ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಜೀವವೈವಿಧ್ಯದ ಅಳತೆ ಮತ್ತು ಅದರ ಹಿಂದಡಗಿದ ವಿಜ್ಞಾನ

Read time: 1 min 3 June, 2018 - 16:30

ಪಶ್ಚಿಮ ಘಟ್ಟಗಳು ಜೀವ ವೈವಿಧ್ಯದಿಂದ ಸಮೃದ್ಧವಾಗಿರುವ ಪರಿಸರ ವ್ಯವಸ್ಥೆ; ಅದಕ್ಕೆ ಇದನ್ನು 'ಜೀವವೈವಿಧ್ಯತೆಯ ಹಾಟ್ಸ್ಪಾಟ್' ಎಂದು ವಿಜ್ಞಾನಿಗಳು ಘೋಷಿಸುತ್ತಾರೆ. ಆದರೆ ಈ ಘೋಷಣೆಯನ್ನು ಬೆಂಬಲಿಸಲು ಪುರಾವೆ ಹೇಗೆ ಸಿಗುತ್ತದೆ ಗೊತ್ತೇ? ಅದಕ್ಕೆ ಯಾವುದೇ ಒಂದು ಪರಿಸರ ವ್ಯವಸ್ಥೆಯಲ್ಲಿ ದೊರೆಯುವ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಮೂಲಕ, ಜೀವವೈವಿಧ್ಯದ ಸಮೃದ್ಧಿಗೆ ಸಾಕ್ಷಿ ಒದಗಿಸುತ್ತಾರೆ.

ಈ ಪರಿಸರೀಯ ಮಾದರಿ ಸಂಗ್ರಹಣೆಗಾಗಿ ಯಾವ ಪ್ರದೇಶವನ್ನು ಪರೀಕ್ಷೆಗೆ ಒಳಪಡಿಸುತ್ತಾರೆ ಎಂಬ ಆಧಾರದ ಮೇಲೆ ಹಲವಾರು ವಿಧಾನಗಳಲ್ಲಿ ಸೂಕ್ತ ವಿಧಾನವನ್ನು ಆಯ್ಕೆ ಮಾಡಿ ಬಳಸಲಾಗುತ್ತದೆ. ಇವುಗಳಲ್ಲಿ ಯಾವುದೇ ವಿಧಾನವನ್ನು ಆಯ್ದುಕೊಂಡರೂ, ಆ ನಿಗಧಿತ ಪ್ರದೇಶದ ವಿವಿಧ ಸ್ಥಳಗಳಿಂದ ಸಸ್ಯಗಳು ಮತ್ತು ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಆ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಆಯ್ದ ಪ್ರದೇಶದಲ್ಲಿ ಪ್ರತಿ ಇಂಚು ಭೂಮಿಯನ್ನು ಅಥವಾ ಪ್ರತಿ ಹನಿ ನೀರನ್ನು ಖುದ್ದಾಗಿ ಸಮೀಕ್ಷೆ ಮಾಡುವುದು ಅಸಾಧ್ಯ. ಹಾಗಾಗಿ, ಮಾದರಿ ಸಂಗ್ರಹಣೆಯ ಸ್ಥಳವನ್ನು ಸಾಮಾನ್ಯವಾಗಿ ಚದರ ಚತುರ್ಭುಜಗಳ ವಿಸ್ತೀರ್ಣದ ಹಲವು ಭಾಗಗಳಾಗಿ ವಿಂಗಡಿಸಿ, ಅವುಗಳಿಂದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ; ಇದರ ಫಲವಾಗಿ ಅಲ್ಲಿನ ಬಗೆ ಬಗೆಯ ಪ್ರಭೇದಗಳ ಸಂಖ್ಯೆ ಮತ್ತು ಸಾಂದ್ರತೆಯು ದಾಖಲಾಗುತ್ತದೆ.

ವಿವಿಧ ರೀತಿಯ ಆವಾಸಸ್ಥಾನಗಳಲ್ಲಿ, ವಿಭಿನ್ನ ರೀತಿಯ ಮಾದರಿ ಸಂಗ್ರಹಣಾ ವಿಧಾನಗಳನ್ನು ಬಳಸಲಾಗುತ್ತದೆ. ಮಾದರಿ ಸಂಗ್ರಹಣೆಗಾಗಿ ಆಯ್ಕೆಮಾಡಿದ ಪ್ರದೇಶವು ಸಾಕಷ್ಟು ದೊಡ್ಡದಾಗಿದ್ದು, ಏಕರೂಪದ್ದಾಗಿದ್ದಾರೆ, ಯಾದೃಚ್ಛಿಕ ಮಾದರಿ ಸಂಗ್ರಹಣಾ ವಿಧಾನ ಸರಿಹೊಂದುತ್ತದೆ. ಈ ವಿಧಾನದಲ್ಲಿ, ಆ ಪ್ರದೇಶದ ವಿವಿಧ ಭಾಗಗಳಿಂದ ಮಾದರಿಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ; ಇದರಿಂದಾಗಿ ಎಲ್ಲಾ ಜಾತಿಯ ಜೀವಿಗಳಿಗೆ ದಾಖಲಾಗಲು ಸಮಾನ ಅವಕಾಶ ನೀಡಿದಂತಾಗುತ್ತದೆ.

ಏಕರೂಪವಲ್ಲದ ಆವಾಸಸ್ಥಾನವಿದ್ದರೆ, ವ್ಯವಸ್ಥಿತ ಮಾದರಿ ಸಂಗ್ರಹಣಾ ವಿಧಾನವನ್ನು ಬಳಸಬಹುದು; ಇದರಿಂದ, ಒಂದೇ ಆವಾಸಸ್ಥಾನದಲ್ಲಿ ಸ್ವಲ್ಪ ದೂರ ಕ್ರಮಿಸಿದ ನಂತರ ಅಲ್ಲಿನ ಸಸ್ಯವರ್ಗ ಅಥವಾ ಪ್ರಾಣಿಗಳ ಜಾತಿಗಳಲ್ಲಿ ಕ್ರಮೇಣ ಹೇಗೆ ಬದಲಾವಣೆ ಕಂಡುಬರುತ್ತದೆ ಎಂಬುದನ್ನು ಅರಿಯಬಹುದಾಗಿದೆ. ಜೀವವೈವಿಧ್ಯದ ಅಳತೆಗೆ ಸಹಾಯಕವೆಂಬ ಕಾರಣದಿಂದ, ಆಯ್ದ ಆವಾಸಸ್ಥಾನ ಪ್ರದೇಶದ ಉದ್ದಗಲಕ್ಕೂ ನೇರವಾದ ಹಾದಿಯಂತೆ 'ಟ್ರಾನ್ಸೆಕ್ಟ್' ಎಂದು ಗುರುತಿಸಿಕೊಳ್ಳಲಾಗುತ್ತದೆ; ಆ ಹಾದಿಯನ್ನು ಆಧಾರವಾಗಿರಿಸಿಕೊಂಡು ಅಲ್ಲಿ ಲಭ್ಯವಿರುವ ಸಸ್ಯ ಹಾಗೂ ಪ್ರಾಣಿವರ್ಗದ ಜಾತಿಗಳ ಸಂಖ್ಯೆಯನ್ನು ಮತ್ತು ಸಮೃದ್ಧಿಯನ್ನು ದಾಖಲಿಸಲಾಗುತ್ತದೆ. 

ಕೆಲವೊಂದು ಆಯ್ದ ಆವಾಸಸ್ಥಾನಗಳಲ್ಲಿ, ಆ ಪ್ರದೇಶದ ಕೆಲವು ಭಾಗಗಳು ಮೂಲ ಆವಾಸಸ್ಥಾನದ ಪ್ರಮುಖ ಭಾಗಕ್ಕಿಂತಾ ತೀವ್ರತರವಾಗಿ ವಿಭಿನ್ನವಾಗಿರುತ್ತದೆ; ಈ ಕಾರಣದಿಂದ, ಅಂತಹ ಭಾಗಗಳಲ್ಲಿ ಪ್ರತ್ಯೇಕವಾಗಿ ಮಾದರಿ ಸಂಗ್ರಹಣೆ ಮಾಡಬೇಕಾಗಿದ್ದು, ಶ್ರೇಣೀಕೃತ ಮಾದರಿ ಸಂಗ್ರಹಣಾ ವಿಧಾನವು ಸೂಕ್ತವೆನಿಸುತ್ತದೆ.

ಪರಿಸರೀಯ ಮಾದರಿ ಸಂಗ್ರಹಣೆಯು ವನ್ಯಜೀವಿ ಜೀವಶಾಸ್ತ್ರ, ಪರಿಸರ ವಿಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿನ ಸಂಶೋಧನೆಗಳಿಗೆ ಅಡಿಪಾಯ ರಚಿಸುತ್ತವೆ. ಇವು ಪರಿಸರ ಸಂರಕ್ಷಣೆಯ ದಿಕ್ಕುದೆಸೆಯನ್ನು ನಿರ್ದೇಶಿಸುವಲ್ಲಿ ಮತ್ತು ನಮ್ಮ ಸುತ್ತಲಿರುವ ಪ್ರಪಂಚವನ್ನು ನಾವು ಮತ್ತಷ್ಟು ಅರ್ಥಮಾಡಿಕೊಳ್ಳುವಲ್ಲಿ ಅತ್ಯಂತ ಸಹಕಾರಿ.