“ಬಯೋಲೂಮಿನಿಸೆನ್ಸ್” ಅಥವಾ ಜೈವಿಕ ಬೆಳಕು ಎನ್ನುವುದು ಒಂದು ಜೀವಿಯ ಬೆಳಕು ಉತ್ಪಾದಿಸುವ ಸಾಮರ್ಥ್ಯ. ಉದಾಹರಣೆಗೆ, ಫೈರ್ ಫ್ಲೈ ಅಥವಾ ಮಿಣುಕುಹುಳ, ಬಯೋಲೂಮಿನಿಸೆನ್ಸ್ ಅನ್ನು ಸಂಯೋಗದ ಕರೆಯಾಗಿ ಬಳಸುತ್ತದೆ ಮತ್ತು ಹೆಣ್ಣು ಹುಳಗಳನ್ನು ಅದರ ಹೊಳಪಿನಿಂದ ಆಕರ್ಷಿಸುತ್ತದೆ. ಸಾಗರದಲ್ಲಿ, ಮೆಸೊಪೆಲಾಜಿಕ್ ವಲಯದಲ್ಲಿ 200–1000 ಮೀಟರ್ ಆಳದಲ್ಲಿ ಕಂಡುಬರುವ ಸುಮಾರು 90% ಮೀನು ಮತ್ತು ಕಠಿಣಚರ್ಮಿ ಪ್ರಭೇದಗಳು ಬೆಳಕನ್ನು ತಮ್ಮ ದೇಹದಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.
ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.
ಬೆಂಗಳೂರು / Jul 6, 2022