ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಕಪ್ಪೆಗಳಿಗೆ ಔತಣ ಕೂಟವಾದ ಬತ್ತದ ಗದ್ದೆಗಳು

Read time: 1 min
Bengaluru
15 Dec 2021
ಕಪ್ಪೆಗಳಿಗೆ ಔತಣ ಕೂಟವಾದ ಬತ್ತದ ಗದ್ದೆಗಳು

ಬತ್ತದ ಮತ್ತು ಇತರೆ ಬೆಳೆಗಳ ಗದ್ದೆಗಳಲ್ಲಿ ಕಪ್ಪೆಗಳು ವಾಸಿಸುವುದು ಸಾಮಾನ್ಯ. ಬೆಳೆಗಳನ್ನು ಹಾಳುಮಾಡುವ ಸಾಮಾನ್ಯವಾಗಿ ಲೀಫ್-ಹಾಪರ್ ನಂತಹ ಕೀಟಕಗಳನ್ನು ಭಕ್ಷಿಸುವ ಈ ಕಪ್ಪೆಗಳನ್ನು ಜೈವಿಕ ನಿಯಂತ್ರಣ ಸೈನಿಕರೆಂದು ಹೇಳಬಹುದು. ಗಿಡಗಳ ರಸವನ್ನು ಹೀರಿ ಅದರ ಚೈತನ್ಯವನ್ನು ಕಡಿಮೆ ಮಾಡುವುದಲ್ಲದೆ ರೋಗಗಳನ್ನು ಉಂಟುಮಾಡುವ ವೈರಸ್‌ ಮತ್ತು ಇತರೆ ರೋಗಕಾರಕ ಕ್ರಿಮಿಗಳಿಗೆ ಈ ಕೀಟಕಗಳು ಹರಡುವ ಕಾರ್ಯನಿರ್ವಹಿಸುತ್ತವೆ. ಅಶೋಕ ಟ್ರಸ್ಟ್ ಫಾರ್ ರಿಸರ್ಚ್  ಇನ್ ಎಕಾಲಜಿ ಆಂಡ್ ದಿ ಎನ್ವಿರಾನ್ಮೆಂಟ್ (ATREE), ಬೆಂಗಳೂರು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸೆಂಟರ್ ಫಾರ್ ಎಕಲಾಜಿಕಲ್ ಸೈನ್ಸೆಸ್ (CES IISC), ಬೆಂಗಳೂರು, ಇಲ್ಲಿನ ಸಂಶೋಧಕರು ಬತ್ತದ ಗದ್ದೆಗಳಲ್ಲಿನ ಕಪ್ಪೆಗಳನ್ನು ಸಮೀಕ್ಷಿಸಿ, ಅವುಗಳ ಆಹಾರ ಕ್ರಮವನ್ನು ವಿಶ್ಲೇಷಿಸಿದ್ದಾರೆ.

ಸಂಶೋಧಕರು ಎರಡು ಕಪ್ಪೆಗಳನ್ನು ಉದಾಹರಣೆಯಾಗಿ ಪರಿಗಣಿಸಿ, ಅವುಗಳ ಆಹಾರ ಸೇವನೆಯ ಬಗ್ಗೆ, ಅವುಗಳ ಹೊಟ್ಟೆಯ ವಿಷಯಗಳ ಬಗ್ಗೆ ಬಹಳಷ್ಟು ವಿಶ್ಲೇಷಣೆಯನ್ನು ಮಾಡಿದ್ದಾರೆ. ಕೀಟಕಗಳ ವಿರುದ್ಧ ಬೆಳೆಗಳನ್ನು ರಕ್ಷಿಸುವಲ್ಲಿ ಕಪ್ಪೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದಕ್ಕೆ ಈ ಅಧ್ಯಯನ ಸಾಕ್ಷಿಯಾಗಿದೆ. ಕೀಟನಾಶಕಗಳ ವಿಪರೀತ ಬಳಕೆಯಿಂದಾಗಿ ಹಲವು ಕೀಟಕಗಳು ನಾಶವಾಗಿವೆ. ಇದರಿಂದಾಗಿ ಕಪ್ಪೆಗಳ ಆಹಾರ ಆಯ್ಕೆ ಕೆಲವು ಕೀಟಕಗಳಿಗೆ ಮಾತ್ರ  ಸೀಮಿತವಾಗಿದೆ ಎಂದೂ ಇಲ್ಲಿ ತಿಳಿಸಲಾಗಿದೆ.

ಕೃಷಿಯು ಎರಡು ರೀತಿಯಲ್ಲಿ ಜೀವವೈವಿಧ್ಯದ ಮೇಲೆ ಪರಿಣಾಮ ಬೀರಿದೆ, ಒಂದು – ಹೆಚ್ಚು ಹೆಚ್ಚು ಭೂಮಿಯನ್ನು ಅತಿಕ್ರಮಿಸುವಿಕೆ ಮತ್ತು ವಿಸ್ತರಣೆ. ಎರಡನೆಯದು – ರಸಗೊಬ್ಬರಗಳ ಮತ್ತು ಇತರೇ ರಾಸಾಯನಿಕಗಳ ತೀವ್ರ ಬಳಸುವಿಕೆ. ಹೀಗೆ ಕೃಷಿ ರಾಸಾಯನಿಕಗಳಾದ ಕೀಟನಾಶಕಗಳು, ಸಸ್ಯನಾಶಕಗಳು ಮತ್ತು ರಸಗೊಬ್ಬರಗಳನ್ನು ಭತ್ತದ ಗದ್ದೆಗಳಿಗೂ ಸಿಂಪಡಿಸಲಾಗುತ್ತದೆ. ಈ ರಾಸಾಯನಿಕಗಳು ಕೀಟಕಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸಿ ಕಪ್ಪೆಗಳ ಆಹಾರದ ಮೇಲೆ ಪರಿಣಮಿಸುತ್ತದೆ.

ಬೆಳೆಗಳನ್ನು ನಾಶಮಾಡುವ ಕೀಟಕಗಳನ್ನು ಇವು ಆಹಾರವಾಗಿ ಸೇವಿಸುತ್ತವೆ, ಆದ್ದರಿಂದ ಕಪ್ಪೆಗಳು ಗದ್ದೆಯಂತಹ ಪರಿಸರ ವ್ಯವಸ್ಥೆಯ ಪ್ರಮುಖ ಅಂಶವಾಗಿವೆ. ಆದರೆ ಇವುಗಳ ಭವಿಷ್ಯ ಅಪಾಯದಲ್ಲಿದೆ. ಇವುಗಳು ಅತ್ಯಂತ ಅಪಾಯಕಾರಿ ಹಂತದಲ್ಲಿದ್ದು, ಕಪ್ಪೆಗಳ ಸಂಖ್ಯೆಯು ಪ್ರಪಂಚದಾದ್ಯಂತ ಕ್ಷೀಣಿಸುತ್ತಿದೆ. ಇಲ್ಲಿ, ಆವಾಸಸ್ಥಾನದ ಕೊರತೆ ಮತ್ತು ಅತಿಯಾದ ಕೃಷಿ ರಾಸಾಯನಿಕೆಗಳ ಬಳಕೆ, ಈ ಎರಡು ಸಂಯೋಜಿತ ವಿಷಯಗಳು ಕಪ್ಪೆಗಳ ಸಂಖ್ಯೆಯ ಇಳಿತಕ್ಕೆ ಮುಖ್ಯ ಕಾರಣವೆಂದು  ಪರಿಗಣಿಸಬೇಕಾಗಿದೆ.

ಕಪ್ಪೆಗಳ ಸಾಂದ್ರತೆ ಮತ್ತು ಅವುಗಳ ಆಹಾರ ಪದ್ದತಿಯನ್ನು ಸಂಶೋಧಿಸಲು, ಸಂಶೋಧಕರು ಕಪ್ಪೆಗಳಿರುವ ಬತ್ತದ ಗದ್ದೆಗಳನ್ನು ಸಮೀಕ್ಷಿಸಿದರು. ಬಹಳ ಸಾಮಾನ್ಯವಾಗಿ ಕಂಡುಬರುವ ಮಿನಿರ್ವಾರ್ಯ ಕಾಪೆರಾಟಾ ಮತ್ತು ಮೈಕ್ರೊಹೈಲ ಓರ್ನಾಟ ಈ ಎರಡು ಕಪ್ಪೆಗಳ ಪ್ರಭೇದವನ್ನು ಸಂಗ್ರಹಿಸಿ, ಅವುಗಳ ಹೊಟ್ಟೆಯ ವಿಷಯಗಳನ್ನು ಪರಿಶೀಲಿಸಲಾಯಿತು. ಸಮೀಕ್ಷಿಸಿದ ೬೦ ಗದ್ದೆಗಳಲ್ಲಿ ೬ ಪ್ರಭೇದಕ್ಕೆ ಸೇರಿದ ೧೭೦೫ ಕಪ್ಪೆಗಳಿದ್ದವು. ಮುಖ್ಯವಾಗಿ ಈ ಎರಡು ಪ್ರಭೇದದ ಕಪ್ಪೆಗಳ ಹೊಟ್ಟೆಯ ಅಂಶಗಳನ್ನು ಹೊರತೆಗೆದು ಪರೀಕ್ಷಿಸಿದಾಗ ೨೬೧ ಬಗೆಯ ಕೀಟಕಗಳನ್ನು ಪಡೆಯಲಾಯಿತು. ನಂತರ ಕೀಟಕಗಳನ್ನು ವಿಂಗಡಿಸಲಾಯಿತು.

“ಈ ೨ ಪ್ರಭೇದಗಳು, ಒಟ್ಟಾಗಿ ಇದ್ದಲ್ಲೆಲ್ಲ ಬಗೆ ಬಗೆಯ ಕೀಟಗಳನ್ನು ತಿನ್ನುತ್ತಿದ್ದವು ಎಂಬುದು ಮುಖ್ಯವಾಗಿ ಕಂಡುಬಂದಿದೆ” ಎನ್ನುತ್ತಾರೆ ಡಾ. ಶೇಷಾದ್ರಿ. ಮಿನಿರ್ವಾರ್ಯ ಕಾಪೆರಾಟಾ ಕಪ್ಪೆಗೆ ವಿವಿಧ ರೀತಿಯ ಕೀಟ ಬಗೆಗಳಾದ ಜೀರುಂಡೆ, ಲಾರ್ವ ಮತ್ತು ಜೇಡಗಳು ತಿನ್ನಲು ಆದ್ಯತೆ, ಆದರೆ ಮೈಕ್ರೊಹೈಲ ಓರ್ನಾಟ ಕಪ್ಪೆಯ ಆದ್ಯತೆ ಬೇರೆಯಂತೆ. ಅವು ಕೀಟಗಳ ವರ್ಗಕ್ಕೆ ಸೇರಿದ ಕಣಜಗಳು, ಇರುವೆಗಳು ಮತ್ತು ಗೆದ್ದಲುಗಳನ್ನು ತಿನ್ನುತ್ತವೆಯಂತೆ. ಸಾಮಾನ್ಯವಾಗಿ ಈ ಲಾರ್ವ/ಮರಿಹುಳುಗಳು, ಕಣಜಗಳು ಮತ್ತು ಜೀರುಂಡೆಗಳು ಬತ್ತದ ಗದ್ದೆಗಳನ್ನು ನಾಶ ಮಾಡುವ ಕೀಟಕಗಳೇ! ಸಂಶೋಧಕರಿಕೆ ಕಪ್ಪೆಗಳ ಹೊಟ್ಟೆಯಲ್ಲಿ ಕಲ್ಲು ಮತ್ತು ಸಣ್ಣ ಕಲ್ಲುಗಳೂ ಸಿಕ್ಕಿವೆ. ಕೀಟಕಗಳಲ್ಲಿನ ಕ್ಯಾರಾಪೇಸ್ ನಂತಹ ಜೀರ್ಣಿಸಲು ಕಷ್ಟಕರವಾದ ಭಾಗವನ್ನು ಸುಲಭವಾಗಿ ಒಡೆದು ಜೀರ್ಣಿಸಲು ಕಪ್ಪೆಗಳಿಗೆ ಈ ಕಲ್ಲುಗಳು ಸಹಾಯ ಮಾಡುತ್ತವೆ. “ನಮ್ಮ ಸಂಶೋಧನೆ ಕಪ್ಪೆಗಳ ಆಹಾರ ಅಭ್ಯಾಸವನ್ನು ತಿಳಿಯಲು/ಪರಿಶೀಲಿಸಲು ಬತ್ತ ಬೆಳೆಯುವ ಗದ್ದೆಗಳಲ್ಲಿ ನಡೆಸಿದ ಮೊದಲ ಅಧ್ಯಯನವಾಗಿವೆ. ನಮಗೆ ಈಗ ಹಲವಾರು ಪ್ರಶ್ನೆಗಳಿವೆ, ಉದಾಹರಣೆಗೆ, ಕೀಟನಾಶಕ ಮುಕ್ತ ಗದ್ದೆಗಳಲ್ಲಿನ ಕಪ್ಪೆಗಳು ಅಧಿಕ ಕೀಟಕಗಳನ್ನು ಸೇವಿಸುತ್ತವೆಯೇ?” ಇದು ಡಾ ಶೇಷಾದ್ರಿ ಯವರ ಪ್ರಶ್ನೆ.

ಕಪ್ಪೆಗಳು ಹಲವು ಕೀಟಕಗಳಿಗೆ ಹೋಲಿಸಿದಾಗ, ಕೆಲವು ಕೀಟಕಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಿ ಆಯ್ಕೆಮಾಡಿ, ಅದನ್ನು ಆಹಾರವಾಗಿ ಸೇವಿಸುತ್ತವೆಯೋ ಹಾಗೆಯೇ ವಿಭಿನ್ನ ಬಗೆಯ ಬೇಟೆಯ ತಂತ್ರಗಳನ್ನು ಕಪ್ಪೆಗಳು ಅಳವಡಿಸಿಕೊಂಡಿರುತ್ತವೆ. ಒಂದು ಬಗೆಯ ರೂಪ ಮತ್ತು ಬಣ್ಣ, ಅದರ ಹಿನ್ನೆಲೆ ಬಣ್ಣಗೆ ತಕ್ಕ ಹಾಗೆ ಬದಲಿಸಿ, ಸ್ಥಳದಲ್ಲಿ ಆವರಿಸಿ ಕುಳಿತು ಅದರ ಭೇಟೆಗೆ ಕಾಯುವುದು ಮಿನಿರ್ವಾರ್ಯ ಕಾಪೆರಾಟಾ ಕಪ್ಪೆಯ ವೈಶಿಷ್ಟತೆ. ಹಾಗೆ, ಭೇಟೆಗಾರನಂತೆ ಕೀಟಕಗಳನ್ನು  ಹಿಡಿದು ಸೇವಿಸುವುದು ಮೈಕ್ರೊಹೈಲ ಓರ್ನಾಟ ಕಪ್ಪೆಯ ರೂಢಿಯಂತೆ.

ಸಿಗುವ ಔತಣದಲ್ಲಿ ಕಪ್ಪೆಗಳಿಗೂ ಪ್ರಮುಖ ಆಯ್ಕೆ ಇದೆ ಎಂಬುದು ಈ ಸಂಶೋಧನೆಯ ಮೂಲಕ ತಿಳಿದುಕೊಂಡಿದ್ದಾಯ್ತು. ಮುಂದೆ, ಕಪ್ಪೆಗಳ ಆಹಾರಪದ್ಧತಿ ಮತ್ತು ಕಪ್ಪೆಗಳ ಮೇಲೆ ಕೀಟನಾಶಕಗಳ ಪರಿಣಾಮದ ಬಗ್ಗೆ ಹೆಚ್ಚು ಕಠಿಣ ಅಧ್ಯಯನ ಅಗತ್ಯವೆನ್ನುತ್ತಾರೆ ಸಂಶೋಧಕರು. 

ಕೀಟನಾಶಕಗಳು ಕಪ್ಪೆಗಳಿಗೆ ಲಭ್ಯವಿರುವ ಕೀಟಕಗಳ ವಿಧಗಳನ್ನು ಕಡಿಮೆ ಮಾಡಬಹುದು ಮತ್ತು ಆದ್ದರಿಂದ ಕಪ್ಪೆಗಳ ಸಂಖ್ಯೆಯ ಮೇಲೆ ಪರಿಣಾಮ  ಬೀರುತ್ತದೆ ಎಂದು ಸಂಶೋಧಕರು ಖಚಿತವಾಗಿ ಊಹಿಸುತ್ತಾರೆ. ಈಗಾಗಲೇ ಹೇಳಿದಂತೆ ಹಲವಾರು ಕೀಟಾಣುಗಳು ಗಿಡಗಳನ್ನು ನಾಶಮಾಡುವುದಲ್ಲದೇ ರೋಗಗಳನ್ನು ಉಂಟುಮಾಡುವ ವೈರಸ್‌ ಮತ್ತು ಬ್ಯಾಕ್ಟೀರಿಯಾ ಕ್ರಿಮಿಗಳಿಗೆ ಈ ಕೀಟಕಗಳು ಹರಡುವ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ.

ಬೇರೆ ಕೀಟಕಗಳಂತೆ, ಧಾನ್ಯಗಳನ್ನು ಸೇವಿಸುವ ಕೀಟಕಗಳು ಕೀಟನಾಶಕಗಳ ವಿರುದ್ಧ ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು. ಆದರೆ ಜೈವಿಕ ನಿಯಂತ್ರಣ ಸೈನಿಕರೆಂದು ಹೆಸರು ಪಡೆದ ಕಪ್ಪೆಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯ. ಈ ಕಪ್ಪೆಗಳು ಕೀಟಕಗಳನ್ನು ಆಹಾರವನ್ನಾಗಿ ಸೇವಿಸುವುದರಿಂದ ಕೀಟನಾಶಕಗಳ ಹಾನಿಕಾರಕವಾದ ಉಪಯೋಗ, ವಾಸ್ತವವಾಗಿ ಕೀಟನಾಶಕದ ವಿತ್ತೀಯ ಮತ್ತು ಪರಿಸರ ವೆಚ್ಚವನ್ನು ಸರಿದೂಗಿಸುತ್ತದೆ. ಪರಿಸರ ಹಾನಿಯನ್ನುಂಟುಮಾಡುವ ಕೀಟನಾಶಕ ಬೇಕೇ ಅಥವಾ ಆಹಾರ ಜಾಲದಿಂದ (ಫೂಡ್ ವೆಬ್‌ನಿಂದ) ವಿನ್ಯಾಸಗೊಳಿಸಲಾದ ಜೈವಿಕ ನಿಯಂತ್ರಣ ಸೈನಿಕನಾದ ಕಪ್ಪೆಗಳು ಬೇಕೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.