ಐಐಟಿ ಬಾಂಬೆಯ ಸಂಶೋಧಕರು ಶಾಕ್‌ವೇವ್-ಆಧಾರಿತ ಸೂಜಿ-ಮುಕ್ತ ಸಿರಿಂಜ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಸೂಜಿಗಳಿಲ್ಲದೆ ಔಷಧಿಗಳನ್ನು ಪೂರೈಸುವ ಮಾರ್ಗವನ್ನು ಕಂಡುಹಿಡಿದಿದ್ದಾರೆ.
Health
ವೈರಲ್ ಸೋಂಕುಗಳು ಮತ್ತು ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಮೈಕ್ರೋ ಆರ್‌ಎನ್‌ಎ ‘ದ್ವಿಪಾತ್ರ’ದಲ್ಲಿ ಕೆಲಸ ಮಾಡುತ್ತದೆ.
ನಗರ ಪ್ರದೇಶದ ಅಪೌಷ್ಟಿಕತೆಯ ನಿವಾರಣೆಗೆ ರುಚಿಯಾದ ಹಾಗೂ ವೈವಿಧ್ಯಮಯವಾದ ಪೂರಕ ಆಹಾರ ಪದಾರ್ಥಗಳು ಪರಿಹಾರ ನೀಡಬಹುದು
ಆಹಾರ ಅಭದ್ರತೆ ಭಾರತ ದೇಶಕ್ಕೆ ಅಪರಿಚಿತವೇನಲ್ಲ - ನಮ್ಮ ದೇಶದಲ್ಲಿ ಮೂರರಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತದೆ. ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ (International Institute for Population Sciences) 2015 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಐದು ವರ್ಷಕ್ಕಿಂತ ಕೆಳಗಿನ 50 ಪ್ರತಿಶತ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಾರೆಂದು ತಿಳಿದುಬಂದಿದೆ. ಆರೋಗ್ಯ ಹಾಗೂ ಕೃಷಿ ವಿಭಾಗಗಳಲ್ಲಿ ತ್ವರಿತ ಅಭಿವೃದ್ಧಿಯಾಗಿದ್ದರೂ ಸಹ, ಭಾರತದ ಬಹುತೇಕ ಜನತೆ ಭಾರಿ ಅಪೌಷ್ಟಿಕತೆಯಿಂದ ನರಳುತ್ತಿದೆ. ಇದಕ್ಕೆ ಬಡತನ, ಅನಕ್ಷರತೆ, ನಿರುದ್ಯೋಗ ಮೊದಲಾದ ಸಾಮಾಜಿಕ-ಆರ್ಥಿಕ ವಿಷಯಗಳು ಪ್ರಮುಖ ಕಾರಣಗಳು.
ಪ್ರಸ್ತುತ ದಿನಗಳಲ್ಲಿ ಅದೃಶ್ಯವಾಗಿ ಪ್ರಾಣಕ್ಕೆ ಅಪಾಯವನ್ನೊಡ್ಡುತ್ತಿರುವ ವಾಯುಮಾಲಿನ್ಯವು ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಪ್ರಮುಖ ಜಾಗತಿಕ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲಿನ 15 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತವೊಂದೇ 14 ನಗರಗಳನ್ನು ಹೊಂದಿದೆ. ವಾಯುಮಾಲಿನ್ಯದ ಮಟ್ಟ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವ್ಯಾಪಿ ಎಲ್ಲಾ ರಾಜ್ಯಗಳಲ್ಲಿ ಸಮಗ್ರವಾದ ಅಧ್ಯಯನವನ್ನು ಕೈಗೊಂಡು ಅದಕ್ಕೆ ಪ್ರತಿಯಾಗಿ ಸರಿಯಾದ ಪ್ರತಿಕ್ರಮಗಳನ್ನು ಕೈಗೊಳ್ಳಬೇಕಿರುವುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ.
ಮೂಲ ಲೇಖನ ಬರೆದವರು: ಜ್ಯೋತಿ ಶರ್ಮಾ ಮತ್ತು ಎಸ್.ಕೆ.ವರ್ಶ್ನಿ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಹಕಾರ ವಿಭಾಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ
ಅಧಿಕ ರಕ್ತದೊತ್ತಡವು ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ದೀರ್ಘಕಾಲದ ಕಾಯಿಲೆಗಳಲಿೢ ಒಂದು. ರಾಷ್ಟ್ರೀಯ ಆರೋಗ್ಯ ವಿವರ (ನ್ಯಾಷನಲ್ ಹೆಲ್ತ್ ಪೋರ್ಟಲ್ - ಎನ್.ಎಚ್.ಪಿ) ೨೦೧೯ ರ ಪ್ರಕಾರ, ೨೦೧೮ ರಲ್ಲಿ ಸರ್ಕಾರಿ ಚಿಕಿತ್ಸಾಲಯಗಳಿಗೆ ಭೇಟಿನೀಡಿದ ಎಲ್ಲ ರೋಗಿಗಳಲ್ಲಿ ೬.೧೯% ಜನರು ಅಧಿಕರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಖ್ಯೆ ಮಧುಮೇಹದಿಂದ ಬಳಲುತ್ತಿರುವ ಜನರಿಗಿಂತ ಹೆಚ್ಚಾಗಿದೆ (ಸುಮಾರು ೪.೭೫% ರಷ್ಟು). ಆದರೆ ಎನ್.ಎಚ್.ಪಿಯಲ್ಲಿ ಖಾಸಗಿ ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ಜನರನ್ನು ಪರಿಗಣಿಸುವುದಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಕಾರ, ನಮ್ಮ ದೇಶದಲ್ಲಿ ೧೦.೧೮ %ರಷ್ಟು ಮರಣಗಳಿಗೆ ಅಧಿಕ ರಕ್ತದೊತ್ತಡ ಮುಖ್ಯ ಕಾರಣವಾಗಿದೆ.
ಜಾಗತಿಕವಾಗಿ, ಹುಟ್ಟಿದ ನಂತರ ಕಿವುಡುತನದ ಪರೀಕ್ಷೆಗೆ ಒಳಪಡುವ ಪ್ರತಿ 1000 ಹಸುಗೂಸುಗಳಲ್ಲಿ 6 ಮಕ್ಕಳು ಕಿವುಡುತನದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಮತ್ತು ಅವರಲ್ಲಿ 200ಕ್ಕಿಂತಲೂ ಕಡಿಮೆ ಮಕ್ಕಳಿಗೆ ಮಾತ್ರ ವಾಕ್ ಚಿಕಿತ್ಸಕರು ಲಭ್ಯವಿದ್ದಾರೆ. ಭಾರತದಂತಹ ದೇಶಗಳಲ್ಲೂ ಪರಿಸ್ಥಿತಿ ಕೆಟ್ಟದಾಗಿದ್ದು, ಬಡತನದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುತ್ತದೆ ಮತ್ತು ಆರೋಗ್ಯ ಸೇವೆಗಳು ಅಷ್ಟು ಸುಲಭವಾಗಿ ಲಭ್ಯವಿರುವುದಿಲ್ಲ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, ಭಾರತೀಯ ಸನ್ನಿವೇಶದಲ್ಲಿ ವಿಶೇಷವಾಗಿ ಉಪಯುಕ್ತವಾಗುವ ಒಂದು ಶ್ರವಣ ಸಾಧನವನ್ನು ರೂಪಿಸಿದ್ದಾರೆ.