ಹೊಸ ವರ್ಷ ಬಂದಾಯಿತು, ಆದರೆ ನಾವಿನ್ನು ೨೦೧೮ರ ವರ್ಷಾಗಮನವನ್ನು ಕಳೆದ ವರ್ಷದಲ್ಲಿ ಪ್ರಾರಂಭಿಸಿದ ಕೆಲವು ಚಟುವಟಿಗೆಗಳನ್ನು ಮೆಲಕು ಹಾಕುತ್ತಿದ್ದೇವೆ. ಅವುಗಳಲ್ಲಿ ಪ್ರಮುಖವಾದುದ್ದು ಪ್ರಾದೇಶಿಕ ಭಾಷೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಹೊರತರುವುದು. ಪ್ರಾರಂಭಿಕವಾಗಿ ನಾವು ಮೊದಲು ಕನ್ನಡದಲ್ಲಿ ಲೇಖನಗಳನ್ನು ಈಗ ಕಳೆದು ಮೂರು-ನಾಲ್ಕು ವರ್ಷಗಳಿಂದ ಬರೆಯುತ್ತಿದ್ದೇವೆ. ಇದಕ್ಕೆ ನಮಗೆ 'ಪ್ರಜಾವಾಣಿ'ಯಿಂದಲೂ ಬಹಳಷ್ಟು ಪ್ರೋತ್ಸಾಹ ದೊರೆಯಿತು. ಪ್ರತಿ ಸೋಮವಾರ, 'ವಿಜ್ಞಾನ ಲೋಕದಿಂದ' ಎಂಬ ಅಂಕಣದಲ್ಲಿ ನಮ್ಮ ಲೇಖನಗಳು ಮುದ್ರಣವಾಗುತ್ತಿತ್ತು. ಕಳೆದ ವರ್ಷ ನಾವು ಹಿಂದಿ, ಮರಾಠಿ ಮತ್ತು ಅಸ್ಸಾಮೀಸ್ ನಲ್ಲೂ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದೆವು. ಈ ವರ್ಷ ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಬಹಳಷ್ಟು ಲೇಖನಗಳು, ಪಾಡ್ಕ್ಯಾಸ್ಟ್ಗಳು, ಮತ್ತು ಇತರೆ ರೀತಿಯಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಇಲ್ಲಿ ಕಳೆದ ವರ್ಷ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದ ಕೆಲವು ಆಯ್ದ ಲೇಖನಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.
ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.
ಮುಂಬೈ/ Jan 13, 2025