ ಸತ್ತಿದ್ದವು.

ಅನುವಂಶಿಕ ಧಾತುಗಳನ್ನು ಮಾರ್ಪಡಿಸಿದ ಸಸ್ಯಗಳು ಮಾರ್ಪಡಿಸದ ಸಸ್ಯಗಳಿಗಿಂತ ಉದ್ದವಾದ (ಶೇ.300-400 ರಷ್ಟು) ಮತ್ತು ಉತ್ತಮವಾಗಿ ಕವಲೊಡೆದ ಬೇರುಗಳನ್ನು ಎಲ್ಲ ಸಾಂದ್ರತೆ ಲವಣಾಂಶದ ಮಟ್ಟದಲ್ಲಿ ಹೊಂದಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮಾರ್ಪಡಿಸಿದ ಸಸ್ಯಗಳು ಹೆಚ್ಚಿನ ಲವಣಾಂಶದಲ್ಲಿ ಕ್ಲೋರೋಫಿಲ್ ಅಂಶವನ್ನು ಕೂಡ 10 ದಿನಗಳವರೆಗೂ ಶೇ.50 ರಷ್ಟು ಉತ್ತಮವಾಗಿ ಉಳಿಸಿಕೊಳ್ಳಬಲ್ಲವು ಆದರೆ ಮಾರ್ಪಡಿಸದ ಸಸ್ಯಗಳು ಶೇ.90 ರಷ್ಟು ಕ್ಲೋರೋಫಿಲ್ ಅಂಶವನ್ನು ಕಳೆದುಕೊಳ್ಳುತ್ತವೆ. ಇದಲ್ಲದೆ, ಮಾರ್ಪಡಿಸಿದ ಸಸ್ಯಗಳ ನಾಲ್ಕನೇ ಮತ್ತು ಹೆಚ್ಚಿನ ಪೀಳಿಗೆಯಲ್ಲೂ ಕೂಡ ಉತ್ತಮ ಪ್ರಮಾಣದ ಮತ್ತು ಒಳ್ಳೆಯ ತೂಕದ ಬೀಜಗಳನ್ನು ಉತ್ಪಾದಿಸಬಲ್ಲವು ಮತ್ತು ಇದು  ಮಾರ್ಪಡಿಸದ ಸಸ್ಯಗಳು ಸಾಮಾನ್ಯ ಸ್ಥಿತಿಯಲ್ಲಿ ಬೆಳೆದಾಗ ಕೊಡುವ ಇಳುವರಿಯಷ್ಟಿದೆ.

ಕುತೂಹಲಕಾರಿಯೆಂದರೆ, ಕೇವಲ ಪಿಸಿಐಎನ್ 01 ವಂಶವಾಹಿ ಒಂದನ್ನೇ ಹೊಂದಿರುವ ಸಸ್ಯಗಳು ಅತೀ ಹೆಚ್ಚಿನ ಲವಣಾಂಶದಲ್ಲಿ ಪಿಸಿಐಎಮ್ ಟಿ 1 ವಂಶವಾಹಿ ಮತ್ತು ಈ ಎರಡೂ ಅನುವಂಶಿಕ ಧಾತುಗಳನ್ನು ಹೊಂದಿರುವ ಸಸ್ಯಗಳನ್ನು ಮೀರಿಸಿ ಉತ್ತಮವಾಗಿದ್ದವು ಹಾಗೂ ಈ ಸಸ್ಯಗಳು ನಾಲ್ಕನೇ ಮತ್ತು ಹೆಚ್ಚಿನ ಪೀಳಿಗೆಯಲ್ಲೂ ಉತ್ತಮ ಇಳುವರಿಯನ್ನು ಹೊಂದಿದ್ದವು.

ಈ ಎಲ್ಲ ಅಂಶಗಳನ್ನು ಅವಲೋಕಿಸಿದಾಗ ಇನೋಸಿಟಾಲ್ ಅಂಶವು ಹೆಚ್ಚಿನ ಲವಣಾಂಶವನ್ನು ಸಹಿಸಬಲ್ಲದು ಮತ್ತು ಮಾರ್ಪಡಿಸದ ಸಸ್ಯಗಳು ಚೇತರಿಕೆಯಲ್ಲಿ ತೊಡಗಿವೆ ಎಂದು ಸೂಚಿಸುತ್ತದೆ.

ಸಸ್ಯಗಳಲ್ಲಿನ ಅನುವಂಶಿಕ ಧಾತುಗಳನ್ನು  ಮಾರ್ಪಡಿಸುವುದು ಅದರಲ್ಲೂ ವಿಶೇಷವಾಗಿ ಆಹಾರ ಬೆಳೆಗಳು ಎಂದರೆ ಸ್ವಲ್ಪ ಅಪಾಯಕಾರಿಯೂ ಕೂಡ ಏಕೆಂದರೆ ಸಸ್ಯದಲ್ಲಿ ಅನುವಂಶಿಕ ಧಾತುಗಳ ನಡುವೆ ಅಥವಾ ಅದರ ಪರಿಸರದೊಂದಿಗೆ ಸಸ್ಯಗಳು ಅನಿರೀಕ್ಷಿತವಾಗಿ ಪರಸ್ಪರ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ತಳೀಯವಾಗಿ ಮಾರ್ಪಡಿಸದ ಬೆಳೆಗಳನ್ನು ಬಳಕೆಗಾಗಿ ಪರಿಚಯಿಸುವ ಮೊದಲು ವ್ಯಾಪಕವಾಗಿ ಪರೀಕ್ಷಿಸಲಾಗುತ್ತದೆ.

ಅಧ್ಯಯನದಲ್ಲಿ ಪರಿಗಣಿಸಲಾದ ಎರಡೂ ಅನುವಂಶಿಕ ಧಾತುಗಳು ಅಲರ್ಜಿ ಉಂಟುಮಾಡದ ಗುಣಗಳನ್ನು ಹೊಂದಿವೆ” ಎಂದು ಸಂಶೋಧಕರು ಹೇಳುತ್ತಾರೆ ಮತ್ತು ರೋಗಗಳಿಗೆ ಕಾರಣವಾಗುವ ಸಂಯುಕ್ತಗಳ ಉತ್ಪಾದನೆಯಲ್ಲಿ ಯಾವುದೇ ಅನುವಂಶಿಕ ಧಾತುಗಳು ಭಾಗಿಯಾಗಿಲ್ಲ ಎಂದು ವಿವರಿಸುತ್ತಾರೆ.

ಪರಿಸರದಲ್ಲಿ ಹವಾಮಾನ ವೈಪರೀತ್ಯಗಳು ಹೆಚ್ಚು ಸರ್ವೇಸಾಮಾನ್ಯವಾಗುತ್ತಿದ್ದಂತೆ, ಬರಗಾಲವನ್ನು ಸಹಿಸಿಕೊಳ್ಳುವಲ್ಲಿ, ಮಣ್ಣಿನಲ್ಲಿ ಹೆಚ್ಚಿದ ಲವಣಾಂಶಗಳನ್ನು ತಡೆದುಕೊಳ್ಳಲು ಮತ್ತು ಬೆಳೆ-ವೈಫಲ್ಯಗಳನ್ನು ತಡೆಗಟ್ಟುವಲ್ಲಿ, ಬೆಳೆಗಳನ್ನು ಮಾರ್ಪಡಿಸುವುದು ಅತ್ಯಂತ ಅವಶ್ಯಕವಾಗಿದೆ.