ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.

SciQs

14 Oct 2019

“ಬಯೋಲೂಮಿನಿಸೆನ್ಸ್” ಅಥವಾ ಜೈವಿಕ ಬೆಳಕು ಎನ್ನುವುದು ಒಂದು ಜೀವಿಯ ಬೆಳಕು ಉತ್ಪಾದಿಸುವ ಸಾಮರ್ಥ್ಯ. ಉದಾಹರಣೆಗೆ, ಫೈರ್ ಫ್ಲೈ ಅಥವಾ ಮಿಣುಕುಹುಳ, ಬಯೋಲೂಮಿನಿಸೆನ್ಸ್ ಅನ್ನು ಸಂಯೋಗದ ಕರೆಯಾಗಿ ಬಳಸುತ್ತದೆ ಮತ್ತು ಹೆಣ್ಣು ಹುಳಗಳನ್ನು ಅದರ ಹೊಳಪಿನಿಂದ ಆಕರ್ಷಿಸುತ್ತದೆ. ಸಾಗರದಲ್ಲಿ, ಮೆಸೊಪೆಲಾಜಿಕ್ ವಲಯದಲ್ಲಿ 200–1000 ಮೀಟರ್ ಆಳದಲ್ಲಿ ಕಂಡುಬರುವ ಸುಮಾರು 90% ಮೀನು ಮತ್ತು ಕಠಿಣಚರ್ಮಿ ಪ್ರಭೇದಗಳು ಬೆಳಕನ್ನು ತಮ್ಮ ದೇಹದಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.

3 Jun 2018

ಪಶ್ಚಿಮ ಘಟ್ಟಗಳು ಜೀವ ವೈವಿಧ್ಯದಿಂದ ಸಮೃದ್ಧವಾಗಿರುವ ಪರಿಸರ ವ್ಯವಸ್ಥೆ; ಅದಕ್ಕೆ ಇದನ್ನು 'ಜೀವವೈವಿಧ್ಯತೆಯ ಹಾಟ್ಸ್ಪಾಟ್' ಎಂದು ವಿಜ್ಞಾನಿಗಳು ಘೋಷಿಸುತ್ತಾರೆ. ಆದರೆ ಈ ಘೋಷಣೆಯನ್ನು ಬೆಂಬಲಿಸಲು ಪುರಾವೆ ಹೇಗೆ ಸಿಗುತ್ತದೆ ಗೊತ್ತೇ? ಅದಕ್ಕೆ ಯಾವುದೇ ಒಂದು ಪರಿಸರ ವ್ಯವಸ್ಥೆಯಲ್ಲಿ ದೊರೆಯುವ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಮೂಲಕ, ಜೀವವೈವಿಧ್ಯದ ಸಮೃದ್ಧಿಗೆ ಸಾಕ್ಷಿ ಒದಗಿಸುತ್ತಾರೆ.

4 Jan 2019

ಹಾವು… ಎಂದೊಡನೆ, ತಕ್ಷಣ ಭಯಭೀತರಾಗುವುದು ಸಹಜ. “ಎಲ್ಲಿ ನಮ್ಮನ್ನು ವಿಷವಿಕ್ಕಿ ಕಡಿಯುವುದೋ.. ಎಲ್ಲಿ ನಮ್ಮ ಮುಂದೆ ಬೆಚ್ಚಿ ಬೀಳಿಸುವಂತೆ ಹೆಡೆ ಎತ್ತಿ ನಿಲ್ಲುವುದೋ..” ಹೀಗೆ, ಎಷ್ಟೋ ತರಹದ ನಕಾರಾತ್ಮಕ, ಭಯಾನಕ ಯೋಚನೆಗಳು ನಮ್ಮ ಸೂಕ್ಷ್ಮ ಮನಸುಗಳ ಒಳಹೊಕ್ಕುವುದು ಆಶ್ಚರ್ಯವೇನಲ್ಲ. ಬಹುತೇಕ ಮಂದಿ ಭಾವಿಸಿರುವಂತೆ, ಪ್ರಪಂಚದಲ್ಲಿ ಕಾಣಸಿಗುವಂತಹ ಎಲ್ಲ ಹಾವುಗಳು ವಿಷಕಾರಿಯಲ್ಲ. ಹಾಗೆ ನೋಡಿದರೆ, ವಿಷಕಾರಿ ಹಾವುಗಳಿಗಿಂತ, ವಿಷರಹಿತ ಹಾವುಗಳ ಪ್ರಭೇದಗಳ ಸಂಖ್ಯೆಯೇ ಹೆಚ್ಚ್ಚು. ನಮ್ಮ ದೇಶದಲ್ಲಿಯೇ, ಈವರೆಗೆ ಸುಮಾರು ೨೭೫ ಹಾವಿನ ಪ್ರಭೇದಗಳಲ್ಲಿ, ಸುಮಾರು ೬೦ ಪ್ರಭೇದಗಳು ಮಾತ್ರ ವಿಷಕಾರಿ.

17 Mar 2018

ನಮ್ಮ ಸುತ್ತಮುತ್ತ ಮಧುಮೇಹಿಗಳನ್ನು, ಅದರಲ್ಲೂ, ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವ ಮಧುಮೇಹಿಗಳನ್ನು ಕಂಡಿರುತ್ತೇವೆ. ಕ್ರಿಕೆಟಿಗ ವಾಸಿಮ್ ಅಕ್ರಮ್ ಬ್ಯಾಟ್ಸಮನ್ ಅನ್ನು ಬೆದರಿಸುವಷ್ಟು ವೇಗದ ಚೆಂಡು ಎಸೆಯುವ ಬೌಲರ್, ಜೊತೆಗೇ, ಇನ್ಸುಲಿನ್ ಅವಲಂಬಿತ ಮಧುಮೇಹಿ ಕೂಡ. 

10 Mar 2018

ನೀವು ಎಂದಾದರೂ ಬೇಸಿಗೆಯ ಹಗಲಿನಲ್ಲಿ, ಬಿರುಬಿಸಿಲಿನ ಆಕಾಶವನ್ನು ಬರಿಗಣ್ಣಿನಿಂದ ನಿಟ್ಟಿಸಿದ್ದೀರಾ? ಆಕಾಶದಲ್ಲಿ ನಿಮ್ಮ ದೃಷ್ಟಿ ನೆಟ್ಟಿರುವಾಗ, ಏನೋ ಕಣ್ಣಿನ ಮುಂದೆ ತೇಲಿದಂತೆ ಭಾಸವಾಗಿದ್ದು ಗಮನಿಸಿದ್ದೀರಾ? ಹೀಗೆ ಬೆಳಕನ್ನು ನಿಟ್ಟಿಸಿ ನೋಡುವಾಗ ಕಣ್ಣಿನ ದೃಷ್ಟಿ ಕ್ಷೇತ್ರದಲ್ಲಿ ಏನೋ ಈಜಿದಂತೆ ಎನಿಸುತ್ತದೆ ಅಲ್ಲವೇ? ಇವು ಪಾರದರ್ಶಕವಾದ ಹುಳುಗಳೋ ಅಥವಾ ಯಾವುದೋ ಆತ್ಮವೋ ಎಂದು ಸಾಮಾನ್ಯವಾಗಿ ಜನ ಭಾವಿಸುತ್ತಾರಂತೆ. ಅವು ಕಣ್ಣೀರ ಹನಿಗಳೇನೋ ಎಂದು ನೀವು ಅವನ್ನು ಗಮನಿಸಲು ಪ್ರಾರಂಭಿಸಿದಾಗ, ಅವು ಕಣ್ಮರೆಯಾಗಿ, ನೀವು ನಿಮ್ಮ ನೋಟವನ್ನು ಬದಲಾಯಿಸಿದ ತಕ್ಷಣ ಮತ್ತೆ ಕಾಣಿಸಿಕೊಳ್ಳುತ್ತವೆ.

24 Feb 2018

ನೀವು ಪತ್ತೇದಾರಿ ಕಾದಂಬರಿಗಳ, ಟಿವಿ ಕಾರ್ಯಕ್ರಮಗಳ ಅಭಿಮಾನಿಯೇ? ಹಾಗಿದ್ದಲ್ಲಿ, ಅಪರಾಧಿಯನ್ನು ಗುರುತಿಸಲು ಡಿಎನ್ಎ ಬೆರಳಚ್ಚು ವಿಧಾನವು ಅತ್ಯುಪಯುಕ್ತ ಸಾಧನ ಎಂದು ನೀವು ಖಂಡಿತ ತಿಳಿದಿರುತ್ತೀರಿ.

17 Feb 2018

ಭಾರತವು ವಿಶ್ವದ ಅತಿದೊಡ್ಡ ಹಾಲಿನ ಉತ್ಪಾದಕ ರಾಷ್ಟ್ರವಾಗಿದ್ದು, ಕಳೆದ ಒಂದು ವರ್ಷದಲ್ಲೇ ೧೪೦ ದಶಲಕ್ಷ ಟನ್ ಹಾಲು ಉತ್ಪಾದಿಸಿದೆ. ಹಾಲನ್ನು ರಾಸುಗಳು (ಹಸುಗಳು, ಎಮ್ಮೆಗಳು) ಉತ್ಪಾದಿಸುತ್ತವೆ ಎಂದು ನಮಗೆ ತಿಳಿದಿದ್ದರೂ, ಇದು ಸಸ್ತನಿಗಳಲ್ಲಿ ಹೇಗೆ ಉತ್ಪತ್ತಿಯಾಗುತ್ತದೆ ಗೊತ್ತೇ?

20 Jan 2018

'ಕೀಟ ವಲಸೆ' ಎಂಬ ಪದವು ಬಣ್ಣಬಣ್ಣದ ಚಿಟ್ಟೆಗಳ ಪ್ರಸಿದ್ಧವಾದ ವಲಸೆಯನ್ನು ನೆನಪಿಸುತ್ತದೆ; ಸಾವಿರಾರು ಮೊನಾರ್ಕ್ ಚಿಟ್ಟೆಗಳು ಮೆಕ್ಸಿಕೊದಿಂದ ದಕ್ಷಿಣ ಕೆನಡಾಕ್ಕೆ ತೆರಳುವ ಅಮೋಘ ವಲಸೆಯು ಜಗತ್ಪ್ರಸಿದ್ಧ.  ಇಂತಹದ್ದೇ ಒಂದು ಕೀಟ ವಲಸೆ, ಆದರೆ ಚಿಟ್ಟೆಗಳಷ್ಟು ವರ್ಣಮಯವಲ್ಲದ್ದು, ಹಿಂದೂ ಮಹಾಸಾಗರದ ಉದ್ದಗಲಕ್ಕೂ ನಡೆಯುವುದು ಕಂಡುಬಂದಿದೆ. ಡ್ರಾಗನ್ ಫ್ಲೈ ಅಥವಾ ಕೊಡತಿ ಕೀಟಗಳ ಈ ವಲಸೆಯು ಅದ್ಭುತವಾಗಿದ್ದು,  ದಾಖಲಾದ ಅತೀ ಹೆಚ್ಚು ದೂರದ ಕೀಟವಲಸೆ ಎಂದು ನಂಬಲಾಗಿದೆ.