ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಿಂದ ಹೊಸ ಪ್ರಭೇದದ ಸಗಣಿ ಜೀರುಂಡೆ ಪತ್ತೆ

Read time: 1 min
ಬೆಂಗಳೂರು
4 Dec 2019
ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಿಂದ ಹೊಸ ಪ್ರಭೇದದ ಸಗಣಿ ಜೀರುಂಡೆ ಪತ್ತೆ

‘ಸಗಣಿ’ ಜೀರುಂಡೆಗಳು ಆಕರ್ಷಕ ಜೀವಿಗಳು. ಇವು ಪ್ರಾಣಿಗಳ ಸಗಣಿಗಳನ್ನು ಆಹಾರವಾಗಿ ಸೇವಿಸುತ್ತವೆ ಮತ್ತು ಅದರಿಂದ ಅವುಗಳ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತವೆ. ಈ ಸಣ್ಣ ಜೀರುಂಡೆಗಳು, ಸಗಣಿಯನ್ನು  ತಿನ್ನುವ ಮೂಲಕ ಮಣ್ಣಿನ ರಚನೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತವೆ. ಹಾಗಾಗಿ, ಇವು ಕೃಷಿಯಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ.   ಪ್ರಾಣಿಗಳ ಸಗಣಿಯಲ್ಲಿ ಇರುವ ಬೀಜಗಳನ್ನು ಹರಡಲು, ಬೀಜಗಳನ್ನು ಮಣ್ಣಲ್ಲಿ ಸೇರಿಸುವ ಮೂಲಕ, ಉಷ್ಣವಲಯಪ್ರದೇಶಗಳಲ್ಲಿ ಗಿಡಮರಗಳು ಬೆಳೆಯಲು ಸಹಾಯ ಮಾಡುತ್ತವೆ. ಇವು ಸರ್ವಭಕ್ಷಕಗಳಿಗಿಂತ ಸಸ್ಯಹಾರಿಗಳ ಸಗಣಿಗಳಿಗೆ ಆದ್ಯತೆ ನೀಡುತ್ತವೆ. 19 ನೇ ಶತಮಾನದವರೆಗೆ, ಫ್ರೆಂಚ್ ನೈಸರ್ಗಿಕವಾದಿ ಮತ್ತು ಕೀಟಶಾಸ್ತ್ರಜ್ಞ ಜೀನ್ ಹೆನ್ರಿ ಫ್ಯಾಬ್ರೆ ಅವುಗಳನ್ನು ಅಧ್ಯಯನ ಮಾಡುವವರೆಗೂ, ಈ ಸಗಣಿ ಜೀರುಂಡೆಗಳ ಪರಿಚಯ ಅಷ್ಟಾಗಿ ಇರಲಿಲ್ಲ.

ಇತ್ತೀಚೆಗೆ, ಕೋಲ್ಕತ್ತಾದ, ಝುಆಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ತಮ್ಮ ಕ್ಷೇತ್ರ ಕಾರ್ಯದ ಸಮಯದಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ, ಭೂಮಿ ಕೊರೆಯುವ ಸಗಣಿ ಜೀರುಂಡೆಯ ಹೊಸ ಪ್ರಭೇದವನ್ನು ಕಂಡುಹಿಡಿದಿದ್ದಾರೆ. ಈ ಹೊಸಪ್ರಭೇದಕ್ಕೆ  ಇನೋಪ್ಲೋಟ್ರೂಪ್ಸ್ ತವಾಂಗೆನ್ಸಿಸ್  ಎಂದು ಜಿಲ್ಲೆಯ ಹೆಸರಿಗೆ ಅನುಗುಣವಾಗಿ ನಾಮಕರಣ ಮಾಡಲಾಗಿದೆ. ಇದು ಭೂಕೊರೆಯುವ, ಜಿಯೋಟ್ರೂಪಿಡೆ ಕುಟುಂಬಕ್ಕೆ ಸೇರಿದೆ. ಈ ಅಧ್ಯಯನವನ್ನು ಓರಿಯಂಟಲ್ ಇನ್ಸೆಕ್ಟ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

"ನನ್ನ ಸಂಗ್ರಹದಲ್ಲಿ ಇರುವ, ಇ.ತವಾಂಗೆನ್ಸಿಸ್‌ಗೆ ಹೋಲುವ ಮಾದರಿಗಳನ್ನು ನಾನು ಭೂತಾನ್‌ನಿಂದ ಪಡೆದುಕೊಂಡಿದ್ದೇನೆ" ಎಂದು ಸಗಣಿ ಜೀರುಂಡೆಗಳ ಮೇಲೆ ಕೆಲಸ ಮಾಡುವ, ಅಧ್ಯಯನದಲ್ಲಿ ಒಬ್ಬ ಸದಸ್ಯರಾದ ಜೆಕ್ ವಿಜ್ಞಾನಿ ಡಾ. ಡೇವಿಡ್ ಕ್ರಾಲ್ ಹೇಳುತ್ತಾರೆ.  ಇ.ತವಾಂಗೆನ್ಸಿಸ್‌ ಇದುವರೆಗೆ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಮತ್ತು ಅರುಣಾಚಲ ಪ್ರದೇಶದ ಗಡಿಯ ಭೂತಾನ್‌ನ ಕೆಲವು ಭಾಗಗಳಲ್ಲಿಲ್ಲಿ ಮಾತ್ರ ಕಂಡುಬಂದಿದೆ.

ಜಿಯೋಟ್ರುಪಿಡೆ ಕುಟುಂಬಕ್ಕೆ ಸೇರಿದ ಭೂಕೊರೆಯುವ ಸಗಣಿ ಜೀರುಂಡೆಗಳು ಸಗಣಿಗಳಲ್ಲಿ ಆಳವಾದ ಬಿಲಗಳನ್ನು ಅಗೆಯುತ್ತವೆ; ಕೆಲವು ಪ್ರಭೇದಗಳು 2 ಮೀಟರ್ ಆಳದ ವರೆಗೆ ಅಗೆಯುತ್ತವೆ. ಗಂಡು ಮತ್ತು ಹೆಣ್ಣು ಜೀರುಂಡೆಗಳು ಬಿಲದಲ್ಲಿ ಮಿಲನ ಹೊಂದುತ್ತವೆ. ನಂತರ, ಹೆಣ್ಣು ಮೊಟ್ಟೆಗಳನ್ನು ಅದರಲ್ಲಿ ಇಡುತ್ತದೆ. ಮೊಟ್ಟೆಗಳು ಬಿಲದೊಳಗೆ ಒಡೆಯುತ್ತವೆ.
 

ಹೊಸ ಪ್ರಭೇದ - ಇನೋಪ್ಲೋಟ್ರೂಪ್ಸ್ ತವಾಂಗೆನ್ಸಿಸ್ ಕಂಡುಬರುವ ಸ್ಥಳಗಳು. ಚಿತ್ರಕೃಪೆ: ಝುಆಲಾಜಿಕಲ್ ಸರ್ವೆ ಆಫ್ ಇಂಡಿಯಾ

 

ಎನೋಪ್ಲೋಟ್ರೂಪ್ಸ್ ಕುಲಕ್ಕೆ ಸೇರಿದ ಇಪ್ಪತ್ತು ಜಾತಿಯ ಜೀರುಂಡೆಗಳು ಭಾರತ, ಚೀನಾ, ಮ್ಯಾನ್ಮಾರ್, ವಿಯೆಟ್ನಾಂ ಮತ್ತು ಥೈಲ್ಯಾಂಡ್‌ನಲ್ಲಿ ಕಂಡುಬಂದಿವೆ. ಈಗ, ಇ.ತವಾಂಗೆನ್ಸಿಸ್‌ ಅನ್ನು ಭಾರತದಲ್ಲಿ ಕಂಡುಬರುವ ಭೂಕೊರೆಯುವ ಸಗಣಿ ಜೀರುಂಡೆಗಳಾದ ಇ. ಸ್ಪ್ಲೆಂಡೆನ್ಸ್, . ರೈನೋಸೆರೆಸ್ ಮತ್ತು ಇ. ಬೀಟಿ ಯ ಪಟ್ಟಿಗೆ ಸೇರಿಸಬಹುದು. ಎನೋಪ್ಲೋಟ್ರೂಪ್ಸ್ ಕುಲದ ಜೀರುಂಡೆಗಳನ್ನು ಜಿಯೋಟ್ರೂಪಿಡೆ ಕುಟುಂಬದಲ್ಲಿನ ಇತರ ತಳಿಗಳಿಂದ ಕೆಲವು ವಿಭಿನ್ನ ಲಕ್ಷಣಗಳಿಂದ ಪ್ರತ್ಯೇಕಿಸಬಹುದು. ಈ ಕುಲದ ಜೀರುಂಡೆಗಳ ಪುರುಷ ಜನನಾಂಗಗಳು ಸಮ್ಮಿತೀಯ ಆಕಾರದ ಅಂಗಗಳನ್ನು ಹೊಂದಿವೆ ಮತ್ತು ಉದ್ದನೆಯ ಮುಂಭಾಗದ ಕೊಂಬುಗಳು ಗಂಡು  ಚೆನ್ನಾಗಿ ಅಭಿವೃದ್ಧಿ ಹೊಂದುತ್ತವೆ. ಹೆಣ್ಣು ಮತ್ತು ಸಣ್ಣ ಗಂಡು ಜೀರುಂಡೆಗಳಲ್ಲಿ “ಪ್ರಾಮಿನಿಸೆನ್ಸ್” ಎಂದು ಕರೆಯಲ್ಪಡುವ ಸಣ್ಣ ಕೊಂಬಿನಂತಹ ಮುಂಚಾಚಿರುವಿಕೆಗಳಿವೆ. ಕೆಲ ವೈಶಿಷ್ಟ್ಯಗಳಲ್ಲಿ ಇ.ತವಾಂಗೆನ್ಸಿಸ್‌  ಪ್ರಭೇದವು ಇ. ರೈನೋಸೆರೆಸ್ ಪ್ರಭೇದವನ್ನು ಹೋಲುತ್ತದೆ.

ಹೊಸ ಪ್ರಭೇದದ ಜೀರುಂಡೆ , ಇ. ತವಾಂಗೆನ್ಸಿಸ್, ನೋಡಲು ಒಂದು ಆಕರ್ಷಕ ಜೀವಿ. ಅವುಗಳು ಅಂಡಾಕಾರದ, ಪೀನ-ಆಕಾರದ, ಹೊಳೆಯುವ, ಗಾಢ ನೀಲಿ ಬಣ್ಣದ ದೇಹವನ್ನು ಹೊಂದಿದ್ದು, ಮೇಲೆ ಹಸಿರು ಬಣ್ಣದ  ಛಾಯೆ ಇರುತ್ತದೆ. ಅವುಗಳ ಸ್ಪರ್ಶತಂತುಗಳು ಮತ್ತು ಪ್ರೋನೋಟಲ್ (ಗಂಟಲಿನ ಒಂದು ಹೊರಪದರ) ಕೊಂಬುಗಳು ಕಪ್ಪು ಬಣ್ಣದ್ದಾಗಿರುತ್ತವೆ. ಕಾಲುಗಳು ಕಿಬ್ಬೊಟ್ಟೆಯ ಬದಿಯಲ್ಲಿ ಹೊಳಪಿನ ನೀಲಿ ಬಣ್ಣದಲ್ಲಿ ಇರುತ್ತವೆ, ಕಣ್ಣುಗಳು ತಿಳಿ ಹಳದಿ ಬಣ್ಣದಲ್ಲಿರುತ್ತವೆ.

ಜೀರುಂಡೆಗಳು ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುತ್ತವೆ. ಗಂಡು ಮತ್ತು ಹೆಣ್ಣು ಜೀರುಂಡೆಗಳು,  ಅವುಗಳ ಸಂತಾನೋತ್ಪತ್ತಿ ಅಂಗಗಳನ್ನು ಹೊರತುಪಡಿಸಿ ಗುಣಲಕ್ಷಣಗಳಲ್ಲಿ ವ್ಯತ್ಯಾಸಗಳನ್ನು ತೋರಿಸುತ್ತವೆ. ಗಂಡು ಹೆಣ್ಣಿಗಿಂತ ಉದ್ದವಾಗಿರುತ್ತದೆ, ಮತ್ತು, ಹೆಣ್ಣಿನಲ್ಲಿ, ಮುಂಭಾಗದ ಮತ್ತು ಪ್ರೋನೋಟಲ್ ಕೊಂಬುಗಳು ಗಂಡು ಜೀರುಂಡೆಗಿಂತಲೂ ಚಿಕ್ಕದಾಗಿರುತ್ತವೆ.

ಈ ಜೀರುಂಡೆಗಳ ಒಂದು ವಿಶಿಷ್ಟ ಲಕ್ಷಣವೆಂದರೆ ಗಂಡು ದ್ವಿರೂಪತೆ, ಅಂದರೆ,  ಜಾತಿಯ ಗಂಡುಗಳಲ್ಲಿ ಗುಣಲಕ್ಷಣಗಳಲ್ಲಿನ ವ್ಯತ್ಯಾಸವಿರುತ್ತವೆ. ಕಿರಿಯ ಜೀರುಂಡೆಗಳಿಗೆ ಹೋಲಿಸಿದರೆ, ಚೆನ್ನಾಗಿ ಅಭಿವೃದ್ಧಿ ಹೊಂದಿದ ಗಂಡು ಜೀರುಂಡೆಗಳು,  ಉದ್ದವಾದ ಮುಂಭಾಗದ ಮತ್ತು ಪ್ರೋನೋಟಲ್ ಕೊಂಬುಗಳನ್ನು ಹೊಂದಿರುತ್ತವೆ. ಇಂತಹ ಒಂದು ವೈಶಿಷ್ಟ್ಯ, ಬದುಕುಳಿಯುವಿಕೆಯ ಅತ್ಯಗತ್ಯ ಲಕ್ಷಣ, ಮತ್ತು ಇದು ಸಂಯೋಗ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.

"ಹೆಣ್ಣನ್ನು ಆಕರ್ಷಿಸುವ, ಗಂಡು-ಗಂಡು ಸ್ಪರ್ಧೆಯಲ್ಲಿ,  ಹೆಣ್ಣು ಜೀರುಂಡೆ ಚೆನ್ನಾಗಿ ಅಭಿವೃದ್ಧಿ ಹೊಂದಿದ ಗಂಡು ಜೀರುಂಡೆಗೆ ಆದ್ಯತೆ ನೀಡುವ ಕಾರಣದಿಂದಾಗಿ, ದೊಡ್ಡ ಅಥವಾ ವಯಸ್ಕ ಗಂಡು ಜೀರುಂಡೆ ಹೆಣ್ಣನ್ನು ಪ್ರವೇಶಿಸುವ ದೊಡ್ಡ ಪ್ರಯೋಜನವನ್ನು ಹೊಂದಿರಬಹುದು" ಎಂದು ಈ ಅಧ್ಯಯನದ ಪ್ರಮುಖ ಲೇಖಕ ಡಾ. ದೇವಾಂಶು ಗುಪ್ತಾ ಹೇಳುತ್ತಾರೆ.

ಈ ಸಣ್ಣ ಸಗಣಿ ಪ್ರಿಯ ಜೀರುಂಡೆಗಳು ಪರಿಸರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ದಕ್ಷಿಣ ಆಫ್ರಿಕಾದಲ್ಲಿ,  ಈ ಸಗಣಿ ಜೀರುಂಡೆಗಳು ಮಣ್ಣಿನ ಪರಿಸ್ಥಿತಿಗಳನ್ನು ಸುಧಾರಿಸಿ,  ಪುನರ್ವಸತಿ ಮಾಡಿದ ಕಲ್ಲಿದ್ದಲು ಗಣಿಗಳಲ್ಲಿ ಸಸ್ಯಗಳ ಬೆಳವಣಿಗೆಗೆ ಕಾರಣವಾಗಿವೆ ಎಂಬ ಕೆಲ ನಿದರ್ಶನಗಳಿವೆ.