ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಭಾರತೀಯ ಕೋಗಿಲೆ-ಜೇನುನೊಣ ಪ್ರಭೇದದ ಮರುಶೋಧನೆಯ ಕೀಲಿಯನ್ನು ಹಿಡಿದ ಆಸ್ಟ್ರಿಯಾದ ಪ್ರಾಣಿ ಸಂಗ್ರಹಾಲಯ!

Read time: 1 min
ಬೆಂಗಳೂರು
9 Oct 2019
ಭಾರತೀಯ ಕೋಗಿಲೆ-ಜೇನುನೊಣ ಪ್ರಭೇದದ ಮರುಶೋಧನೆಯ ಕೀಲಿಯನ್ನು ಹಿಡಿದ ಆಸ್ಟ್ರಿಯಾದ  ವಸ್ತುಸಂಗ್ರಹಾಲಯ!

ಸುಮಾರು ಮೂರು ದಶಕಗಳ ಹಿಂದೆ, ಜರ್ಮನಿಯ ಜೇನುನೊಣ ತಜ್ಞ ಕ್ಲಾಸ್ ವಾರ್ನ್ಕೆ ಅವರು ಭಾರತದ ಲಡಾಖ್ ನ ಸುಂದರವಾದ ಭೂದೃಶ್ಯದಿಂದ ಹೊಸ ಜಾತಿಯ ಕೋಗಿಲೆ-ಜೇನುನೊಣವನ್ನು ಪತ್ತೆ ಮಾಡಿ, ವರದಿ ಮಾಡಿದ್ದರು. ಅವರು ಎಪಿಯೋಲಸ್ ಕುಲಕ್ಕೆ ಸೇರಿದ ಈ ಸಣ್ಣ ಜೇನುನೊಣದ ರೂಪವಿಜ್ಞಾನವನ್ನು ಅಧ್ಯಯನ ಮಾಡಿ, ಅದಕ್ಕೆ ಲಡಾಖ್ ಅನುಗುಣವಾಗಿ, ಎಪಿಯೋಲಸ್ ಲಡಾಖೆನ್ಸಿಸ್ ಎಂದು ನಾಮಕರಣ ಮಾಡಿದರು. ದುರದೃಷ್ಟವಶಾತ್, 1993 ರಲ್ಲಿ ಅವರ ನಿಧನದ ನಂತರ, ಈ ಪ್ರಭೇದದ ಬಗೆಗಿನ ವಿವರಣೆಗಳು ಪ್ರಕಟವಾಗಲಿಲ್ಲ.

ಆದರೆ, ಯುರೋಪ್ ನ ಚೆಕ್ ರಿಪಬ್ಲಿಕ್ ದೇಶದ ಹ್ರಾಡೆಕ್ ಕ್ರೊಲೊವ್ ವಿಶ್ವವಿದ್ಯಾಲಯದ ಸಂಶೋಧಕ ಡಾ. ಪೀಟರ್ ಬ್ಯುಗೋಶ್, ಆಸ್ಟ್ರಿಯಾದ ವಸ್ತುಸಂಗ್ರಹಾಲಯದಲ್ಲಿ ಕ್ಲಾಸ್ ವಾರ್ನ್ಕೆ ಅವರಿಂದ ಸಂಗ್ರಹಿಸಲಾದ ಕೋಗಿಲೆ-ಜೇನುನೊಣದ ಸಂಗ್ರಹಾಲಯ ಮಾದರಿಗಳು ಮತ್ತು ಕೈಬರಹದ ವಿವರಣೆಯನ್ನು ಅಕಸ್ಮಾತಾಗಿ ಕಂಡರು. ಉತ್ಸುಕರಾಗಿ, ಈ ಪ್ರಭೇದವನ್ನು ಅಲ್ಲಿ ಇರಿಸಿದ್ದ ಮಾದರಿಗಳ ಮುಖೇನ  ಅಧ್ಯಯನ ಮಾಡಲು ನಿರ್ಧರಿಸಿ, ತರುವಾಯ ಓರಿಯಂಟಲ್ ಇನ್ಸೆಕ್ಟ್ಸ್ ಎಂಬ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಹೊಸ ಕೋಗಿಲೆ-ಜೇನುನೊಣ ಪ್ರಭೇದ, ಎಪಿಯೋಲಸ್ ಲಡಾಖೆನ್ಸಿಸ್ ನ ವಿವರಣೆಯನ್ನು ಪ್ರಕಟಿಸಿದರು.

“ನಾನು ಆಸ್ಟ್ರಿಯಾದ ಲಿನ್ಸ್ನಲ್ಲಿರುವ ಬಯಾಲಜಿಝೇಂಟ್ರಮ್ ಸಂಗ್ರಹದಲ್ಲಿ ಮಾದರಿಗಳನ್ನು ನೋಡಿದೆ. 1990ರ ಆಸುಪಾಸಿನಲ್ಲಿ ಎರಡೂ ಮಾದರಿಗಳು ಕ್ಲಾಸ್ ವಾರ್ನ್ಕೆ ಅವರ ಸಂಗ್ರಹದಲ್ಲಿ ಗುರುತಿನ ಪಟ್ಟಿಗಳೊಂದಿಗೆ ಇರಿಸಲ್ಪಟ್ಟಿದ್ದವು.” ಎಂದು ಡಾ. ಬ್ಯುಗೋಶ್ ನೆನಪಿಸಿಕೊಳ್ಳುತ್ತಾರೆ.

ಕೋಗಿಲೆ ಜೇನುನೊಣಗಳು, ಅವುಗಳ ಹೆಸರಿನ ಪಕ್ಷಿಗಳಂತೆ, ಇತರ ಜೇನುನೊಣಗಳ ಗೂಡುಗಳನ್ನು ತಮ್ಮ ಮೊಟ್ಟೆಗಳನ್ನು ಇಡುವುದಕ್ಕಾಗಿ ತೆಗೆದುಕೊಳ್ಳುತ್ತವೆ. ಮೊಟ್ಟೆಗಳಿಂದ ಹೊರಬರುವ ಲಾರ್ವಾಗಳು ಆತಿಥೇಯರ ಉಳಿದ ಆಹಾರವನ್ನು ತಿನ್ನುತ್ತವೆ. ಕೋಗಿಲೆ-ಜೇನುನೊಣಗಳು ಜೇನು ನೊಣಗಳ ಪೈಕಿ ವಿಶ್ವಾದ್ಯಂತ ಸುಮಾರು 15% ರಷ್ಟು ಕಾಣಸಿಗುತ್ತವೆ. ಕೆಲವು ಕೇವಲ ನಿರ್ದಿಷ್ಟ ಜಾತಿಯ ಜೇನುನೊಣಗಳ ಗೂಡುಗಳನ್ನು ಆಕ್ರಮಿಸಿದರೆ, ಇತರ ಕೋಗಿಲೆ-ಜೇನುನೊಣಗಳು  ಆತಿಥೇಯ ಪ್ರಭೇದಗಳು ಸತ್ತಾಗ ವಿವಿಧ ಪ್ರಭೇದಗಳ ವಿಶ್ರಮಿಸುವ ಸ್ಥಳಗಳನ್ನು ಆಕ್ರಮಿಸುತ್ತವೆ. ಪ್ರಪಂಚಾದ್ಯಂತ ಎಪಿಯೋಲಸ್ ಕುಲದ ಸುಮಾರು ೧೦೦ ಪ್ರಭೇದಗಳು ಕಾಣಸಿಗುತ್ತವೆ.

ಯಾವುದೇ ಗಂಡು ಮಾದರಿಗಳು ಕಂಡುಬಂದಿಲ್ಲವಾದ್ದರಿಂದ ಹೆಣ್ಣು  ಮಾದರಿಯನ್ನು ಆಧರಿಸಿ ಎಪಿಯೋಲಸ್ ಲಡಾಖೆನ್ಸಿಸ್ ಅನ್ನು ಡಾ. ಬ್ಯುಗೋಶ್ ವಿವರಿಸಿದ್ದಾರೆ. ಹೆಣ್ಣು ಜೇನುನೊಣಗಳು ಸುಮಾರು 7.2 ಮಿ.ಮೀ ಉದ್ದವಿದ್ದು, ಅದರ ಬಾಯಿಯ ಎರಡೂ ಬದಿಯಲ್ಲಿ ಕೆಂಪು ಬಣ್ಣದ “ಮ್ಯಾಂಡಿಬಲ್” ಅಥವಾ ‘ದವಡೆಗಳು’ ಇರುತ್ತವೆ. ಹಣೆಯಲ್ಲಿ ವಿರಳವಾಗಿ ಹರಡಿರುವ ಬಿಳಿ ಮಿಶ್ರಿತ ಕಪ್ಪು ಕೂದಲುಗಳಿರುತ್ತವೆ. ಅದರ ತಲೆಯ ಮೇಲೆ ಇರುವ ಸ್ಪರ್ಶ ತಂತುಗಳು ಗಾಢವಾಗಿ ಇರುತ್ತವೆ. ಅವುಗಳ ರೆಕ್ಕೆಗಳು ಗಾಢ ಕಂದು ರಕ್ತನಾಳಗಳೊಂದಿಗೆ ಸ್ವಲ್ಪ ತೆಳು ಕಂದು ಬಣ್ಣದ್ದಾಗಿರುತ್ತವೆ ಮತ್ತು ಕಾಲುಗಳು ಪ್ರಾಥಮಿಕವಾಗಿ ಕೆಂಪು ಅಥವಾ ಕಂದು ಬಣ್ಣದ್ದಾಗಿರುತ್ತವೆ.

ಅಧ್ಯಯನವು ಎಪಿಯೋಲಸ್ ಲಡಾಖೆನ್ಸಿಸ್ ಮತ್ತು ನಿಕಟ ಸಂಬಂಧಿತ ಪ್ಯಾಲಿಯರ್ಕ್ಟಿಕ್ ಪ್ರಭೇದ- ಎಪಿಯೋಲಸ್ ಟಾರ್ಸಾಲಿಸ್ ನ ನಡುವೆ, ರೂಪದಲ್ಲಿ ಕೆಲವು ವ್ಯತ್ಯಾಸಗಳನ್ನು ಕಂಡುಹಿಡಿದಿದೆ. ಎಪಿಯೋಲಸ್ ಲಡಾಖೆನ್ಸಿಸ್ ಶಂಕುವಿನಾಕಾರದ ಆಕಾರದ ಮೆಟಾಸೊಮಾ ಅಥವಾ ಹಿಂಭಾಗದ ತುದಿಯನ್ನು ಹೊಂದಿದೆ, ಇದು ಹೆಚ್ಚು ಕೆಂಪು ಬಣ್ಣದ್ದಾಗಿದೆ. ಇದಲ್ಲದೆ, ಎಪಿಯೋಲಸ್ ಲಡಾಖೆನ್ಸಿಸ್ ದೇಹದಾದ್ಯಂತ ಹಳದಿ, ಮೃದುವಾದ ಕೂದಲನ್ನು ಹೊಂದಿದೆ. ದೇಹದ ಮೇಲ್ಭಾಗದಲ್ಲಿ ಈ ಕೂದಲಿನಿಂದ ಮಾಡಲ್ಪಟ್ಟ ಪೂರ್ಣ-ರೂಪದ ಪಟ್ಟಿಗಳು , ಹೊಸ ಪ್ರಭೇದಗಳನ್ನು ಅದರ ಯುರೋಪಿಯನ್ ನಿಕಟ ಸಂಬಂಧಿ ಎಪಿಯೋಲಸ್ ಟಾರ್ಸಾಲಿಸ್‌ನಿಂದ ಪ್ರತ್ಯೇಕಿಸುತ್ತದೆ. ಎಪಿಯೋಲಸ್ ಟಾರ್ಸಾಲಿಸ್‌ ಮುರಿದ ಪಟ್ಟಿಗಳನ್ನು ಹೊಂದಿದೆ. ಮೇಲಿನ ತುಟಿ ಅಥವಾ “ಲ್ಯಾಬ್ರಮ್” ಎಪಿಯೋಲಸ್ ಟಾರ್ಸಾಲಿಸ್‌ಗಿಂತ ಎಪಿಯೋಲಸ್ ಲಡಾಖೆನ್ಸಿಸ್‌ನಲ್ಲಿ ನೇರವಾಗಿದೆ. ಆಶ್ಚರ್ಯವೆಂದರೆ, ಎಪಿಯೋಲಸ್ ಲಡಾಖೆನ್ಸಿಸ್ ಈ ಕುಲದ ಇತರ ಭಾರತೀಯ ಪ್ರಭೇದಗಳಿಗಿಂತ ಭಿನ್ನವಾಗಿದೆ.

ಪ್ರಸ್ತುತ, ಎಪಿಯೋಲಸ್ ಲಡಾಖೆನ್ಸಿಸ್ ಲಡಾಖ್‌ನಲ್ಲಿ ಮಾತ್ರ ಕಂಡುಬರುತ್ತದೆ, ಮತ್ತು ಈ ಪ್ರಭೇದವು ಆಕ್ರಮಣ ಮಾಡುವ ಆತಿಥೇಯ ಪ್ರಭೇದಗಳು ಮತ್ತು ಅವು ಮಕರಂದವನ್ನು ಸಂಗ್ರಹಿಸುವ ಸಸ್ಯಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಹೊಸ ಪ್ರಭೇದಗಳ ಇತರ ಆವಿಷ್ಕಾರಗಳಿಗಿಂತ ಭಿನ್ನವಾಗಿ, ಈ ಅಧ್ಯಯನದಲ್ಲಿ ವರದಿಯಾದ ಕೋಗಿಲೆ ಜೇನುನೊಣಗಳನ್ನು, ದಟ್ಟ ಕಾನನಗಳಿಂದ ಅಲ್ಲದೇ, ಸಂಗ್ರಹಾಲಯದ ಹಜಾರಗಳಿಂದ ಪತ್ತೆ ಮಾಡಿ, ಮಾರುವರ್ಣಿಸಲಾಗಿದೆ. ಆಶ್ಚರ್ಯವೆಂದರೆ, ಈ ರೀತಿಯ ಕೋಗಿಲೆ ಜೇನುನೊಣಗಳ ಕೆಲವು ಆವಿಷ್ಕಾರಗಳು ಈ ಹಿಂದೆಯೂ ನಡೆದಿವೆ! ಬಹುಶಃ, ಮ್ಯೂಸಿಯಂ ಸಂಗ್ರಹಗಳನ್ನು ಎಚ್ಚರಿಕೆಯಿಂದ ಗಮನಿಸುವುದರಿಂದ ಕೋಗಿಲೆ ಜೇನುನೊಣಗಳ ಪಟ್ಟಿಗೆ ಇನ್ನೂ ಹೆಚ್ಚಿನ ಸದಸ್ಯರನ್ನು ಸೇರಿಸಬಹುದು.