ನೀವು ಆರ್ಡರ್ ಮಾಡಿದ ವಸ್ತುಗಳು ಗಂಟೆಗಳ ಬದಲಿಗೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆಗೆ ತಲುಪಿದರೆ ಹೇಗಿರುತ್ತದೆ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಕನಸನ್ನು ನನಸು ಮಾಡಲು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಅವರು ಅಭಿವೃದ್ಧಿಪಡಿಸಿರುವ ಹೊಸ ಅಲ್ಗಾರಿದಮ್ (ಗಣಿತದ ಸೂತ್ರ), ಡ್ರೋನ್‌ಗಳ ಮೂಲಕ ವಸ್ತುಗಳನ್ನು ವೇಗವಾಗಿ ತಲುಪಿಸಲು ಸಹಾಯ ಮಾಡುತ್ತದೆ. ಇದು ಸೀಮಿತ ಬ್ಯಾಟರಿ ಸಾಮರ್ಥ್ಯ ಮತ್ತು ಕಡಿಮೆ ತೂಕದ ಪಾರ್ಸೆಲ್‌ಗಳನ್ನು ಮಾತ್ರ ಸಾಗಿಸುವ ಡ್ರೋನ್‌ಗಳ ಮಿತಿಗಳನ್ನು ಪರಿಗಣಿಸಿ ರೂಪಿಸಲಾಗಿದೆ.
ಇ.ವಿ. ವಾಹನಗಳಲ್ಲಿ ಗ್ರಾಫೀನ್ ಬಳಸುವುದರಿಂದ ಬ್ಯಾಟರಿಯ ಚಾರ್ಜಿಂಗ್ ಸಮಯವನ್ನು ಶೇ 22ರಿಂದ 27ರಷ್ಟು ಕಡಿಮೆ ಮಾಡಬಹುದು. ಇದು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆಯನ್ನು ತಗ್ಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ ಗ್ರಾಫೀನ್ ಬ್ಯಾಟರಿಗಳು ವರದಾನವಾಗಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಗ್ರಾಫೀನ್‌ನ ಉತ್ಪಾದನೆಯೇ ಸದ್ಯದ ದೊಡ್ಡ ಸವಾಲು.
ಬೆಂಗಳೂರು /