ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ಜೈವಿಕಬೆಳಕಿನೊಂದಿಗೆ ಮರೆಮಾಚುವಿಕೆ!

14 October, 2019 - 08:25

“ಬಯೋಲೂಮಿನಿಸೆನ್ಸ್” ಅಥವಾ ಜೈವಿಕ ಬೆಳಕು ಎನ್ನುವುದು ಒಂದು ಜೀವಿಯ ಬೆಳಕು ಉತ್ಪಾದಿಸುವ ಸಾಮರ್ಥ್ಯ. ಉದಾಹರಣೆಗೆ, ಫೈರ್ ಫ್ಲೈ ಅಥವಾ ಮಿಣುಕುಹುಳ, ಬಯೋಲೂಮಿನಿಸೆನ್ಸ್ ಅನ್ನು ಸಂಯೋಗದ ಕರೆಯಾಗಿ ಬಳಸುತ್ತದೆ ಮತ್ತು ಹೆಣ್ಣು ಹುಳಗಳನ್ನು ಅದರ ಹೊಳಪಿನಿಂದ ಆಕರ್ಷಿಸುತ್ತದೆ. ಸಾಗರದಲ್ಲಿ, ಮೆಸೊಪೆಲಾಜಿಕ್ ವಲಯದಲ್ಲಿ 200–1000 ಮೀಟರ್ ಆಳದಲ್ಲಿ ಕಂಡುಬರುವ ಸುಮಾರು 90% ಮೀನು ಮತ್ತು ಕಠಿಣಚರ್ಮಿ ಪ್ರಭೇದಗಳು ಬೆಳಕನ್ನು ತಮ್ಮ ದೇಹದಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.

ಸುತ್ತುವರಿದ ಬೆಳಕು ಕಡಿಮೆ ಇರುವುದರಿಂದ ಮೆಸೊಪೆಲಾಜಿಕ್ ವಲಯವನ್ನು 'ಟ್ವಿಲೈಟ್ ವಲಯ' ಎಂದೂ ಕರೆಯುತ್ತಾರೆ. ಇಲ್ಲಿ ಹರಡಿರುವ ಸೂರ್ಯನ ಬೆಳಕು ಏಕರೂಪದ ತೀವ್ರತೆ, ಬಣ್ಣ ಮತ್ತು ದಿಕ್ಕನ್ನು ಹೊಂದಿದೆ. ಇದು ಪರಭಕ್ಷಕರಿಂದ ಯಾವುದೇ ಆಶ್ರಯವನ್ನು ನೀಡುವುದಿಲ್ಲ, ಹಾಗೂ ಅವುಗಳಿಂದ ಮರೆಯಾಗಲು ಯಾವುದೇ ಮೂಲೆಗಳಿಲ್ಲ. ಕೆಳಗೆ ಇರುವ ಪರಭಕ್ಷಕ ಪ್ರಾಣಿಗಳು ಅವುಗಳ ಮೇಲೆ ಈಜುವ ಮೀನುಗಳ ನೆರಳ ಸ್ಪಷ್ಟ ನೋಟವನ್ನು ಹೊಂದಿದ್ದು, ಅವುಗಳನ್ನು ಸುಲಭವಾಗಿ ಬೇಟೆಯಾಡುತ್ತವೆ.

ಆದಾಗ್ಯೂ, ಕೆಲವು ಮೀನುಗಳು ಮರೆಮಾಚುವಿಕೆಯ 'ವಿರುದ್ಧ ಪ್ರಕಾಶ' ತಂತ್ರವನ್ನು ಕರಗತ ಮಾಡಿಕೊಂಡಿವೆ ಮತ್ತು ಸುತ್ತಮುತ್ತಲಿನ ಬೆಳಕಿನ ತೀವ್ರತೆ ಮತ್ತು ತರಂಗಾಂತರವನ್ನು ಸಂಪೂರ್ಣವಾಗಿ ಹೊಂದಿಸಲು ತಮ್ಮ ಕೆಳಭಾಗವನ್ನು ಬೆಳಗಿಸುತ್ತವೆ. ಈ ರೂಪಾಂತರವು ಕೆಳಗೆ ಅಡಗಿರುವ ಪರಭಕ್ಷಕಗಳಿಗೆ ಮೀನಿನ ನೆರಳನ್ನು  ಮಸುಕುಗೊಳಿಸುತ್ತದೆ ಮತ್ತು ಅವು ಅಡಗಿಕೊಳ್ಳಲು ಸಹಾಯ ಮಾಡುತ್ತದೆ.

ಮೀನುಗಳಿಗೆ, ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆರೆಯಲು ಸಹಾಯ ಮಾಡುವುದರ ಜೊತೆಗೆ, ಈ ಮರೆಮಾಚುವಿಕೆಯು ಆಮಿಷವಾಗಿಯೂ ಕಾರ್ಯನಿರ್ವಹಿಸುತ್ತದೆ. ಕೆಲವು ಪ್ರಭೇದಗಳು ಪ್ರಕಾಶಮಾನವಾದ ಮಾದರಿಗಳನ್ನು ಹೊಂದಿದ್ದು, ಈ ಮಾದರಿಗಳು ಸಣ್ಣ ಮೀನುಗಳಂತೆಯೇ ಕಾಣುತ್ತವೆ. ಇದರಿಂದ ಮಾರುಹೋದ, ಒಂದು ಮೀನು ದಾಳಿ ಮಾಡಲು ಅವುಗಳನ್ನು  ಸಂಪರ್ಕಿಸಿದಾಗ, ಅವು ತಮ್ಮ ನೈಜ ಗಾತ್ರವನ್ನು ಬಹಿರಂಗಪಡಿಸುತ್ತವೆ,  ಮತ್ತು ಅದನ್ನು ಭಕ್ಷಿಸುತ್ತವೆ!

ಸಂಶೋಧನೆಗಳ ಪ್ರಕಾರ, ಪ್ರತಿ ಪ್ರಾಣಿಯು ಬಯೋಲೂಮಿನಿಸೆನ್ಸ್ ಅನ್ನು ವಿಭಿನ್ನವಾಗಿ ಬಳಸುತ್ತದೆ. ಈ ವಿಭಿನ್ನತೆ ಹೊಸ ಬೇಟೆಯಾಡುವ ವಿಧಾನಗಳನ್ನು ಮತ್ತು ಅದರ ಹಿಂದಿನ ಪ್ರಕ್ರಿಯೆಗಳನ್ನು ಬಹಿರಂಗಪಡಿಸುತ್ತದೆ. ಆಂಗ್ಲರ್ ಫಿಶ್ ಇದನ್ನು ಆಮಿಷವಾಗಿ ಬಳಸಿದರೆ, ಒಸ್ಟ್ರಾಕೋಡ್ಸ್ ಇದನ್ನು ನಿವಾರಕವಾಗಿ ಬಳಸುತ್ತವೆ. ಡ್ರ್ಯಾಗನ್ ಫಿಶ್ ಇತರ ಮೀನುಗಳಿಗೆ ಕಾಣಿಸದ ಕೆಂಪು ದೀಪದಿಂದ ತಮ್ಮ ಹಾದಿಯನ್ನು ಬೆಳಗಿಸುವ ಮೂಲಕ ಈಜುವಾಗ ಪತ್ತೆಹಚ್ಚುವುದನ್ನು ತಪ್ಪಿಸಲು ಇದನ್ನು ಬಳಸುತ್ತದೆ. ಅಕಾಂಥೆಫೈರಾ ಪರ್ಪ್ಯೂರಿಯಾ, ಒಂದು ಬಗೆಯ ಸೀಗಡಿ, ತಮ್ಮ ಪರಭಕ್ಷಕಗಳ ಮೇಲೆ ಪ್ರಕಾಶಮಾನ ಶಾಯಿಯನ್ನು ಉಗುಳುವ ಮೂಲಕ ಬೆಳಕನ್ನು ಮಿನುಗುವಂತೆ ಮಾಡುತ್ತದೆ ಮತ್ತು ಅವುಗಳನ್ನು ದೃಷ್ಟಿಗೆ ಬೆರಗುಗೊಳಿಸುತ್ತದೆ.

ಈ ಜೀವಿಗಳ ಬಗ್ಗೆ ಸಮುದ್ರಶಾಸ್ತ್ರಜ್ಞ ಎಡ್ಡಿ ವಿಡ್ಡರ್ ಹೇಳುತ್ತಾರೆ - ಇದು, ಈ ರಾಕೆಟ್ ಹಡಗುಗಳು ಮತ್ತು ಕಿಡಿಗಳ ಸ್ಫೋಟಗಳು ನೀಲಿ ಹೊಗೆಯನ್ನು ಉಗುಳುವ ಹಾಗೆ ಕಾಣುತ್ತದೆ... ಇದು ಮಾಯೆ!"