ಸಾಧಾರಣವಾಗಿ, ಫೋನ್ ಅನ್ನು ಅನ್ಲಾಕ್ ಮಾಡುವಾಗ ಅಥವಾ ಕಛೇರಿಯಲ್ಲಿ ಬಯೋಮೆಟ್ರಿಕ್ ಸ್ಕ್ಯಾನರುಗಳನ್ನು ಬಳಸುವಾಗ, ನಿಮ್ಮ ಬೆರಳನ್ನು ಸ್ಕ್ಯಾನರಿನ ಮೇಲ್ಮೈಗೆ ಒತ್ತ ಬೇಕಾಗುತ್ತದೆ. ಬೆರಳಚ್ಚುಗಳನ್ನು ಸೆರೆಹಿಡಿಯುವುದು ಹೀಗೆ. ಆದರೆ, ಹೊಸ ಸಂಶೋಧನೆಯೊಂದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸ್ವಚ್ಛ, ಸುಲಭ ಮತ್ತು ಹೆಚ್ಚು ನಿಖರವಾಗಿಸುವ ವಿಧಾನವನ್ನು ರೂಪಿಸಿದೆ. ಸಾಧನವನ್ನು ಮುಟ್ಟದೆಯೇ ಬೆರಳಚ್ಚನ್ನು ಸಂಗ್ರಹಿಸುವ ಮಾರ್ಗವನ್ನು ಹುಡುಕಿದೆ.

ನಾವು ಓದುವುದರಿಂದ ಪದಗಳನ್ನು ನೋಡುವ ರೀತಿ ಹೇಗೆ ಬದಲಾಗುತ್ತದೆ?

ಬೆಂಗಳೂರು
20 Jan 2020
ನಾವು ಓದುವುದರಿಂದ ಪದಗಳನ್ನು ನೋಡುವ ರೀತಿ ಹೇಗೆ ಬದಲಾಗುತ್ತದೆ?

ನಾವೆಲ್ಲರೂ ಓದುವುದನ್ನು ಹೇಗೆ ಕಲಿತೆವು ಎಂದು ನೆನಪಿಸಿಕೊಂಡರೆ- ಮೊದಲಿಗೆ ನಾವು ಪ್ರತಿಯೊಂದು ಅಕ್ಷರ ಹೇಗೆ ಉಚ್ಚರಿಸುವುದು ಎಂದು ಕಲಿಯುತ್ತೇವೆ. ನಂತರ ಪೂರ್ತಿ ಪದ(ಗಳು)  ಮತ್ತು  ವಾಕ್ಯಗಳನ್ನು ಸುಲಭವಾಗಿ ಹೇಳಲು ಕಲಿಯುತ್ತೇವೆ. ಆದರೆ, ನಾವು ಓದಲು ಕಲಿಯುವಾಗ, ನಮ್ಮ ಮೆದುಳಿನಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್- ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ವೆಲ್ಕಂ ಟ್ರಸ್ಟ್ / ಡಿಬಿಟಿ ಇಂಡಿಯಾ ಅಲಯನ್ಸ್ ಅನುದಾನಿತ ಇತ್ತೀಚಿನ ಅಧ್ಯಯನವೊಂದರಲ್ಲಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರು, ಓದುವಾಗ ಮೆದುಳಿನಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಿ, ಅವು ಪದಗಳನ್ನು ಸಂಸ್ಕರಿಸಲು ಮತ್ತು ಪರಿಣಾಮಕಾರಿಯಾಗಿ ಓದಲು ಹೇಗೆ ಸಹಾಯ ಮಾಡುತ್ತವೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನವನ್ನು ಸೈಕಲಾಜಿಕಲ್ ಸೈನ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ನಾವು ಪದಗಳನ್ನು ಓದುವಾಗ ನಮ್ಮ ಮೆದುಳಿನಲ್ಲಿ ಎಂತಹ ಬದಲಾವಣೆಗಳಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಸರಣಿ ಪ್ರಯೋಗಗಳನ್ನು ರೂಪಿಸಿದ್ದಾರೆ. ಈ ಅಧಯ್ಯನಕ್ಕೆ ಭಾರತೀಯ ಭಾಷೆಗಳಾದ ತೆಲುಗು ಮತ್ತು ಮಲಯಾಳಂ ಬಳಸಲಾಗಿದೆ.  ಈ ಭಾಷೆಗಳ ಲಿಪಿಗಳು ವಿಭ್ನಿನವಾದರೂ, ಅನೇಕ ಪದಗಳು ಒಂದೇ ರೀತಿಯ ಧ್ವನಿಯನ್ನು ಹೊಂದಿವೆ. ಈ ಪ್ರಯೋಗಗಳಲ್ಲಿ ಭಾಗವಹಿಸುವವರನ್ನು, ಒಂದು, ತೆಲುಗು ಓದಲು ಬರುವ ಮಲಯಾಳಂ ಬಾರದಿರುವ, ಮತ್ತು ಎರಡು, ಮಲಯಾಳಂ ಓದಲು ಬರುವ ಮತ್ತು ತೆಲುಗು ಬಾರದಿರುವ, ಗುಂಪುಗಳಾಗಿ ವಿಂಗಡಿಸಲಾಯಿತು. ದೃಶ್ಯ ಸಂಸ್ಕರಣೆಯನ್ನು ಅಳೆಯಲು, ಅಭಿನ್ನವಾದ ಅಕ್ಷರ ತಂತಿಗಳಲ್ಲಿ, ಬೆಸ ಅಕ್ಷರ ತಂತಿಯನ್ನು ಗುರುತಿಸಲು, ಭಾಗವಹಿಸುವವರಿಗೆ ಸೂಚಿಸಲಾಯಿತು. ಲಿಪಿಯನ್ನು ಓದಲು ಬರುವ ಬಾರದಿರುವ ಸಾಮರ್ಥ್ಯವನ್ನು ಲೆಕ್ಕಿಸದೇ, ಈ ಪ್ರಯೋಗವನ್ನು ಮಾಡಬಹುದಾಗಿತ್ತು.

ಭಾಗವಹಿಸುವವರು ತಮಗೆ ತಿಳಿದಿರುವ ಭಾಷೆಯ ಅಕ್ಷರಗಳನ್ನು ಕೇವಲ ಗುರುತಿಸುವಲ್ಲಿ ಉತ್ತಮವಾಗಿರುವುದಲ್ಲದೇ, ಅನ್ಯ ಭಾಷೆಯ ಅಕ್ಷರಗಳನ್ನೂ ಸಹ ಸುಲಭವಾಗಿ ಗುರುತಿಸಿದರು. ಪ್ರತ್ಯೇಕ ಅಕ್ಷರಗಳು ಹೆಚ್ಚು ಬೇರ್ಪಡಿಸಲ್ಪಟ್ಟಿದ್ದರಿಂದ ಅಕ್ಷರಗಳನ್ನು ಗುರುತಿಸುವ ಈ ಸಾಮರ್ಥ್ಯ ಸುಧರಿಸಿತು. ಹೆಚ್ಚು ಬೇರ್ಪಡಿಸಬಹುದಾದ ಅಕ್ಷರಗಳನ್ನು ಓದುವವರು ಹೆಚ್ಚು ನಿರರ್ಗಳವಾಗಿ ಮಾತನಾಡು ಸಾಮರ್ಥ್ಯ ಹೊಂದಿದ್ದರು. ಹಾಗಾಗಿ, ದೃಶ್ಯ ಸಂಸ್ಕರಣೆಯಲ್ಲಿನ ಈ ಬದಲಾವಣೆಗಳು ನಿರರ್ಗಳವಾಗಿ ಓದುವುದನ್ನು ಸಾಧ್ಯವಾಗಿಸುತ್ತದೆ ಎಂದು ಈ ಅಧ್ಯಯನ ಸೂಚಿಸುತ್ತದೆ.

ಓದುವ ಪ್ರಕ್ರಿಯೆಯಲ್ಲಿ, ಮೆದುಳಿನ ಚಟುವಟಿಕೆಯನ್ನು ಅಳೆಯಲು ಎಫ್‌ ಎಂ.ಆರ್‌.ಐ (ಫಂಕ್ಷನ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ನ್ನು ಸಂಶೋಧಕರು ಬಳಸಿದರು. ಈ ಚಿತ್ರಣ ತಂತ್ರವು ದೃಷ್ಟಿಗೋಚರವಾಗಿ ಪದಗಳನ್ನು ಸಂಸ್ಕರಿಸುವ ಮತ್ತು ಅದನ್ನು ಓದಲು ಸಹಕರಿಸುವ ಮೆದುಳಿನ ಭಾಗಗಳನ್ನು ಗುರುತಿಸುತ್ತದೆ. ವಸ್ತು ಗುರುತಿಸುವಿಕೆಗೆ ಅವಶ್ಯಕವಾದ ಈ ಮೆದುಳಿನ ಪ್ರತಿಕ್ರಿಯೆಗಳು ಲ್ಯಾಟರಲ್  ಆಕ್ಸಿಪಿಟಲ್ (ಪಾರ್ಶ್ವಹಿಡತಲೆ) ಪ್ರದೇಶದಲ್ಲಿ ಮಾತ್ರ ಪದಗಳಿಗೆ ಮತ್ತು ಅಕ್ಷರಗಳಿಗೆ ಉತ್ತಮವಾದ ಪ್ರತಿಕ್ರಿಯೆ ನೀಡುತ್ತದೆ ಎಂದು ಸಂಶೋಧಕರು ಕಂಡುಹಿಡಿದರು. ಹಾಗಾಗಿ, ಓದುವಿಕೆ, ಅಕ್ಷರಗಳ ಸಮಾನಾಂತರ ಸಂಸ್ಕರಣೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಈ ಸಂಶೋಧನೆ ದೃಢಪಡಿಸುತ್ತದೆ. ಅಲ್ಲದೇ,  ದೃಷ್ಟಿಗೋಚರವಾಗಿ ಪದಗಳನ್ನು ಸಂಸ್ಕರಿಸುವಲ್ಲಿ ಮತ್ತು ಅವುಗಳನ್ನು ಓದುವಲ್ಲಿ ತೊಡಗಿರುವ ಮೆದುಳಿನ ಪ್ರದೇಶಗಳ ಕುರಿತು ಈ ಸಂಶೋಧನೆಯು ಹೊಸ ಕ್ಷೇತ್ರಗಳನ್ನು ತೆರೆಯುತ್ತದೆ. ಪ್ರಾಯೋಗಿಕ ಸಾಕ್ಷ್ಯಗಳೊಂದಿಗೆ ಓದುವ ಪ್ರಾಮುಖ್ಯತೆಯನ್ನು ಬೆಂಬಲಿಸುವ ಕಾರಣ, ಈ ಸಂಶೋಧನೆ ಸಾಮಾಜಿಕ ಪ್ರಭಾವವನ್ನು ಹೊಂದಿದೆ.

“ಈ ಸಂಶೋಧನೆ ಮಕ್ಕಳಲ್ಲಿ ಓದುವ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ" ಎಂದು ಈ ಅಧ್ಯಯನದ ಪ್ರಮುಖ ಲೇಖಕ ಆಕಾಶ್ ಅಗ್ರವಾಲ್ ಹೇಳುತ್ತಾರೆ. “ಓದುವ ತೊಂದರೆಗಳು ದೃಶ್ಯ, ಶ್ರವಣೇಂದ್ರಿಯ ಅಥವಾ ಭಾಷಾ ಸಂಸ್ಕರಣಾ ಕೊರತೆಯಿಂದ ಉಂಟಾಗಬಹುದು. ಆದರೆ, ಇಂತಹ  ದೃಶ್ಯ ಸಂಸ್ಕರಣಾ ಘಟಕಗಳ ಮೇಲೆ ಈ ಹಿಂದೆ ಅಧ್ಯಯನ ನಡೆಸಿರಲಿಲ್ಲ. ಈ ದೃಶ್ಯ ಸಂಸ್ಕರಣಾ ತೊಂದರೆಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ನಮ್ಮ ಈ ಸಂಶೋಧನೆ ಸಹಾಯ ಮಾಡುತ್ತದೆ ”ಎಂದು ಅವರು ವಿವರಿಸುತ್ತಾರೆ.

ಮುಂದಿನ ಹಂತವಾಗಿ, ದೃಶ್ಯ ಸಂಸ್ಕರಣೆಯನ್ನು ಬಳಸಿ, ಮಕ್ಕಳಲ್ಲಿ ಓದುವ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಮತ್ತು ಸುಧಾರಿಸಲು, ಕೆಲ ಲಾಭೋದ್ದೇಶವಿಲ್ಲದ ಸಂಸ್ಥೆಗಳೊಂದಿಗೆ ಸಹಯೋಗ ನಡೆಸಲು ಸಂಶೋಧಕರು ಮುಂದಾಗಿದ್ದಾರೆ.


 

Kannada