ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಭಾರತಕ್ಕೆ ಮೆಣಸಿನ ಆಗಮನದ ಒಂದು ವಿಹಂಗಮ ನೋಟ!

Read time: 1 min
ಬೆಂಗಳೂರು
4 Sep 2019
ಭಾರತಕ್ಕೆ ಮೆಣಸಿನ ಆಗಮನದ ಒಂದು ವಿಹಂಗಮ ನೋಟ!

“ಬ್ಲಾಕ್ ಗೋಲ್ಡ್” ಅಥವಾ ಕಪ್ಪು ಚಿನ್ನವೆಂದೇ ಕರೆಯಲಾಗುವ ಮೆಣಸು, ಆರ್ಥಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ. ಅಲ್ಲದೇ, ಇದರ ಬಗ್ಗೆ ಸಂಶೋಧನೆ ನಡೆಸಲು ಸಂಶೋಧಕರಿಗೆ ಇದು ಒಂದು ಒಳ್ಳೆಯ ವಿಷಯ. ಈ ಮೆಣಸಿನ ಭೌಗೋಳಿಕ ಮೂಲವನ್ನು ಪತ್ತೆ ಮಾಡಲು ಸಂಶೋಧಕರು ತೀವ್ರವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಭಾರತ ಹಾಗೂ ಗೋಂಡ್ವಾನ ಭೂರಾಶಿಗೆ ಐತಿಹಾಸಿಕ ಸಂಬಂಧವಿದೆಯೆಂದು ಈ ಭಾಗಗಳಿನ ಜೀವವೈವಿಧ್ಯತೆ, ಮುಖ್ಯವಾಗಿ ಪ್ರಭೇದಗಳಲ್ಲಿ ಇರುವ ಹೋಲಿಕೆಯೇ ಈ ಸಂಶೋಧನೆಗೆ ಮುಖ್ಯ ಕಾರಣ. ಅದರಲ್ಲೂ “ಪೈಪರ್” ಅಥವಾ “ಪೆಪ್ಪರ್”  ಪ್ರಭೇದಗಳು  ೬೬-೧೦೦.೫ ದಶಲಕ್ಷ ವರ್ಷಗಳ ಹಿಂದೆ ಈ ಎರಡೂ ಭೂರಾಶಿಗಳಲ್ಲಿ ಬೇರೂರಿವೆಯೆಂದು ಹೇಳಲಾಗಿದೆ.

ಮೆಣಸು “ಪೈಪರೆಸೀ” ಎನ್ನುವ ಕುಟುಂಬದ ಸದಸ್ಯ. ಈ ಕುಟುಂಬದಲ್ಲಿ ೧೫೦೦ಕ್ಕೂ ಅಧಿಕ ಮೆಣಸುಗಳ ಪ್ರಭೇದಗಳು ಜಾಗತಿಕವಾಗಿ ಕಂಡುಬಂದಿದ್ದು, ಮಧ್ಯ-ಅಮೇರಿಕಾದ ಉಷ್ಣವಲಯ ಪ್ರದೇಶದಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿದೆ. ಸುಮಾರು ೬೦೦ ಜಾತಿಯ ಮೆಣಸಿನ ಪ್ರಭೇದಗಳು ದಕ್ಷಿಣ ಏಷಿಯಾದಲ್ಲಿ ಕಂಡುಬಂದಿದೆ. ಇದರ ವಿಕಸನ, ವಂಶ ವೃಕ್ಷ,  ಮತ್ತು ಭಾರತದ ಮೆಣಸುಗಳ ಜೊತೆಗಿರುವ ಸಂಭಂದ ಹೀಗೆ ಇದೆಲ್ಲದರ ಪರಿಶೋಧನೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇದೆ. 

ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ಇಕಾಲಜಿ ಅಂಡ್ ದಿ ಏನ್ವೈರ್ನಮೆಂಟ್ (ಎಟ್ರಿ), ಕಾನ್ಕಾರ್ಡಿಯಾ ವಿಶ್ವವಿದ್ಯಾಲಯ, ಕೆನಡಾ, ಕ್ವಿಬೆಕ್ ಸೆಂಟರ್ ಫಾರ್ ಬಯೋಡೈವರ್ಸಿಟಿ ಸೈನ್ಸ್, ಮತ್ತು ಜವಾಹರ್ಲಾಲ್ ನೆಹರು ಟ್ರಾಪಿಕಲ್ ಬೊಟಾನಿಕಲ್ ಗಾರ್ಡನ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್, ಕೇರಳದ ಸಂಶೋಧಕರು ಮೆಣಸಿನ ವಂಶ ವೃಕ್ಷದ ಮೇಲೆ ವಿಸ್ತಾರವಾದ ಅಧ್ಯಯನ ನಡೆಸಿ, ಮೆಣಸಿನ ಪ್ರಭೇದಗಳಿಗೆ ಭಾರತ ಹಾಗೂ ಗೊಂಡ್ವಾನ ಭೂರಾಶಿಯ ಸಂಬಂಧದ ಮೂಲವನ್ನು ಪತ್ತೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಸಸ್ಯ ಜೀವವರ್ಗೀಕರಣಶಾಸ್ತ್ರ ಸಂಘ, ಜೈವಿಕ ತಂತ್ರಜ್ಞಾನ ವಿಭಾಗ, ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗ ಮತ್ತು ವಿಜ್ಞಾನ ಮತ್ತು ತಂತ್ರಜ್ಜಾನ ಸಂಶೋಧನಾ ಮಂಡಳಿ ಇಂದ ಪ್ರಾಯೋಜಿತವಾದ ಈ ಅಧ್ಯಯನ ಅಂತರರಾಷ್ಟ್ರೀಯ ಪತ್ರಿಕೆಯಾದ ಮಾಲಿಕ್ಯುಲರ್ ಫೈಲೋಜೆನೆಟಿಕ್ಸ್ ಅಂಡ್ ಎವೊಲ್ಯೂಷನ್ ನಲ್ಲಿ ಪ್ರಕಟವಾಗಿದೆ.

"ಪೈಪರ್ ಅಥವಾ ಮೆಣಸಿನ ಜಾತಿ, ಹೂವುಬಿಡುವ ಸಸ್ಯಗಳ (ಆಂಜಿಯೋಸ್ಪರ್ಮ್) ಕ್ಲಿಷ್ಟಕರ ಜೀವವರ್ಗೀಕರಣ ಪ್ರಕ್ರಿಯೆಯನ್ನು ಹೊಂದಿರುವ ಒಂದು ದೊಡ್ಡ ಗುಂಪು. ಇದರ ಜೀವವರ್ಗೀಕರಣ ಆರ್ಥಿಕವಾಗಿಯೂ ಹಾಗೂ ವೈದ್ಯಕೀಯವಾಗಿಯೂ ಮುಖ್ಯ, ಹಾಗಾಗಿ ಮೆಣಸಿನ ಸಂರಕ್ಷಣಾ ಕ್ರಮಗಳೂ ಅನಿವಾರ್ಯ” ಎಂದು ಈ ಅಧ್ಯಯನದ ಲೇಖಕರಾದ ಸಂದೀಪ್ ಸೇನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.  

ಪರ್ಯಾಯ ದ್ವೀಪ ಅಥವಾ ಅರೆತೆವರಿನ (ಪೆನಿನ್ಸುಲಾರ್) ಮೆಣಸಿನ ಮೂಲ ಗೊಂಡ್ವಾನವೇ ಅಥವಾ ಮಲಯನ್ ದೇಶವೇ ಎಂಬುವುದು ಅಸ್ಪಷ್ಟವಾದ ವಿಷಯ. ಈ ಮೆಣಸಿನ ಕುಲ ಗೊಂಡ್ವಾನದಿಂದ ಭಾರತ ಉಪಖಂಡ ಮೂಲವಾಗಿ ಯೂರೇಶಿಯಾ ಭೂರಾಶಿಗೆ ಪಯಣ ಬೆಳೆಸಿತೆಂಬ ಹಲವಾರು ಊಹಾಪೋಹಗಳ ಹೇಳಿಕೆ. ಆದರೆ, ಮೊಟ್ಟಮೊದಲ ಬಾರಿಗೆ ಸಂಶೋಧಕರ ತಂಡವು ಮೆಣಸಿನ ಕುಲದ ವಂಶವೃಕ್ಷದ ನಕ್ಷೆಯನ್ನು ಮರುರಚಿಸಿ, ಅರೆತೆವರಿನ ಭಾರತಕ್ಕೆ ಇದರ ಆಗಮನದ ಬಗ್ಗೆ ವರ್ಣಿಸಿ, ಭಾರತದ ಪ್ರಭೇದಗಳು ಮತ್ತು ಆಫ್ರಿಕಾದ ಪ್ರಭೇದಗಳು ಹೇಗೆ ಬೇರೆ ಬೇರೆ ಪ್ರಭೇದಗಳಾಗಿ ವಿಕಾಸನಗೊಂಡಿತೆಂಬುದರ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ. ಇಂತಹ ವೈವಿಧ್ಯೀಕರಣಕ್ಕೆ,  ಪ್ರಸರಣ (ದೊಡ್ಡ ಪ್ರದೇಶದಲ್ಲಿ ವಿಭಜನೆ ಮತ್ತು ಹರಡುವಿಕೆ), ಭೌತಿಕ ತಡೆಗೋಡೆಗಳಿಂದ ಉಂಟಾದ ಭೌಗೋಳಿಕ ವಿಭಜನೆ, ಮೂಲ ಸ್ಥಳದಲ್ಲಿ ವಿಕಿರಣ (ಒಂದೇ ಜಾಗದಲ್ಲಿ ಪ್ರಭೇದಗಳ ವಿಭಜನೆ) ಇದಕ್ಕೆ ಮುಖ್ಯ ಕಾರಣಗಳೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. 

ಸಂಶೋಧಕರ ತಂಡವು ಪೂರ್ವ ಭಾಗದ ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ ಮತ್ತು ಅಂಡಮಾನ್ ಹಾಗು ನಿಕೋಬಾರ್ ದ್ವೀಪಗಳಂತಹ ಜಾಗಗಳಿಂದ ಮೆಣಸಿನ ಗಿಡಗಳ ಎಲೆಗಳನ್ನು ಸಂಗ್ರಹಿಸಿದ್ದಾರೆ. ಈ ಸಂಗ್ರಹಣೆಯಲ್ಲಿ ೩ ಮೆಣಸು ಪ್ರಭೇದಗಳನ್ನು ಪಶ್ಚಿಮ ಘಟ್ಟಗಳ ಕಾಡುಗಳಿಗೆ ಸ್ವಂತವೆಂದು ಹೇಳಲಾಗುತ್ತಿದೆ. 

ಸಂಶೋಧಕರು ಸಂಗ್ರಹಿಸಿದ ಮಾದರಿಗಳ ಅನುವಂಶಿಕ ಪರೀಕ್ಷೆ ಮಾಡಿ ಮೆಣಸು ಪ್ರಭೇದಗಳನ್ನು ೩ ಮುಖ್ಯ ವಿಭಾಗಗಳಾಗಿ ವಿಂಗಡಿಸಿದ್ದಾರೆ. ಬಹುತೇಕ, ಈ ಮೆಣಸು ಪ್ರಭೇದಗಳು ಪೂರ್ವ-ಗೊಂಡ್ವಾನ ಕಾಲದ ಮೆಣಸು ಗಿಡಗಳನ್ನು ಹೋಲುತ್ತವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಗೊಂಡ್ವಾನ ಖಂಡಕ್ಕೆ ಸೇರಿದ ಏಷಿಯಾದ ಉಶ್ಣವಲಯ ಪ್ರದೇಶಗಳು (ಹಿಮಾಲಯ ಪರ್ವತಶ್ರೇಣಿ, ಚೀನಾ, ಮಲೇಶಿಯ, ಇಂಡೋನೇಶಿಯಾ, ಫಿಲಿಪೀನ್ಸ್ ಜೊತೆಗೆ ಅಂಡಮಾನ್ ಹಾಗು ನಿಕೋಬಾರ್ ದ್ವೀಪಗಳು), ದಕ್ಷಿಣ ಪೆಸಿಫಿಕ್ (ಪೆಸಿಫಿಕ್ ದ್ವೀಪಗಳು ಹಾಗೂ ನ್ಯೂ ಝೀಲಂಡ್) ಮತ್ತು ನವಉಷ್ಣವಲಯದ (ದಕ್ಷಿಣ, ನಡು ಮತ್ತು ಉತ್ತರ ಅಮೇರಿಕ) ದೇಶಗಳಲ್ಲಿ ಈ ಮೆಣಸಿನ ಪ್ರಭೇದಗಳು ವ್ಯಾಪಕವಾಗಿ ಕಾಣಸಿಗುತ್ತವೆ.

ಈ ಮೂರೂ ವಿಭಾಗಗಳ ಮೆಣಸಿನ ಪ್ರಭೇದಗಳು ಆಗ್ನೇಯ ಏಷಿಯಾದ ದೇಶಗಳಲ್ಲಿ ಇರುವಂತಹ ಮೆಣಸಿನ ಪ್ರಭೇದಗಳು ಸಂಪೂರ್ಣವಾಗಿ ಬೇರೆ ಬೇರೆಯೆಂದು ಸಂಶೋಧಕರು ದೃಢಪಡಿಸಿದ್ದಾರೆ. ಈ ಮೆಣಸಿನ  ೭೯ ದಶಲಕ್ಷ ವರ್ಷಗಳ ಹಿಂದಿನ ಕ್ರಟೇಶಿಯಸ್ ಕಾಲದ್ದಾಗಿದ್ದು, ಈ ಪೈಪರ್ ಕುಟುಂಬಕ್ಕೆ ಸೇರಿದ ಬೇರೆ ಮೆಣಸಿನ ಪ್ರಭೇದಗೆಳೆಲ್ಲವೂ  ೫೬-೩೩.೯ ದಶಲಕ್ಷ ವರ್ಷಗಳ ಹಿಂದಿನ ಇಯೋಸೀನ್ ಕಾಲದಿಂದಲೇ ಭಾರತದಲ್ಲಿ ಬೇರೂರಿದೆ. ಮೆಣಸು  ಯುರೇಷಿಯಾ ಹಾಗೂ ಆಫ್ರಿಕಾ ಮಧ್ಯೆ ಇರುವ ಅರೇಬಿಯನ್ ಪರ್ಯಾಯ ದ್ವೀಪ ಮಾರ್ಗವಾಗಿ ವಲಸೆ ಬಂದಿರುವುದೆಂದು ವಂಶವೃಕ್ಷ ವಿಶ್ಲೇಷಣೆ ಸ್ಪಷ್ಟವಾಗಿ ತಿಳಿಸುತ್ತದೆ. ಭಾರತ ಮತ್ತು ಯುರೇಷಿಯಾ ಭೂರಾಶಿಗಳು ಸುಮಾರು ೫೫-೪೨ದಶಲಕ್ಷ ವರ್ಷಗಳ ಹಿಂದೆ ಘರ್ಷಣೆಯಾದಾಗ ಗೊಂಡ್ವಾನ ನೆಲವು ಪ್ರತ್ಯೇಕ ಭಾಗಗಳಾಗಿ ಎರಡೂ ಭೂರಾಶಿಗಳ ನಡುವೆ ಗಿಡಮರಗಳ ಮತ್ತು ಪ್ರಾಣಿಗಳ ಪ್ರಭೇದಗಳು ವಿನಿಮಯವಾಗಿರಬಹುದು ಎಂದು ಸಂಶೋಧಕರು ಅಂದಾಜಿಸುತ್ತಾರೆ.

೨೦-೧೪ ದಶಲಕ್ಷ ವರ್ಷಗಳ ಪೂರ್ವ ಆಗ್ನೇಯ ಏಷ್ಯಾದಿಂದ ಆಫ್ರಿಕಾ ಖಂಡಕ್ಕೆ (ಆಫ್ರಿಕಾ ಮತ್ತು ಯುರೇಷಿಯಾ, ಅರೇಬಿಯನ್ ಪರ್ಯಾಯ ದ್ವೀಪದ ಮೂಲಕ ಸೇರ್ಪಡೆಯಾದಾಗ) ಮಯೋಸೀನ್ ಕಾಲದಲ್ಲಿ, ೨ ಮೆಣಸು ಪ್ರಭೇದಗಳು - ಪೈಪರ್ ಬೋರ್ಬೊನೆನ್ಸ್, ಮತ್ತು ಪೈಪರ್ ಗಿನೆನ್ಸ್ ಪ್ರಸಾರಣವಾಗಿದ್ದವು. ಭೂರಾಶಿಗಳು ಘರ್ಷಣೆಯಾದಾಗ, ಮೆಣಸು ಪ್ರಭೇದಗಳು ಆಗ್ನೇಯ ಏಷ್ಯಾ ಭೂರಾಶಿಯಿಂದ ಭಾರತಕ್ಕೆ ಸೇರ್ಪಡೆಯಾಗಿ, ಭಾರತದಲ್ಲೇ  ಪ್ರಭೇದಗಳ ಮರುವೈವಿಧ್ಯೀಕರಣವಾಗಿ, ಪುನಃ ಆಗ್ನೇಯ ಏಷ್ಯಾ ದೇಶಗಳಲ್ಲಿ ಪ್ರಸಾರಣವಾಗಿವೆ ಎಂದು ಸಂಶೋಧಕರು ಹೇಳುತ್ತಾರೆ.

ಪೈಪರ್ ನಿಗ್ರಮ್ (ವ್ಯಾಪಕವಾಗಿ ಬೆಳೆಸಲಾಗುವ ಮೆಣಸಿನ ಒಂದು ಪ್ರಭೇದ) ಅಂತ್ಯ-ಮಯೋಸೀನ್ ಕಾಲದ ೬.೩ ದಶಲಕ್ಷ ವರ್ಷಗಳ ಪೂರ್ವ ಪಶ್ಚಿಮ ಘಟ್ಟಗಳಲ್ಲಿ ವಿಕಾಸನಗೊಂಡಿತೆಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಆರ್ಥಿಕ ಮೌಲ್ಯವಿರುವ ಈ ಪ್ರಭೇದದ ಮೂಲದ ಮಹತ್ವ ಮತ್ತು ಇದರ ಬಗೆಗಿನ ಊಹಾಪೋಹಗಳನ್ನು ಪರಿಹರಿಸುವ ಉತ್ತರಗಳನ್ನು ಈ ಸಂಶೋಧನೆಯ ಮೂಲಕ ತಿಳಿದುಕೊಳ್ಳಬಹುದು. ಈಶಾನ್ಯ ಭಾರತ ಮತ್ತು ಆಗ್ನೇಯ ಏಷಿಯಾ ಭಾಗಗಳಿಂದ ಪ್ರಭೇದಗಳ ಮಾದರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ, ಪರೀಕ್ಷಿಸಿ, ಅಧ್ಯಯನ ನಡೆಸಿದ್ದಲ್ಲಿ, ಮೆಣಸಿನ ವಿಕಸನ ಪ್ರಕ್ರಿಯೆಯನ್ನು ಮತ್ತು ವೈವಿಧ್ಯತೆಯನ್ನು ಇನ್ನೂ ಆಳವಾಗಿ ಅರ್ಥೈಸಿಕೊಳ್ಳಬಹುದೆಂಬುದು ಸಂಶೋಧಕರ ನಂಬಿಕೆ.

“ಹಿಮಾಲಯದ ಮೆಣಸಿನ ಪ್ರಭೇದಗಳ ಬಗ್ಗೆ ಆಳವಾದ ಅಧ್ಯಯನ ನಡೆಸುವ ಸಲುವಾಗಿ ಕ್ರಿಸ್ಟೋಫರ್ ದೇವಿಡ್ಸನ್ ಅನುದಾನ ನಮಗೆ ಕಳೆದ ವರ್ಷ ದೊರೆತಿದೆ. ನಮ್ಮ ಭಾರತದ ಮೆಣಸಿನ ಪ್ರಭೇದಗಳ ಜೈವಿಕಭೂಗೋಳದ ಬಗ್ಗೆ ಆಳವಾಗಿ ಅಧ್ಯಯನ ನಡೆಸಲು ಸಹಾಯವಾಗುತ್ತದೆ.” ಎಂದು ಸಂದೀಪ್ ಸೆನ್ ನುಡಿಯುತ್ತಾರೆ.