ಯುರೇನಿಯಂ ಗಿರಣಿಯಾಡಿದ ನಂತರ ಉಳಿಯುವ, ಕೆಸರಿನ ಗಸಿಯನ್ನು ಸುರಕ್ಷಿತವಾದ ಹಾಗೂ, ಗಟ್ಟಿಯಾದ ಇಟ್ಟಿಗೆಗಳನ್ನಾಗಿ ಮಾಡಿ, ಕಟ್ಟಡ ನಿರ್ಮಾಣದಲ್ಲಿ ಬಳಸುವುದು.
Engineering
ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.
ರಾಪಿಡ್ ಈಟಿ: ತ್ವರಿತವಾಗಿ ಕ್ಯಾನ್ಸರ್ ಬಯಾಪ್ಸಿ ಮಾಡಲು ಹೊಸ ವಿಧಾನ ಒಳಗೊಂಡ ನವೀನ ಸಾಧನವನ್ನು ರೂಪಿಸಿರುವ ಐಐಎಸ್ಸಿ ವಿಜ್ಞಾನಿಗಳು
ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
ಸ್ಥಳ ಆಧಾರಿತ ಸೇವೆಗಳು ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗವಾಗಿದೆ. ವಿಶೇಷವಾಗಿ ಸ್ಮಾರ್ಟ್ ಫೋನ್ ಮೂಲಕ ಬಳಸುವ ಗೂಗಲ್ ಮ್ಯಾಪ್ಸ್, ಓಲಾ, ಉಬರ್ ನಂತಹ ಆಪ್ ಗಳು ಇಂತಹ ಸ್ಥಳ ಆಧಾರಿತ ಸೇವೆಯ ಮೇಲೆ ಅವಲಂಬಿತವಿವಾಗಿದೆ. ಈ ಸೇವೆಯನ್ನು ಕಲ್ಪಿಸುವುದಕ್ಕೆ ಪೂರಕವಾದ ಅಂಶವೆಂದರೆ ಅಮೇರಿಕಾ ದೇಶಕ್ಕೆ ಸೇರಿದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್), ರಷ್ಯಾದ ಗ್ಲೊನಾಸ್ (GLONAS), ಅಥವಾ ಯುರೋಪ್ ನ ಗೆಲಿಲಿಯೋ (Galileo) ಎಂಬ ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ.
ಹವಾಮಾನ ವೈಪರೀತ್ಯದಿಂದ ಉಂಟಾಗುವ ಅನೇಕ ವಿಪತ್ತುಗಳ ಪೈಕಿ, ಮಣ್ಣಿನ ಲವಣಾಂಶದ ಹೆಚ್ಚಳವೂ ಒಂದು. 2050 ರ ಹೊತ್ತಿಗೆ, ಪ್ರಪಂಚದಾದ್ಯಂತ ಲಭ್ಯವಿರುವ ಇಂದಿನ ಕೃಷಿಯೋಗ್ಯ ಭೂಮಿಯ ಅರ್ಧದಷ್ಟು ಭಾಗವು ಲವಣಾಂಶದ ಏರುಪೇರಿನಿಂದ ಪ್ರಭಾವಿತವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಲವಣಾಂಶದ ಹೆಚ್ಚಳವು, ಭಾರತದ ಭತ್ತದ ಬಟ್ಟಲೆಂದೇ ಪ್ರಸಿದ್ಧವಾಗಿರುವ ಸಿಂಧೂ - ಗಂಗಾ ನದಿಗಳ ಒಡಲಿನ ಬಯಲು ಪ್ರದೇಶಕ್ಕೂ ಅಪಾರವಾದ ಹಾನಿ ಮಾಡಲಿದ್ದು, ಬೆಳೆ ಇಳುವರಿಯಲ್ಲಿ ಸುಮಾರು 45% ನಷ್ಟವನ್ನು ನಿರೀಕ್ಷಿಸಬಹುದಾಗಿದೆ. ಲವಣಾಂಶವು ಹೆಚ್ಚಾದಾಗ, ಸಸ್ಯಗಳು ಕಡಿಮೆ ನೀರನ್ನು ಹೀರಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತವೆ; ಅದು ಅವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಭೂಮಿಯ ಮೇಲೆ ಪರಮಾಣು ಶಸ್ತ್ರಾಸ್ತ್ರಗಳ ದುರ್ಬಳಕೆ ಅತ್ಯಂತ ವಿನಾಶಕಾರಿಯಾಗಿದ್ದು ಅವುಗಳು ಸ್ಫೋಟಗೊಂಡ ಸ್ಥಳದ ಸುತ್ತಮುತ್ತ 3 ಕಿಲೊಮೀಟರ್ ವ್ಯಾಪ್ತಿಯೊಳಗಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುವಂತ ಶಕ್ತಿಯನ್ನು ಹೊಂದಿವೆ. ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅಯಾನೀಕರಿಸುವ ವಿಕಿರಣಗಳು ನಿರ್ದಿಷ್ಟ ಪ್ರದೇಶವನ್ನು ಹಾನಿಗೊಳಿಸುವ ಶಕ್ತಿಯನ್ನು ಹೊಂದಿದ್ದು, ದೀರ್ಘಾವಧಿಯಲ್ಲಿ ಆ ಪ್ರದೇಶವು ಬಾಧಿತಗೊಳ್ಳುವಂತೆ ಮಾಡುತ್ತವೆ ಅಲ್ಲದೇ ಆ ಇಡೀ ಪ್ರದೇಶವನ್ನು ವಾಸಕ್ಕೆ ಯೋಗ್ಯವಲ್ಲದಂತೆ ಮಾಡುತ್ತವೆ- ಎರಡನೇ ವಿಶ್ವ ಯುದ್ದದ ಸಂದರ್ಭದಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ನಡೆದ ದುರಂತ ಬಾಂಬ್ ಸ್ಫೋಟಗಳ ರೀತಿಯಲ್ಲಿಯೇ- ಆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ.
ಭಾರತ - ಜಗತ್ತಿನ ಅತೀ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗಳಲ್ಲಿ ಅಗ್ರ ರಾಷ್ಟ್ರ. ಜೊತೆಗೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ರಾಷ್ಟ್ರ. ಆದರೆ ದುರದೃಷ್ಟದ ಸಂಗತಿಯೇನು ಗೊತ್ತೆ? ಭಾರತದ ಸುಮಾರು 15% ಜನ ಇಂದಿಗೂ ಕತ್ತಲೆಯಲ್ಲೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕೇವಲ ಸರ್ಕಾರ ಎಂದರೆ ತಪ್ಪಾಗಬಹುದು. ಭಾರತದ ವಿದ್ಯುತ್ ಪೂರೈಕೆಗೆ ಒಂದೆಡೆ ಅರ್ಥಿಕ ಹಾಗೂ ನೈಸರ್ಗಿಕ ಸಂಪನ್ಮೂಲದ ಕೊರತೆ ಇದ್ದರೆ, ಇನ್ನೊಂದೆಡೆ ಪರಿಸರ ರಕ್ಷಣೆಯ ದೊಡ್ಡ ಜವಾಬ್ದಾರಿಯೂ ತಡೆಯಾಗಿ ನಿಂತಿದೆ. ವಿಶ್ವದ ಅನೇಕ ದೇಶಗಳು ಈಗಾಗಲೆ ನವೀಕರಿಸಬಹುದಾದ ಇಂಧನಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳತೊಡಗಿವೆ.
ಇತ್ತೀಚೆಗೆ ಭಾರತದೊಳಗೆ ಆಲಿವ್ ರಿಡ್ಲೆ ಆಮೆಗಳ ಮರುಪ್ರವೇಶವು, ವಲಸೆ ಬಂದ ಪ್ರಾಣಿಗಳಿಗೆ ಭಾರತೀಯ ಕರಾವಳಿಗಳು ಅಚ್ಚುಮೆಚ್ಚಿನ ತಾಣ ಎಂಬುದನ್ನು ತೋರಿಸಿಕೊಟ್ಟಿದೆ. ಭಾರತದ ೭೫೦೦ ಕಿಲೋಮೀಟರ್ ಉದ್ದದ ಅತಿದೊಡ್ಡ ಕರಾವಳಿಯು, ವಿವಿಧ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ; ದೇಶದ ಒಟ್ಟು ಜನಸಂಖ್ಯೆಯ ಸುಮಾರು ೪೦% ಜನರು, ಇದೇ ಕರಾವಳಿಯುದ್ದಕ್ಕೂ ವಾಸಿಸುತ್ತಿದ್ದಾರೆ. ಕರಾವಳಿಯುದ್ದಕ್ಕೂ ನಡೆಯುವ ಅಭಿವೃದ್ಧಿ ಚಟುವಟಿಕೆಗಳು, ಕರಾವಳಿಯ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ.