ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಉತ್ತರ ಕೊರಿಯಾದಲ್ಲಿ ನಡೆಸಿದ ಪರಮಾಣು ಪರೀಕ್ಷೆಯ ಕುರಿತು ನಿಖರವಾಗಿ ತಿಳಿಯಲು ಉಪಗ್ರಹಗಳನ್ನು ಬಳಸಿದ ಇಸ್ರೋ ವಿಜ್ಞಾನಿಗಳು

ಬೆಂಗಳೂರು
14 Feb 2020
ಉತ್ತರ ಕೊರಿಯಾದಲ್ಲಿ ನಡೆಸಿದ ಪರಮಾಣು ಪರೀಕ್ಷೆಯ ಕುರಿತು ನಿಖರವಾಗಿ ತಿಳಿಯಲು ಉಪಗ್ರಹಗಳನ್ನು ಬಳಸಿದ ಇಸ್ರೋ ವಿಜ್ಞಾನಿಗಳು

ಭೂಮಿಯ ಮೇಲೆ ಪರಮಾಣು ಶಸ್ತ್ರಾಸ್ತ್ರಗಳ ದುರ್ಬಳಕೆ ಅತ್ಯಂತ ವಿನಾಶಕಾರಿಯಾಗಿದ್ದು ಅವುಗಳು  ಸ್ಫೋಟಗೊಂಡ ಸ್ಥಳದ ಸುತ್ತಮುತ್ತ 3 ಕಿಲೊಮೀಟರ್ ವ್ಯಾಪ್ತಿಯೊಳಗಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುವಂತ ಶಕ್ತಿಯನ್ನು ಹೊಂದಿವೆ. ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅಯಾನೀಕರಿಸುವ ವಿಕಿರಣಗಳು ನಿರ್ದಿಷ್ಟ  ಪ್ರದೇಶವನ್ನು ಹಾನಿಗೊಳಿಸುವ ಶಕ್ತಿಯನ್ನು ಹೊಂದಿದ್ದು, ದೀರ್ಘಾವಧಿಯಲ್ಲಿ ಆ ಪ್ರದೇಶವು ಬಾಧಿತಗೊಳ್ಳುವಂತೆ ಮಾಡುತ್ತವೆ ಅಲ್ಲದೇ ಆ ಇಡೀ ಪ್ರದೇಶವನ್ನು ವಾಸಕ್ಕೆ ಯೋಗ್ಯವಲ್ಲದಂತೆ ಮಾಡುತ್ತವೆ- ಎರಡನೇ ವಿಶ್ವ ಯುದ್ದದ ಸಂದರ್ಭದಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ನಡೆದ ದುರಂತ ಬಾಂಬ್ ಸ್ಫೋಟಗಳ ರೀತಿಯಲ್ಲಿಯೇ- ಆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ. ಭಾರತ, ಯು.ಎಸ್.ಎ., ಚೀನಾ ಮತ್ತು ರಷ್ಯಾದಂತಹ ಅನೇಕ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಈಗಾಗಲೇ ತಮ್ಮ ಬಳಿ ಹೊಂದಿದ್ದರೆ, ಇನ್ನೂ ಕೆಲವು ದೇಶಗಳು ಇವುಗಳನ್ನು ಹೊಂದಲು ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದ್ದಾರೆ.

ಉತ್ತರ ಕೊರಿಯ ದೇಶವು 2006 ರಿಂದ ಆರಂಭಿಸಿ ಗುಪ್ತವಾಗಿ ತನ್ನ ತೆರೆಮರೆಯಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಕೈಗೊಂಡಿದೆ. ಇತ್ತೀಚೆಗೆ ಅಂದರೆ 2017 ರಲ್ಲಿ ಅಲ್ಲಿನ ಏಕೈಕ ಪರಮಾಣು ಪರೀಕ್ಷಾ ತಾಣವಾದ ಪುಂಗ್ಗ್ಯೆ-ರಿಯಲ್ಲಿ, ಮೊದಲ ಪರಮಾಣು ಪರೀಕ್ಷೆಯನ್ನು ಕೈಗೊಂಡ ಸ್ಥಳದಿಂದ ನೈರುತ್ಯ ದಿಕ್ಕಿಗೆ  3.6 ಕಿಲೋಮೀಟರ್ ದೂರದಲ್ಲಿ ಪರಮಾಣು ಪರೀಕ್ಷೆಯನ್ನು ಕೈಗೊಂಡಿತು ಹಾಗೂ ಈ ಪರೀಕ್ಷೆಯು ಯಶಸ್ಸ್ವಿಯಾಯಿತು ಎಂದು ಭಿತ್ತರಿಸಲಾಯಿತು. ಇದರ ಹೊರತಾಗಿ ಕೆಲವು ಮೂಲ ಅಂಶಗಳಾದ ಬಿಡುಗಡೆಯಾದ ಶಕ್ತಿ ಮತ್ತು ಸ್ಫೋಟದ ತೀವ್ರತೆಯ ಬಗ್ಗೆ ಕೈಗೊಂಡ ಅಧ್ಯಯನದ ಫಲಿತಾಂಶಗಳು ಅಸ್ಪಷ್ಟವಾದ ಅಂದಾಜುಗಳನ್ನು ಒದಗಿಸಿದವು. ಇದು ಉತ್ತರ ಕೊರಿಯ ಕೈಗೊಂಡ ಅತ್ಯಂತ ದೊಡ್ಡ ಪ್ರಮಾಣದ ಪರೀಕ್ಷೆಯಾದ್ದರಿಂದ, ಕಳೆದ ಎರಡು ವರ್ಷಗಳಲ್ಲಿ ವೈಜ್ಞಾನಿಕ ಸಮುದಾಯದಿಂದ ವಿಶೇಷ ಗಮನವನ್ನು ಸೆಳೆಯಿತು.

ಅನೇಕ ಅಧ್ಯಯನಗಳು ಈ ಮೂಲ ಅಂಶಗಳನ್ನು ಲೆಕ್ಕ ಹಾಕಲು ಪ್ರಯತ್ನಿಸಿದರೂ ಅವುಗಳ ಫಲಿತಾಂಶಗಳು ಅನಿಶ್ಚಿತತೆಯಿಂದ ಕೂಡಿದ್ದವು. ಅಲ್ಲದೆ ಇಂತಹ ಸ್ಫೋಟಗಳ ತೀವ್ರತೆಯನ್ನು ಅಳೆಯುವ ಉಪಕರಣಗಳಾದ ಭೂಕಂಪನ ಮಾಪಕ” (ಸೀಸ್ಮೋಮೀಟರ್) ಗಳನ್ನು ಆ ಸ್ಥಳದ ಸುತ್ತಮುತ್ತಲೂ ಸ್ಥಗಿತಗೊಳಿಸಿದ್ದರಿಂದ, ಸ್ಫೋಟಗೊಂಡ ಸ್ಥಳದಲ್ಲಿ ಮೂಲ ಅಂಶಗಳನ್ನು ಅತ್ಯಂತ ನಿಖರವಾಗಿ ಅಂದಾಜಿಸಲು ಪರ್ಯಾಯ ಅಧ್ಯಯನದ ತುರ್ತು ಅವಶ್ಯಕತೆಯಿತ್ತು. ಇತ್ತೀಚಿಗೆ “ಜಿಯೋಫಿಸಿಕಲ್ ಇಂಟರ್ನ್ಯಾಶನಲ್ ಜರ್ನಲ್” ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)  ವಿಜ್ಞಾನಿಗಳ ತಂಡವು ಪರ್ಯಾಯ ಅಧ್ಯಯನವನ್ನು ಕೈಗೊಂಡಿರುವ ಕುರಿತು ವರದಿ ಮಾಡಿದ್ದಾರೆ.

ಸಾಮಾನ್ಯವಾಗಿ ಇಂತಹ ಸ್ಫೋಟಗಳನ್ನು, ಅದರ ತೀವ್ರತೆಯನ್ನು ಅತ್ಯಂತ ನಿಖರವಾಗಿ ಅಳೆಯಲು ಪರೀಕ್ಷಾ ತಾಣದ ಸುತ್ತಮುತ್ತಲಿನ ಸ್ಥಳಗಳಲ್ಲಿ “ಭೂಕಂಪನಮಾಪಕ” (ಸೀಸ್ಮೋಮೀಟರ್) ಗಳನ್ನು ಬಳಸಲಾಗುತ್ತದೆ. ಆದಾಗ್ಯೂ ಈ ಉಪಕರಣಗಳು ಪರೀಕ್ಷಾ ತಾಣದ ಸುತ್ತಮುತ್ತ ಲಭ್ಯವಿಲ್ಲದ ಕಾರಣ ಮತ್ತು ತಾಂತ್ರಿಕ ಅಸ್ಪಷ್ಟತೆಗಳಿದ್ದ ಕಾರಣ ಸಂಶೋಧಕರು ಈ ಅಧ್ಯಯನಕ್ಕಾಗಿ ಅಸಾಂಪ್ರದಾಯಿಕ ವಿಧಾನಗಳನ್ನು ಪರ್ಯಾಯವಾಗಿ ಅವಲಂಭಿಸಬೇಕಾಯಿತು. ಇಸ್ರೋದ ಡಾ.ಕೆ.ಎಮ್.ಶ್ರೀಜಿತ್, ಡಾ.ರಿತೇಶ್ ಅಗರವಾಲ್ ಮತ್ತು ಡಾ.ಎ.ಎಸ್.ರಾಜವತ್ ಮೂವರನ್ನು ಒಳಗೊಂಡ ಸಂಶೋಧಕರ ತಂಡವು ಇನ್ಸಾರ್ (InSAR-Interferometric Synthetic Aperture Radar) ಎಂದು ಕರೆಯಲ್ಪಡುವ “ವ್ಯತಿಕರಣಮಾಪಕ ಸಂಕುಲಿತ ರಂಧ್ರದ ರಾಡಾರ್ ನಂತಹ ಉಪಕರಣ”ದಿಂದ ದತ್ತಾಂಶಗಳನ್ನು ಬಳಸಿದ್ದಾರೆ. ಈ ರಾಡಾರ್ ತಂತ್ರಜ್ಞಾನದಿಂದ ಭೂಮೇಲ್ಮೈ ರಚನೆಗಳು ಮತ್ತು ಭೂಕಂಪನಗಳು, ಜ್ವಾಲಾಮುಖಿಗಳು, ಭೂಕುಸಿತಗಳಂತಹ ನೈಸರ್ಗಿಕ ವಿಕೋಪಗಳನ್ನು ಕೆಲವು ಸೆಂಟೀಮೀಟರ್ ಗಳಷ್ಟು ನಿಖರತೆಯಿಂದ ಅಳೆಯಬಹುದು. ಆದರೆ ಈ ಅಧ್ಯಯನದ ಉದ್ದೇಶವು ಅತ್ಯಂತ ಪರಿಣಾಮಕಾರಿಯಾಗಬೇಕಾಗಿದ್ದು ಹಿಂದಿನ ಅಧ್ಯಯನಗಳಿಗಿಂತ ಹೆಚ್ಚಿನ ನಿಖರತೆಯನ್ನು ಹೊಂದುವುದಾಗಿರುತ್ತದೆ.

ಸಂಶೋಧಕರು ಪ್ರಸ್ತುತ ಅಧ್ಯಯನಕ್ಕಾಗಿ ದತ್ತಾಂಶವನ್ನು ಜಪಾನಿ ಉಪಗ್ರಹವಾದ ಅಡ್ವಾನ್ಸ್ಡ್ ಲ್ಯಾಂಡ್ ಅಬ್ಸರ್ವಿಂಗ್ ಸ್ಯಾಟಲೈಟ್ (ALOS-2) ಮತ್ತು ಯೂರೋಪಿಯನ್ ರಾಡಾರ್ ಉಪಗ್ರಹವಾದ ಸೆಂಟಿನೆಲ್-1 ಬಿ ( Sentinel-1B) ಗಳಿಂದ ಪ್ರತಿಫಲಿತ ವಿದ್ಯುತ್ಕಾಂತೀಯ ತರಂಗಗಳಿಂದ ಪಡೆದ ರೇಡಿಯೊ ಚಿತ್ರಣದದಿಂದ ಪಡೆದಿದ್ದಾರೆ. ಈ ರೇಡಿಯೋ ಚಿತ್ರಣಗಳಲ್ಲಿನ ತರಂಗಗಳ ಹಂತದಲ್ಲಿನ ವ್ಯತ್ಯಾಸಗಳನ್ನು ಬಳಸಿ  ಭೂಮಿಯ ಮೇಲ್ಮೈ ರಚನೆಯ ಬಗ್ಗೆ ತಿಳಿಯಲಾಗಿದೆ, ಪರಮಾಣು ಬಾಂಬ್ ಪರೀಕ್ಷೆಯನ್ನು ನಡೆಸಿದ ಸ್ಥಳದ ನಕ್ಷೆಯನ್ನುರಚಿಸಲು ಬಳಸಿದ್ದಾರೆ. ಆದಾಗ್ಯೂ ಸೆಂಟಿನಲ್-1 ಬಿ ಉಪಗ್ರಹದಿಂದ ಪಡೆದ ಮಾಹಿತಿಯು ಅಷ್ಟೊಂದು ಸ್ಪಷ್ಟವಾಗಿಲ್ಲದ ಕಾರಣ ಮುಂದಿನ ಅಧ್ಯಯನಕ್ಕೆ ALOS-2 ಉಪಗ್ರಹದಿಂದ ಮಾತ್ರ ಮಾಹಿತಿಯನ್ನು ಪಡೆಯಲಾಗಿದೆ. ಸಂಶೋಧಕರು ಈ ಅಧ್ಯಯನದ ದತ್ತಾಂಶಗಳನ್ನು ಪರಿಶೀಲಿಸಿದಾಗ, ಭೂಮೇಲ್ಮೈ ಸ್ವರೂಪಗಳು ಬದಲಾವಣೆ ಹೊಂದಿರುವ ಪ್ರಕ್ರಿಯೆಯು ಸ್ಫೋಟದಿಂದ ಆಗಿದೆಯೇ ಹೊರತು ಭೂಕುಸಿತ ಅಥವಾ ನೈಸರ್ಗಿಕ ವಿಕೋಪಗಳಿಂದ ಅಲ್ಲವೆಂದು ಮನಗಂಡಿದ್ದಾರೆ.

ಬೇಸಿಯನ್ ಮಾದರಿ-ಈ ವಿಧಾನದಲ್ಲಿ ಅನಿಶ್ಚಿತತೆಯಿಂದ ಕೂಡಿದ ಸಂಖ್ಯೆಗಳನ್ನು ಅನುರೂಪವಲ್ಲದ ದತ್ತಾಂಶದ ಮೇಲೆ ಲೆಕ್ಕ ಹಾಕಿ ನಿಖರವಾಗಿ ಅಂದಾಜು ಮಾಡಿ ಮೂಲ ಮಾನದಂಡಗಳನ್ನು ಪಡೆಯಲಾಗುತ್ತದೆ. ರಾಡಾರ್ ನಿಂದ ಪಡೆದ ಎಲ್ಲ ದತ್ತಾಂಶಗಳನ್ನು ಸಂಶೋಧಕರು ಪರಿಶೀಲಿಸಿದಾಗ ಸ್ಫೋಟಗೊಂಡ ಆಳದ ತೀವ್ರತೆಯು ನಿಖರವಾಗಿ ಮಂಟಪ ಪರ್ವತದಿಂದ 542 ಮೀಟರ್ ನಷ್ಟು ಆಳದಲ್ಲಿ ಆಗಿದೆಯೆಂದು ಅಂದಾಜಿಸಲಾಗಿದ್ದು, ಈ ಹಿಂದಿನ ಅಧ್ಯಯನಗಳಲ್ಲಿ 300-600 ಮೀಟರ್ ಆಳ ದಾಖಲಾಗಿದ್ದಕ್ಕಿಂತ ಹೆಚ್ಚಿನ ನಿಖರತೆಯನ್ನು ಹೊಂದಿದೆ ಎಂದು ತಿಳಿಸುತ್ತಾರೆ.  ಸ್ಫೋಟಗೊಂಡ ಶಕ್ತಿಯ ವ್ಯಾಪ್ತಿಯು 100-700 ಕಿಲೋಟನ್ ಗಳಷ್ಟಿದೆಯೆಂದು ಮತ್ತು ಇದು ಹಿಂದಿನ ಅಧ್ಯಯನಗಳಲ್ಲಿ ದಾಖಲಾದ 245-271 ಕಿಲೋಟನ್ ಗಳಿಗಿಂತ ಹೆಚ್ಚಿನ ನಿಖರತೆಯನ್ನು ಹೊಂದಿದ್ದು, ಶೇಕಡಾ 97 ರಷ್ಟು ಅನಿಶ್ಚಿತತೆಯನ್ನು ಕಡಿಮೆ ಮಾಡುತ್ತದೆ. ಈ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುವುದಾದರೆ, ಇದು ಹಿರೋಶಿಮಾ ನಗರದಲ್ಲಿ ನಡೆದ ಪರಮಾಣು ಬಾಂಬ್ ಸ್ಫೋಟಕ್ಕಿಂತ 17 ಪಟ್ಟು ಪ್ರಬಲವಾಗಿತ್ತು ಎನ್ನುತ್ತಾರೆ ಸಂಶೋಧಕರು.

2017 ರಲ್ಲಿ ನಡೆದ ಪರಮಾಣು ಪರೀಕ್ಷಾ ತಾಣದಲ್ಲಿ ಕೈಗೊಂಡ ಅಧ್ಯಯನಗಳಲ್ಲಿ ಬೇಸಿಯನ್ ಮಾದರಿಯ ತಂತ್ರಜ್ಞಾನವು ಇತರ ವಿಧಾನಗಳಿಗಿಂತ ಅತ್ಯುತ್ತಮವಾಗಿದ್ದು, ಕಡಿಮೆ ಅನಿಶ್ಚಿತತೆಯಿಂದ ಕೂಡಿದ ಉತ್ತಮ ಮಾರ್ಗವಾಗಿದೆ. ಆದಾಗ್ಯೂ ಸಹ, ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಮಾದರಿಯಲ್ಲಿ ಲೆಕ್ಕಹಾಕಿರುವ ಅಂದಾಜುಗಳು ಸಹ ನೂರಕ್ಕೆ ನೂರರಷ್ಟು ನಿಖರತೆಯನ್ನು ಹೊಂದಿಲ್ಲ. ಇದಕ್ಕೆ ಕಾರಣ ಸ್ಥಳೀಯ ಭೂವಿಜ್ಞಾನದ ಮಾಹಿತಿಯ ಕೊರತೆ ಮತ್ತು 3-D ಆಯಾಮದಿಂದ ಭೂಕಂಪನ ಅಲೆಗಳ (ಅಡ್ಡ ಅಲೆಗಳು-S ಅಲೆಗಳು-ಈ ಅಲೆಗಳು ದ್ರವ ಮಾಧ್ಯಮದಲ್ಲಿ ಚಲಿಸಲಾರವು) ಚಲಿಸುವ ವೇಗದ ಅಂದಾಜಿನ ಕೊರತೆ. ಹಾಗಾಗಿ ಸಂಶೋಧಕರು 3-D ಆಯಾಮದ ಭೂಕಂಪನ ಅಲೆಗಳ ವೇಗದ ಮಾಹಿತಿಯ ಬದಲಾಗಿ ಸಮತಟ್ಟಾದ ಭೂಪ್ರದೇಶದಲ್ಲಿ ದೊರೆಯುವ 1-D ಆಯಾಮದ ಭೂಕಂಪನ ವೇಗದ ಮಾಹಿತಿಯನ್ನು ಬಳಸಿದ್ದಾರೆ.

Kannada