ನಗರ ಪ್ರದೇಶದ ಅಪೌಷ್ಟಿಕತೆಯ ನಿವಾರಣೆಗೆ ರುಚಿಯಾದ ಹಾಗೂ ವೈವಿಧ್ಯಮಯವಾದ ಪೂರಕ ಆಹಾರ ಪದಾರ್ಥಗಳು ಪರಿಹಾರ ನೀಡಬಹುದು
ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.
ಕೋಲ್ಕತ್ತಾ/ Jan 21, 2025
ನಗರ ಪ್ರದೇಶದ ಅಪೌಷ್ಟಿಕತೆಯ ನಿವಾರಣೆಗೆ ರುಚಿಯಾದ ಹಾಗೂ ವೈವಿಧ್ಯಮಯವಾದ ಪೂರಕ ಆಹಾರ ಪದಾರ್ಥಗಳು ಪರಿಹಾರ ನೀಡಬಹುದು
ಜೂನ್ 2019 ರಲ್ಲಿ ಚೆನ್ನೈನ ಜನತೆ ಒಂದು ಭಯಾನಕ ಸಂಗತಿಯನ್ನು ಎದುರಿಸಬೇಕಾಯಿತು - ನಗರದ ಜಲಾಶಯಗಳ ಅಳವಿನ 0.1 ಪ್ರತಿಶತಕ್ಕೆ ನೀರಿನ ಮಟ್ಟ ಇಳಿದುಹೋಗಿತ್ತು. ಹಾಗೆ ನೋಡಿದರೆ ನೀರಿನ ಲಾರಿಗಳು, ಖಾಲಿ ಬಕೆಟ್ ಗಳು, ಉದ್ರಿಕ್ತ ನಾಗರೀಕರು - ಇವುಗಳನ್ನೊಳಗೊಂಡ ದೃಶ್ಯಗಳು, ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ.
ಆಹಾರ ಅಭದ್ರತೆ ಭಾರತ ದೇಶಕ್ಕೆ ಅಪರಿಚಿತವೇನಲ್ಲ - ನಮ್ಮ ದೇಶದಲ್ಲಿ ಮೂರರಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತದೆ. ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ (International Institute for Population Sciences) 2015 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಐದು ವರ್ಷಕ್ಕಿಂತ ಕೆಳಗಿನ 50 ಪ್ರತಿಶತ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಾರೆಂದು ತಿಳಿದುಬಂದಿದೆ. ಆರೋಗ್ಯ ಹಾಗೂ ಕೃಷಿ ವಿಭಾಗಗಳಲ್ಲಿ ತ್ವರಿತ ಅಭಿವೃದ್ಧಿಯಾಗಿದ್ದರೂ ಸಹ, ಭಾರತದ ಬಹುತೇಕ ಜನತೆ ಭಾರಿ ಅಪೌಷ್ಟಿಕತೆಯಿಂದ ನರಳುತ್ತಿದೆ. ಇದಕ್ಕೆ ಬಡತನ, ಅನಕ್ಷರತೆ, ನಿರುದ್ಯೋಗ ಮೊದಲಾದ ಸಾಮಾಜಿಕ-ಆರ್ಥಿಕ ವಿಷಯಗಳು ಪ್ರಮುಖ ಕಾರಣಗಳು.
“ನನ್ನ ಹೆಸರು ನಕುಸ, ನಾನು ಭಾರತದ ಅನಗತ್ಯ ಮಗಳು” ಎಂದು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡ ಪುಟ್ಟ ಹುಡುಗಿ ಹೇಳುತ್ತಾಳೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಹುಟ್ಟಿನಿಂದಲೇ ಅಥವಾ ಅದಕ್ಕೂ ಮುಂಚಿನಿಂದಲೇ ನಿರ್ದಯವಾದ ಲಿಂಗತಾರತಮ್ಯವನ್ನು ಎದುರಿಸುತಿದ್ದಾರೆ. ಭಾರತದಲ್ಲಿನ ಹಲವಾರು ಸಮಾಜಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಮತ್ತು ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯತೆಯಿಂದ, ಪ್ರತೀ ವರ್ಷ ಲಕ್ಷಾಂತರ ಹೆಣ್ಣುಮಕ್ಕಳು ಜೀವನದಿಂದ ವಂಚಿತರಾಗುತ್ತಿದ್ದಾರೆ ಮತ್ತು ಜನಿಸಿದರೂ ಸಹ ಎಲ್ಲಾ ರೀತಿಯ ಬೆಂಬಲವಿಲ್ಲದೇ ಕುಟುಂಬದ ನಿರ್ಲಕ್ಷ್ಯವನ್ನು ಅನುಭವಿಸುತ್ತಾರೆ.
ಪ್ರಸ್ತುತ ದಿನಗಳಲ್ಲಿ ಅದೃಶ್ಯವಾಗಿ ಪ್ರಾಣಕ್ಕೆ ಅಪಾಯವನ್ನೊಡ್ಡುತ್ತಿರುವ ವಾಯುಮಾಲಿನ್ಯವು ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಪ್ರಮುಖ ಜಾಗತಿಕ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲಿನ 15 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತವೊಂದೇ 14 ನಗರಗಳನ್ನು ಹೊಂದಿದೆ. ವಾಯುಮಾಲಿನ್ಯದ ಮಟ್ಟ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವ್ಯಾಪಿ ಎಲ್ಲಾ ರಾಜ್ಯಗಳಲ್ಲಿ ಸಮಗ್ರವಾದ ಅಧ್ಯಯನವನ್ನು ಕೈಗೊಂಡು ಅದಕ್ಕೆ ಪ್ರತಿಯಾಗಿ ಸರಿಯಾದ ಪ್ರತಿಕ್ರಮಗಳನ್ನು ಕೈಗೊಳ್ಳಬೇಕಿರುವುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ.
ಮೂಲ ಲೇಖನ ಬರೆದವರು: ಜ್ಯೋತಿ ಶರ್ಮಾ ಮತ್ತು ಎಸ್.ಕೆ.ವರ್ಶ್ನಿ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಹಕಾರ ವಿಭಾಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ
ಬಾವಲಿಗಳು ತಮ್ಮ ಪಾಡಿಗೆ ತಾವು ರಾತ್ರಿಯಲ್ಲಿ ಹಾರಾಡುವ ಸಸ್ತನಿಗಳು. ಇವು ಪ್ರಪಂಚದಾದ್ಯಂತ ಹರಡಿದ್ದು, ಇವುಗಳಲ್ಲಿ ಸುಮಾರು ೧೨೦೦ ಪ್ರಭೇದಗಳಿವೆ. ಈಗಿನ ಲಾಕ್ ಡೌನ್ ಗೆ ಕಾರಣವಾಗಿರುವ ಕೋವಿಡ್-೧೯ ಸಾಂಕ್ರಾಮಿಕವನ್ನು ಬಾವಲಿಗಳು ಹರಡುತ್ತಿವೆ ಎಂದು ಜನರು ತಿಳಿದಿದ್ದಾರೆ. ಇದಕ್ಕೆ ಪೂರಕವಾಗಿ, ಕೆಲವೇ ದಿನಗಳ ಹಿಂದೆ, ICMR (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್)ನ ಅಧ್ಯಯನವೊಂದು ದಕ್ಷಿಣ ಭಾರತದಲ್ಲಿ ಕಂಡುಬರುವ ಬಾವಲಿಗಳಲ್ಲಿ “ಬ್ಯಾಟ್-ಕೊರೊನ ವೈರಸ್” ಇದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೆಲ್ಲಾ ಓದಿದ ಜನ, ಭಯಭೀತರಾಗಿ ಕೆಲವೆಡೆ ಬಾವಲಿಗಳನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ. ಕೆಲವರಂತೂ ಮನೆ ಅಂಗಳದಲ್ಲಿರುವ ಸಪೋಟಾ, ಮಾವು ಹಾಗೂ ಬಾವಲಿಗಳು ಬರುವ ಇತರ ಗಿಡ-ಮರಗಳನ್ನು ಕಡಿಯುತ್ತಿದ್ದಾರೆ.
ನೈಸರ್ಗಿಕ ವಿಕೋಪಗಳ ಪೈಕಿ ಭೂಕಂಪನವು ಅತಿ ವಿನಾಶಕಾರಿ ಮತ್ತು ಭಯ ಹುಟ್ಟಿಸುವಂತದ್ದು. ರಿಕ್ಟರ್ ಮಾಪಕದಲ್ಲಿ 5.0 ಅಥವಾ ಅದಕ್ಕಿಂತ ಹೆಚ್ಚಿನ ಪರಿಮಾಣದ ಸರಿಸುಮಾರು 5 ಭೂಕಂಪಗಳು ಪ್ರತಿದಿನ ಭೂಮಿಯ ಮೇಲೆ ಸಂಭವಿಸುತ್ತಲೇ ಇರುತ್ತವೆ. ಸ್ವತಃ ಭೂಕಂಪನಗಳೇ ವಿನಾಶಕಾರಿಯಾಗಿದ್ದು, ಇದರಿಂದ ಉಂಟಾಗಬಹುದಾದ ಸುನಾಮಿ ಅಲೆಗಳಿಂದಲೂ ತಮ್ಮ ಪ್ರಭಾವವನ್ನು ಬೀರಬಲ್ಲವಾಗಿವೆ. ಸಹಜವಾಗಿ ಭೂಕಂಪನದ ತೀವ್ರತೆ, ಅಧಿಕೇಂದ್ರದಿಂದ ಇರುವ ದೂರ ಮತ್ತು ಆ ಪ್ರದೇಶದ ನೆಲದ ಸ್ವರೂಪ, ಹೀಗೆ ಕೆಲವು ಅಂಶಗಳು ಸಾಮಾನ್ಯವಾಗಿ ಭೂಕಂಪನದಿಂದ ಉಂಟಾಗುವ ಹಾನಿಯನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.