ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಎತ್ತರಕ್ಕೆ ತಕ್ಕಂತೆ ಚಿಕ್ಕದಾಗುವ ಹೂವುಗಳು; ಪರಾಗಸ್ಪರ್ಶಕಗಳಿಗೆ ತಕ್ಕಂತೆ ಕೇಂದ್ರೀಕೃತವಾಗುವ ಮಕರಂದ

Read time: 1 min
ಬೆಂಗಳೂರು
16 Oct 2019
ಎತ್ತರಕ್ಕೆ ತಕ್ಕಂತೆ ಚಿಕ್ಕದಾಗುವ ಹೂವುಗಳು; ಪರಾಗಸ್ಪರ್ಶಕಗಳಿಗೆ ತಕ್ಕಂತೆ ಕೇಂದ್ರೀಕೃತವಾಗುವ ಮಕರಂದ

ಪರ್ವತಾರೋಹಿಗಳ ಅಚ್ಚುಮೆಚ್ಚಿನ ಹಿಮಾಲಯದ ಹೂವುಗಳು, ಉತ್ಸಾಹಿ ಪರ್ವತಾರೋಹಿಗಳಿಂದ ಭಾರ ಹೊರುವ ಬಗ್ಗೆ ಪಾಠ ಕಲಿತಿರಬಹುದು! ಪರ್ವತಾರೋಹಿಗಳು ಎತ್ತರಕ್ಕೆ ಹೋದಾಗ, ಅಗತ್ಯವಾದ ವಸ್ತುಗಳನ್ನು ಮಾತ್ರ ಒಯ್ಯುತ್ತಾರೆ, ಮತ್ತು ಅಗತ್ಯವಿಲ್ಲದ, ಹೆಚ್ಚುವರಿ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಅಂತೆಯೇ, ಇಲ್ಲಿರುವ ಹೂವುಗಳು, ಪ್ರದೇಶ ಎತ್ತರವಾದಷ್ಟು,  ಅವುಗಳು ಗಾತ್ರದಲ್ಲಿ ಚಿಕ್ಕದಾಗುತ್ತವೆ, ಮತ್ತು ಅವುಗಳ ಸಣ್ಣ ಪರಾಗಸ್ಪರ್ಶಕಗಳಿಗೆ ತಕ್ಕಂತೆ ಕಡಿಮೆ ಮತ್ತು ಕೇಂದ್ರೀಕೃತವಾದ ಮಕರಂದವನ್ನು ಹಿಡಿದಿಟ್ಟುಕೊಳ್ಳುತ್ತವೆ. ಒಂದು ಬಗೆಯ ಹೂಬಿಡುವ, ಮರದಂತೆ ಇರುವ ಗಿಡಗಳಾದ ರೋಡೋಡೆಂಡ್ರಾನ್ ಗಳ  ಕುರಿತು ಇತ್ತೀಚಿನ ಒಂದು ಅಧ್ಯಯನವು ಇದರ ಮೇಲೆ ಬೆಳಕು ಚೆಲ್ಲುತ್ತದೆ.

ಈ ಅಧ್ಯಯನವನ್ನು ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ಎಂವೈರ್ನಮೆಂಟ್ ನ  ಸಂಶೋಧಕರು ನಡೆಸಿದ್ದಾರೆ ಮತ್ತು ಇದನ್ನು ಅಲ್ಪೈನ್ ಬಾಟನಿ ಎಂಬ ಪತ್ರಿಕೆಯಲ್ಲಿ  ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ  ಜೈವಿಕ ತಂತ್ರಜ್ಞಾನ ಇಲಾಖೆ, ನ್ಯಾಷನಲ್ ಮಿಷನ್ ಆನ್ ಹಿಮಾಲಯನ್ ಸ್ಟಡೀಸ್ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಧನಸಹಾಯ ದೊರೆತಿದೆ.

ಎತ್ತರದ ಹಿಮಾಲಯ ಪ್ರದೇಶ ವಿಶಿಷ್ಟವಾದ ಭೌಗೋಳಿಕ ಇತಿಹಾಸ, ಸಮೃದ್ಧ ಜೀವವೈವಿಧ್ಯತೆ ಮತ್ತು ಕಾಣದ ಜೀವ ರೂಪಗಳ ಸಂಪತ್ತನ್ನು ಹೊಂದಿದೆ.

"ಹಿಮಾಲಯ ಪರ್ವತ ಪ್ರದೇಶವು ಅತ್ಯಂತ ಸಂಕೀರ್ಣವಾದ ಸ್ಥಳಾಕೃತಿ ಮತ್ತು ಕಡಿದಾದ ಎತ್ತರದ ಪ್ರವಣತೆಯನ್ನು ಹೊಂದಿದೆ. ಈ ಪ್ರವಣತೆ ತಾಪಮಾನ, ಮಳೆ, ದಿನದ ಉದ್ದ, ಗಾಳಿಯ ವೇಗ, ಸೌರ ವಿಕಿರಣ ಮತ್ತು ಮಳೆಯ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ನಾವು ಸಸ್ಯ ರೂಪಗಳು ಮತ್ತು ಕಾಡು ಪ್ರಕಾರಗಳಲ್ಲಿನ ವ್ಯತ್ಯಾಸಗಳನ್ನು ಕಾಣುತ್ತೇವೆ.” ಎಂದು ಪಿ.ಎಚ್‌.ಡಿ ವಿದ್ಯಾರ್ಥಿನಿ ಮತ್ತು ಈ ಅಧ್ಯಯನದ ಪ್ರಮುಖ ಲೇಖಕರಾದ ಶ್ವೇತಾ ಬಾಸ್ನೆಟ್ ವಿವರಿಸುತ್ತಾರೆ.

ಪರ್ವತಗಳಲ್ಲಿ, ತಾಪಮಾನವು ಎತ್ತರದೊಂದಿಗೆ ಕಡಿಮೆಯಾಗುತ್ತದೆ. ಆದ್ದರಿಂದ, ಹೂಬಿಡುವ ಸಸ್ಯಗಳು ತಮ್ಮ ಸಂಪನ್ಮೂಲಗಳನ್ನು ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡುವ ಮೂಲಕ ಹೆಚ್ಚು ಪರಾಗಸ್ಪರ್ಶಕಗಳನ್ನು ಆಕರ್ಷಿಸಬೇಕಾಗುತ್ತದೆ. ಅಂತೆಯೇ, ಪಕ್ಷಿಗಳು ಮತ್ತು ಕೀಟಗಳಂತಹ ಪರಾಗಸ್ಪರ್ಶಕಗಳು ತಮ್ಮ ಶಕ್ತಿಯ ಅಗತ್ಯಗಳನ್ನು ಪೂರೈಸಲು, ರುಚಿಯಾದ ಸಕ್ಕರೆಯಂತಹ ಸಿಹಿ ಮಕರಂದವನ್ನು ನೀಡುವ ಹೂವುಗಳನ್ನು ಭೇಟಿ ಮಾಡಲು ಬಯಸುತ್ತವೆ.

ಈ ಅಧ್ಯಯನದಲ್ಲಿ, ಸಂಶೋಧಕರು ಪೂರ್ವ ಸಿಕ್ಕಿಂನ ಕ್ಯೊಂಗ್ನೋಸ್ಲಾ ಆಲ್ಪೈನ್ ಅಭಯಾರಣ್ಯದ ಸಂರಕ್ಷಿತ ಸೀಮೆಯಲ್ಲಿ ರೋಡೋಡೆಂಡ್ರಾನ್-ಗಳನ್ನು ಅಧ್ಯಯನ ಮಾಡಿದರು. ಈ ಸಸ್ಯಗಳು ವಿವಿಧ ರೀತಿಯ ಹೂವಿನ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಇಂತಹ ಒಂದು ಅಧ್ಯಯನಕ್ಕೆ ಸೂಕ್ತ ಆಯ್ಕೆಯಾಗಿದೆ. ಆದ್ದರಿಂದ ವಿವಿಧ ರೀತಿಯ ಪರಾಗಸ್ಪರ್ಶಕಗಳ ಆದ್ಯತೆಯನ್ನು ಪರೀಕ್ಷಿಸುವುದು ಸುಲಭ.

ಸಂಶೋಧಕರು ಮೇ ಮತ್ತು ಅಕ್ಟೋಬರ್ ವರೆಗೆ ಹೂಬಿಡುವ ಮತ್ತು ಹಣ್ಣು  ಋತುವಿನಲ್ಲಿ 2013 ಮತ್ತು 2015 ರ ನಡುವೆ ಹತ್ತು ಜಾತಿಯ ರೋಡೋಡೆಂಡ್ರಾನ್-ಗಳನ್ನು ಗಮನಿಸಿದರು. ಪ್ರತಿ 100 ಮೀಟರ್ ಎತ್ತರದಲ್ಲಿ, ಅವರು ಹೂವಿನ ದಳಗಳ ಉದ್ದ, ಗಂಡು-ಹೆಣ್ಣು ಸಂತಾನೋತ್ಪತ್ತಿ ಭಾಗಗಳ ನಡುವಿನ ಅಂತರ ಮತ್ತು ಈ ಹೂವುಗಳಲ್ಲಿನ ಮಕರಂದ ಸಾಂದ್ರತೆ ಮತ್ತು ಪರಿಮಾಣವನ್ನು ಅಳೆದರು . ಹೂವುಗಳಿಗೆ ಭೇಟಿ ನೀಡಿದ ಪರಾಗಸ್ಪರ್ಶಕಗಳನ್ನೂ ಸಹ ಅವರು ಗಮನಿಸಿದರು.

ಪ್ರತಿ 200 ಮೀಟರ್ ಎತ್ತರದಲ್ಲಿ ವಾತಾವರಣ ಮತ್ತು ಮಣ್ಣಿನ ತಾಪಮಾನವನ್ನು ದಾಖಲಿಸಲು ಸಂಶೋಧಕರು ಐ-ಬಟನ್ಸ್ ಎಂಬ ಸಾಧನವನ್ನು ಬಳಸಿದರು. ಐ-ಬಟನ್ ಎನ್ನುವುದು ಸಣ್ಣ ಸ್ಟೀಲ್ ಕ್ಯಾನ್‌ನಲ್ಲಿ ಇರಿಸಬಹುದಾದಂತಹ ಒಂದು ಸಣ್ಣ ಕಂಪ್ಯೂಟರ್ ಚಿಪ್.

"ತಾಪಮಾನದಲ್ಲಿನ ಸೂಕ್ಷ್ಮ-ಮಟ್ಟದ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಸರ ವಿಜ್ಞಾನದಲ್ಲಿ, ಕ್ಷೇತ್ರ ಸಂಶೋಧನೆಗೆ ವ್ಯಾಪಕ ಪ್ರಮಾಣದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಸಾಧನದ ಮಹತ್ವವನ್ನು ಎತ್ತಿ ಹಿಡಿಯಲು ಹಿಮಾಲಯ ಪ್ರದೇಶದ ಮೊದಲ ಕೆಲವು ಅಧ್ಯಯನಗಳಲ್ಲಿ ನಮ್ಮ ಅಧ್ಯಯನವೂ ಒಂದು" ಎಂದು ಶ್ವೇತಾ ಬಾಸ್ನೆಟ್ ಹೇಳುತ್ತಾರೆ.

3400 ರಿಂದ 3900 ಮೀಟರ್ ವರೆಗೆ ಕಡಿಮೆ ಎತ್ತರದಲ್ಲಿ ಕಂಡಂತಹ ರೋಡೋಡೆಂಡ್ರಾನ್ ಪ್ರಭೇದವು ಉದ್ದವಾದ ಹೂವುಗಳನ್ನು ಮತ್ತು ತನೂಕರಿಸಿದ ಮಕರಂದವನ್ನು ಹೊಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಸ್ಯಗಳು ಮರದ ರೇಖೆಯ ಕೆಳಗೆ ಇದ್ದುದರಿಂದ, ಹೆಚ್ಚಿನ ಪಕ್ಷಿಗಳು ಈ ಹೂವುಗಳನ್ನು ಭೇಟಿ ಮಾಡಿದವು. ಹೆಚ್ಚಿನ ಎತ್ತರದಲ್ಲಿ, 3900 ಮೀಟರ್‌ಗಿಂತ ಹೆಚ್ಚು ಬೆಳೆಯುವ ಸಸ್ಯಗಳನ್ನು ನೊಣಗಳು ಮತ್ತು ದೊಡ್ಡ ಜೇನು-ನೊಣಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದವು, ಮತ್ತು ಸಣ್ಣ ಹೂವುಗಳು ಮತ್ತು ಕೇಂದ್ರೀಕೃತ ಮಕರಂದಕ್ಕೆ ಆದ್ಯತೆ ನೀಡುತ್ತಿದ್ದವು. ಪ್ರದೇಶದ ಎತ್ತರದೊಂದಿಗೆ, ಮಕರಂದದ  ಸಾಂದ್ರತೆಯ ಹೆಚ್ಚಳ ಕಂಡುಬಂದರೂ, ಮಕರಂದದ ಪ್ರಮಾಣವು ಕಡಿಮೆಯಾಯಿತು.

ಇತರ ಪರಾಗಸ್ಪರ್ಶಕಗಳು ಅಗತ್ಯವಿರುವಷ್ಟು ಸಂತಾನೋತ್ಪತ್ತಿಗೆ ಕಾರಣವಾಗದಿದ್ದಾಗ ರೋಡೋಡೆಂಡ್ರಾನ್‌ಗಳು ಸ್ವಯಂ ಪರಾಗಸ್ಪರ್ಶ ಮಾಡಬಹುದೇ ಎಂದು ಸಂಶೋಧಕರು ಪರೀಕ್ಷಿಸಿದರು.  ಕಡಿಮೆ ಎತ್ತರದಲ್ಲಿ, ಕಡಿಮೆ ಪರಾಗಸ್ಪರ್ಶಕಗಳು ಪರಿಸ್ಥಿತಿಗಳನ್ನು ಎದುರಿಸಬಲ್ಲವು, ಸಸ್ಯಗಳು ಕಡಿಮೆ ಎತ್ತರಕ್ಕೆ ಹೋಲಿಸಿದರೆ 'ಸೆಲ್ಫಿಂಗ್' ಅಥವಾ ಸ್ವಂತಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ.

ಹಿಮಾಲಯದಂತಹ ಸವಾಲಿನ ವಾತಾವರಣದಲ್ಲಿ ಸಸ್ಯಗಳು ತಮ್ಮ ಪರಾಗಸ್ಪರ್ಶಕಗಳಿಗೆ ಹೇಗೆ ಹೊಂದಿಕೊಂಡಿವೆ ಎಂದು ಅಧ್ಯಯನವು ತೋರಿಸಿದರೆ, ಬದಲಾಗುತ್ತಿರುವ ಹವಾಮಾನವು ಇವುಗಳ ಮಧ್ಯೆ ಇರುವ ಇಂತಹ ಸಂಕೀರ್ಣ ಸಂಬಂಧವನ್ನು ಬದಲಾಯಿಸಬಹುದು.

"ಇತ್ತೀಚಿನ ಅಧ್ಯಯನಗಳು ಮಕರಂದವು ತಾಪಮಾನಕ್ಕೆ ಸೂಕ್ಷ್ಮವಾಗಿರುತ್ತದೆ ಎಂದು ಸೂಚಿಸುತ್ತವೆ,  ಮತ್ತು ತಾಪಮಾನದ ಏರಿಕೆಯೊಂದಿಗೆ, ಅದರ ಪರಿಮಾಣ ಮತ್ತು ಸಾಂದ್ರತೆಯ ಬದಲಾವಣೆಗಳನ್ನೂ ನಾವು ನಿರೀಕ್ಷಿಸಬಹುದು. ಇದು ಸಸ್ಯ-ಪರಾಗಸ್ಪರ್ಶಕ ಸಂವಹನಗಳ ಮೇಲೆ ಪ್ರಭಾವ ಬೀರಬಹುದು" ಎಂದು ಶ್ವೇತಾ ಬಾಸ್ನೆಟ್ ವಿವರಿಸುತ್ತಾರೆ. "ನಮ್ಮ ಅಧ್ಯಯನದ ಆವಿಷ್ಕಾರಗಳನ್ನು ಭವಿಷ್ಯದಲ್ಲಿ ಸಸ್ಯ-ಪರಾಗಸ್ಪರ್ಶಕ ಸಂವಹನಗಳ ವಿಷಯದಲ್ಲಿ ಯಾವುದೇ ಹವಾಮಾನ ಬದಲಾವಣೆ-ಸಂಬಂಧಿತ ಪರೀಕ್ಷಿಸಬಹುದಾದ ಕಲ್ಪನೆಗಳನ್ನು  ಸೃಷ್ಟಿಸಲು ಬಳಸಬಹುದು" ಎಂದು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.