ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಓತಿಕೇತಗಳ ನಗರೀಕರಣದ ಕಥೆ

Read time: 1 min
ಬೆಂಗಳೂರು
1 ಮೇ 2019
ಓತಿಕೇತಗಳ ನಗರೀಕರಣದ ಕಥೆ

ಇತ್ತೀಚಿನ ಅಧ್ಯಯನವೊಂದರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು, ನಗರೀಕರಣವು ಹೇಗೆ ಓತಿಕೇತಗಳ ಸಾಮಾಜಿಕ ನಡವಳಿಕೆ ಮತ್ತು ಕಾರ್ಯತಂತ್ರಗಳನ್ನುರೂಪಿಸುತ್ತದೆ ಎಂದು ವಿವರಿಸಿದ್ದಾರೆ. ಸಂಶೋಧಕರು ತಮ್ಮ ಅಧ್ಯಯನವನ್ನು ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ವಾಸಿಸುವ ದಕ್ಷಿಣ ಭಾರತದ ಒಂದು ಬಗೆಯ ಓತಿಕೇತ, ರಾಕ್ ಅಗಾಮಗಳ (ಸಾಮ್ಮೊಫಿಲಸ್ ಡೋರ್ಸಲಿಸ್) ಮೇಲೆ ಕೈಗೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಗಂಡು ಓತಿಕೇತಗಳು ಇತರೇ ಗಂಡು ಮತ್ತು ಹೆಣ್ಣು  ಓತಿಕೇತಗಳೊಂದಿಗೆ ಪರಸ್ಪರ ಹೇಗೆ ವರ್ತಿಸುತ್ತವೆ ಎಂಬುದನ್ನು ಅವರು ಅಧ್ಯಯನ ಮಾಡಿದ್ದಾರೆ.

ಸಾಮಾನ್ಯವಾಗಿ  ಹೆಚ್ಚಿನ ಪ್ರಾಣಿಗಳು ಆಕ್ರಮಣಶೀಲತೆಯ ಮಟ್ಟವನ್ನು ಬದಲಾಯಿಸುವುದರ ಮೂಲಕ ತಮ್ಮ ನಡವಳಿಕೆಯನ್ನು ಬದಲಾಯಿಸಬೇಕಾಗುತ್ತದೆ ಮತ್ತು ಸಫಲವಾಗಿ ಜೀವಿಸಲು ಹಾಗೂ ಸಂತಾನೋತ್ಪತ್ತಿ ಮಾಡಲು ತಮ್ಮ ಹಾರ್ಮೋನು ಮಟ್ಟಗಳಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಒತ್ತಡದಿಂದ ತುಂಬಿದ ನಗರದ ವಾತಾವರಣದಲ್ಲಿ ಕೆಲವು ಅಂಶಗಳಾದ, ವಾಸಸ್ಥಾನದ ಒತ್ತಡ, ಆಹಾರಕ್ಕಾಗಿ ಹೋರಾಟ, ಮತ್ತು ಮಾಲಿನ್ಯ, ಈ ಪ್ರಕ್ರಿಯೆಯನ್ನು ಮತ್ತಷ್ಟು ಕ್ಲಿಷ್ಟಕರಗೊಳಿಸುತ್ತವೆ. ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕರು ನಗರೀಕರಣವು ಹೇಗೆ ಗಂಡು ಓತಿಕೇತಗಳ ನಡವಳಿಕೆ ಮತ್ತು ಹಾರ್ಮೋನುಗಳ ಪ್ರತಿಸ್ಪಂದನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅನ್ವೇಷಿಸಿದ್ದಾರೆ.

ತಮ್ಮ ಪರಿಸರದಲ್ಲಿ ಉಂಟಾದ ಒತ್ತಡಕ್ಕೆ ಒಳಗಾಗುವ ಆ ಪ್ರಾಣಿಗಳು ಪ್ರತಿಕ್ರಿಯಾತ್ಮಕವಾಗಿ ಅಥವಾ ಪೂರ್ವಭಾವಿಯಾಗಿ (ಪರಸಕ್ರಿಯವಾಗಿ) ಅದನ್ನು ನಿಭಾಯಿಸುತ್ತವೆ. ‘ಪೂರ್ವಭಾವಿಯಾಗಿ’ ಅಥವಾ ‘ಹೋರಾಟ-ಹೋರಾಟ’ ವಿಧಾನದಲ್ಲಿ ಒತ್ತಡವನ್ನು ನಿಭಾಯಿಸಲು ಕ್ರಿಯಾಶೀಲ ಪ್ರತಿಕ್ರಿಯೆಯಾದ ಹೆಚ್ಚಿನ ಮಟ್ಟದ ಆಕ್ರಮಣಶೀಲತೆಯ ಪಾತ್ರ ಕಂಡುಬರುತ್ತದೆ. ಮತ್ತೊಂದೆಡೆ ನಗರ  ಓತಿಕೇತಗಳು “ಪ್ರತಿಕ್ರಿಯೆಯನ್ನು ನಿಭಾಯಿಸು”ವಾಗ ಕಡಿಮೆ ಮಟ್ಟದ ಆಕ್ರಮಣಶೀಲತೆಯನ್ನು ಒಳಗೊಂಡಿರುತ್ತವೆ ಎಂದು ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.

ಗಂಡು ಓತಿಕೇತಗಳು ಬೇರೆ  ಗಂಡು ಓತಿಕೇತಗಳೊಂದಿಗೆ ಪರಸ್ಪರ ವರ್ತಿಸುವಾಗ ಅಥವಾ ಹೆಣ್ಣು ಓತಿಕೇತಗಳನ್ನು ತಮ್ಮ ಪ್ರಣಯಪ್ರಸಂಗಗಳೊಂದಿಗೆ ಆಕರ್ಷಿಸಲು ಪ್ರಯತ್ನಿಸುತ್ತಿರುತ್ತವೆ, ಇಂತಹ ಸಂದರ್ಭಗಳಲ್ಲಿ ಆವಾಸಸ್ಥಾನವು (ನಗರ ಅಥವಾ ಗ್ರಾಮೀಣ ಪ್ರದೇಶ) ಓತಿಕೇತಗಳ ನಡವಳಿಕೆಗಳಲ್ಲಿನ (ವರ್ತನೆ) ಬದಲಾವಣೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ.

“ಗ್ರಾಮೀಣ ಪ್ರದೇಶದಲ್ಲಿನ  ಗಂಡು ಓತಿಕೇತಗಳಿಗೆ ಹೋಲಿಸಿದರೆ, ನಗರ ಪ್ರದೇಶದಲ್ಲಿನ ಕೆಲವು ಗಂಡು ಓತಿಕೇತಗಳು ಸಾಮಾಜಿಕವಾಗಿ ಸಂಧಿಸುವಾಗ ನಡವಳಿಕೆಯ ಪ್ರದರ್ಶನವನ್ನು ತೋರಿಸುತ್ತವೆ. ಹೀಗೆ ಪ್ರದರ್ಶಿಸಿದವುಗಳಲ್ಲಿ ಆಕ್ರಮಣಶೀಲತೆಯ ತೀವ್ರತೆಯು ಆವಾಸಸ್ಥಾನದಲ್ಲಿರುವ ಒಟ್ಟು ಸಂಖ್ಯೆಯಲ್ಲಿ ಸಾಮ್ಯತೆ ಹೊಂದಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿನ  ಗಂಡು ಓತಿಕೇತಗಳಿಗೆ ಹೋಲಿಸಿದರೆ, ನಗರ ಪ್ರದೇಶದಲ್ಲಿನ  ಗಂಡು ಓತಿಕೇತಗಳಲ್ಲಿ ಪ್ರಣಯಾಚರಣೆಯ (ಪ್ರೇಮದ ನಡವಳಿಕೆಯ) ತೀವ್ರತೆಯು ಕಡಿಮೆ ಇದೆ” ಎಂದು ಈ ಅಧ್ಯಯನದ ಲೇಖಕರು ಹೇಳುತ್ತಾರೆ.

ಎರಡು ಹಾರ್ಮೋನುಗಳಾದ ಕಾರ್ಟಿಕೊಸ್ಟೆರಾನ್ (Corticosterone) ಮತ್ತು ಟೆಸ್ಟೋಸ್ಟೆರಾನ್ (Testosterone) ಗಳ ಮಟ್ಟಗಳ ಅಧ್ಯಯನವನ್ನು ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿನ  ಗಂಡು ಓತಿಕೇತಗಳಲ್ಲಿ ಸಂಶೋಧಕರು ನಡೆಸಿದ್ದಾರೆ. ಕಾರ್ಟಿಕೊಸ್ಟೆರಾನ್ ಎನ್ನುವ ಹಾರ್ಮೋನು ವಿಭಿನ್ನ ಒತ್ತಡಗಳ ಪ್ರತಿಕ್ರಿಯೆಗೆ ಸಂಬಂಧಿಸಿದ್ದಾಗಿದೆ ಮತ್ತು ಟೆಸ್ಟೋಸ್ಟೆರಾನ್ ಎನ್ನುವುದು ಪುರುಷ ಲೈಂಗಿಕ ಹಾರ್ಮೋನಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿನ  ಗಂಡು ಓತಿಕೇತಗಳಿಗೆ ಹೋಲಿಸಿದರೆ, ನಗರ ಪ್ರದೇಶದಲ್ಲಿನ  ಗಂಡು ಓತಿಕೇತಗಳಲ್ಲಿ ಕಾರ್ಟಿಕೊಸ್ಟೆರಾನ್ ಹಾರ್ಮೋನಿನ ಮಟ್ಟವು ಗಮರ್ನಾಹವಾಗಿ ಹೆಚ್ಚಿನ ಮಟ್ಟದಲ್ಲಿರುವುದು ಅಧ್ಯಯನದಿಂದ ಕಂಡುಬಂದಿದ್ದು, ಅವುಗಳು ಒತ್ತಡದಿಂದ ಇವೆ ಎಂಬುದನ್ನು ಸೂಚಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿನ  ಗಂಡು ಓತಿಕೇತಗಳಿಗಿಂತ ನಗರ ಪ್ರದೇಶದಲ್ಲಿನ  ಗಂಡು ಓತಿಕೇತಗಳು ಟೆಸ್ಟೋಸ್ಟೆರಾನ್ ಹಾರ್ಮೋನುಗಳ ಮಟ್ಟದಲ್ಲಿಯೂ ಕೂಡ ಪ್ರಮುಖ ವ್ಯತ್ಯಾಸಗಳಿದ್ದು, ಹೆಚ್ಚಿನ ಮಟ್ಟವನ್ನು ಹೊಂದಿದ್ದು ಇತರೇ  ಗಂಡು ಓತಿಕೇತಗಳೊಂದಿಗಿನ ಪ್ರತಿಕ್ರಿಯೆ ಮತ್ತು ಹೋರಾಟಕ್ಕೆ ಕಾರಣವಾಗಿವೆ.

“ಎಲ್ಲಾ  ಗಂಡು ಓತಿಕೇತಗಳು ನಡೆಸುವ ಸಾಮಾಜಿಕ ಪರಸ್ಪರ ಪ್ರತಿಕ್ರಿಯೆಗಳು, ಟೆಸ್ಟೋಸ್ಟೆರಾನ್ ಹಾರ್ಮೋನಿನ ಮಟ್ಟದ ಹೆಚ್ಚಳದಿಂದ ಸಂಬಂಧಿಸಿವೆ ಆದರೆ ಗ್ರಾಮೀಣ ಪ್ರದೇಶದಲ್ಲಿನ  ಗಂಡು ಓತಿಕೇತಗಳು ಈ ಹಾರ್ಮೋನಿನ ಹೆಚ್ಚಿನ ಮಟ್ಟವನ್ನು ಪರಸ್ಪರ ಪ್ರತಿಕ್ರಿಯೆಯ ನಂತರ 120 ನಿಮಿಷಗಳು ಮಾತ್ರ ಕಾಪಾಡುತ್ತವೆ”, ಎಂದು ಲೇಖಕರು ತಮ್ಮ ಸಂಶೋಧನೆಯಿಂದ ತಿಳಿಸಿದ್ದಾರೆ.

ಆವಾಸಸ್ಥಾನಗಳ ಮಾನವಜನ್ಯ ವಿನಾಶವು ಒಂದೇ ಪ್ರದೇಶವನ್ನು ಹಂಚಿಕೊಂಡು ವಾಸಿಸುವ ಇತರೇ ಪ್ರಾಣಿಗಳ ಜೀವನದಲ್ಲಿ ಹೇಗೆ ಗಮರ್ನಾಹವಾದ ಬದಲಾವಣೆಗಳಿಗೆ ಕಾರಣವಾಗಿದೆಯೆಂದು ಮತ್ತು ಈ ಬದಲಾವಣೆಗಳಿಗೆ ಅವುಗಳು ಹೇಗೆ ಹೊಂದಿಕೊಂಡಿವೆ ಎಂಬುದರ ಬಗ್ಗೆ ಈ ಅಧ್ಯಯನವು ಬೆಳಕು ಚೆಲ್ಲುತ್ತದೆ. ಈ ಸಂಶೋಧನೆಗಳು ಒಟ್ಟಾರೆ ಓತಿಕೇತಗಳ (ಅಗಾಮಗಳ) ವಿಕಸನದ ಹಾದಿ, ಬೆಳವಣಿಗೆ ಮತ್ತು ಚಾಲನಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿವೆ, ಇಲ್ಲದೇ ಹೋದಲ್ಲಿ ನಮ್ಮ ಜೊತೆಗೆ ಜೀವಿಸಲು ಹೊಂದಾಣಿಕೆಯನ್ನು ಮಾಡಿಕೊಂಡಿರುವ ಇಡೀ ಜಾತಿಯು ಸಮಾಪ್ತಿಗೊಳ್ಳಬಹುದು.