ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಪಶ್ಚಿಮ ಘಟ್ಟಗಳ ಅವನತಿಗೀಡಾದ ಕಾಡುಗಳು ಸ್ಥಳೀಯ ಮರ ಪ್ರಭೇದಗಳಿಂದ ಪುನಶ್ಚೇತನಗೊಳ್ಳಬಹುದೇ?

Read time: 1 min
Bengaluru
27 Dec 2019
ಪಶ್ಚಿಮ ಘಟ್ಟಗಳ ಅವನತಿಗೀಡಾದ  ಕಾಡುಗಳು ಸ್ಥಳೀಯ ಮರ ಪ್ರಭೇದಗಳಿಂದ ಪುನಶ್ಚೇತನಗೊಳ್ಳಬಹುದೇ?

1960ರಿಂದ, ಜಗತ್ತು ತನ್ನ ಉಷ್ಣವಲಯದ ಸುಮಾರು ಅರ್ಧದಷ್ಟು ಕಾಡುಗಳನ್ನು  ತೋಟಗಾರಿಕೆ, ಮರಕಡಿತ, ಕಾಡಿನ ಬೆಂಕಿ ಮತ್ತು ರೋಗಗಳಿಗೆ ಕಳೆದುಕೊಂಡಿದೆ ಎಂದು ನಿಮಗೆ ತಿಳಿದಿದೆಯೇ? ಪ್ರಸ್ತುತ, ವರ್ಷಕ್ಕೆ ಸುಮಾರು 8 ದಶಲಕ್ಷ ಹೆಕ್ಟೇರ್ ಉಷ್ಣವಲಯದ ಕಾಡುಗಳು ಕಳೆದುಹೋಗಿವೆ. ಉಷ್ಣವಲಯದ ಕಾಡುಗಳು ಜಾಗತಿಕ ಜೀವವೈವಿಧ್ಯತೆಯ ನೆಲೆಯಾಗಿರುವುದರಿಂದ,  ಇದು ಕೇವಲ ಜೀವವೈವಿಧ್ಯತೆಯ ಮೇಲೆ  ಪರಿಣಾಮ ಬೀರುವುದಲ್ಲದೇ, ೧.೬ ಶತಕೋಟಿ ಜನರ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ. ಆದರೂ, ಮಾನವ ಪ್ರಾಬಲ್ಯದ ಭೂದೃಶ್ಯಗಳಲ್ಲಿ, ಅವನತಿಗೀಡಾದ  ಕಾಡುಗಳ ಪುನಶ್ಚೇತನ, ಇದುವರೆಗೆ ಸಂಭವಿಸಿರುವ ನಷ್ಟಗಳನ್ನು ಹಿಮ್ಮೆಟ್ಟಿಸಲು ಮತ್ತು ಈ ಕಾಡುಗಳ ಚೇತರಿಕೆಗೆ ಸಹಾಯ ಮಾಡುತ್ತದೆ.

ಒಂದು ಕಾಲದಲ್ಲಿ ಕಾಡುಗಳಾಗಿದ್ದ ಪ್ರದೇಶಗಳಲ್ಲಿ ಸ್ಥಳೀಯ ಮರ ಪ್ರಭೇದಗಳನ್ನು ಬೆಳೆಸುವ ಮೂಲಕ ಅಥವಾ ಸಸಿಗಳನ್ನು ನೆಡುವುದರ ಮೂಲಕ ಮರು ಅರಣ್ಯೀಕರಣ ಮಾಡುವುದು ಅಥವಾ ಅವನತಿ ಹೊಂದಿದ ಕಾಡುಗಳನ್ನು ಮಾನವನ ಹಸ್ತಕ್ಷೇಪವಿಲ್ಲದೇ ಸ್ವಾಭಾವಿಕವಾಗಿ ಮತ್ತೆ ಬೆಳೆಯಲು ಬಿಡುವ ಈ ಪ್ರಕ್ರಿಯೆಗಳು ಕಾಡುಗಳ ಪುನಶ್ಚೇತನಕ್ಕೆ ಸಹಾಯ ಮಾಡುತ್ತವೆ. ಮೊದಲನೆಯದನ್ನು ಸಕ್ರಿಯ ಪುನಶ್ಚೇತನ ಎಂದು ಮತ್ತು ಎರಡನೆಯದನ್ನು ನಿಷ್ಕ್ರಿಯ ಪುನಶ್ಚೇತನ ಎಂದು ಕರೆಯಲಾಗುತ್ತದೆ.

ಎಕೋಸ್ಫಿಯರ್ ಎಂಬ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾದ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್‌ಇಆರ್‌ಬಿ) ಮತ್ತು ರುಫೋರ್ಡ್ ಸ್ಮಾಲ್ ಗ್ರ್ಯಾಂಟ್ಸ್ ಫೌಂಡೇಶನ್ ಅನುದಾನಿತ ಇತ್ತೀಚಿನ ಅಧ್ಯಯನವೊಂದರಲ್ಲಿ, ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಮೈಸೂರಿನ ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನ ಸಂಶೋಧಕರು ಪಶ್ಚಿಮ ಘಟ್ಟದ ​​ಛಿದ್ರಗೊಂಡ ಮಳೆಕಾಡುಗಳಲ್ಲಿ ಸಕ್ರಿಯ ಪುನಶ್ಚೇತನದ ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ.

ತಮಿಳುನಾಡಿನ ವಾಲ್ಪಾರೈನ ಅರಣ್ಯ ಪ್ರದೇಶದ ಛಿದ್ರಗೊಂಡ ಕಾಡು ಭಾಗಗಳ ಮೇಲಾದ ಪರಿಣಾಮಗಳನ್ನು ಅಧ್ಯಯನ ಮಾಡಲು ಸಂಶೋಧಕರು ಮಳೆ ಕಾಡುಗಳ ಜೈವಿಕ ಸೂಚಕಗಳಾದ, ಸಾಂದ್ರತೆ, ಮೇಲಾವರಣ ಹೊದಿಕೆ (ಕ್ಯಾನೋಪಿ) ಮತ್ತು ಮರಗಳ ವ್ಯಾಸ-ಎತ್ತರ ಅನುಪಾತವನ್ನು ಬಳಸಿದರು. ಅಣ್ಣಾಮಲೈ ಬೆಟ್ಟಗಳ ಒಂದು ಭಾಗವಾದ ವಾಲ್ಪಾರೈ ಪ್ರಸ್ಥಭೂಮಿ ಮಾನವ-ಮಾರ್ಪಡಿಸಿದ ಭೂದೃಶ್ಯ. ಇಲ್ಲಿ, ಉಷ್ಣವಲಯದ ನಿತ್ಯಹರಿದ್ವರ್ಣ ಮಳೆಕಾಡುಗಳು, ತೋಟಗಳಂತಹ ವಾಣಿಜ್ಯ ಉದ್ದೇಶಗಳಿಗಾಗಿ 1890 ಮತ್ತು 1940 ರ ನಡುವೆ ವ್ಯಾಪಕ ಅರಣ್ಯನಾಶಕ್ಕೆ ಒಳಪಟ್ಟಿದ್ದವು. ಮಳೆಕಾಡಿನ ಯಾವುದೇ ಭಾಗಗಳು ಉಳಿದಿದ್ದರೂ, ಈಗಿನ ಮರಕಡಿತ (ವಾಣಿಜ್ಯ ಉದ್ದೇಶಗಳಿಗಾಗಿ) ಕಾರ್ಯಾಚರಣೆಗಳು ಮತ್ತು ಸ್ಥಳೀಯ ಬಳಕೆಗಾಗಿ ನಡೆಯುತ್ತಿರುವ ಉರುವಲು ಸಂಗ್ರಹದಿಂದ, ಈ ಕಾಡುಗಳು ಅವನತಿ ಹೊಂದುತ್ತಿವೆ. ಆದರೆ, 2000ರಿಂದೀಚೆಗೆ, ಅನೇಕ ತೋಟಗಾರಿಕೆಯ ಕಂಪನಿಗಳು ಕಳೆಗಳನ್ನು ತೆಗೆದುಹಾಕಿ ಮತ್ತು ಈ ಕಾಡುಗಳಲ್ಲಿ ಸ್ಥಳೀಯ ಮರದ ಸಸಿಗಳನ್ನು ನೆಡುವ ಮೂಲಕ ಪುನಶ್ಚೇತನದ ಪ್ರಯತ್ನಗಳಿಗೆ ಬೆಂಬಲ ನೀಡಿವೆ.

ಮರಗಳ ಇಂಗಾಲದ ಶೇಖರಣಾ ಸಾಮರ್ಥ್ಯದ ಮೇಲೆ ಈ ವಿಧಾನಗಳ ಪರಿಣಾಮಗಳನ್ನು ಅಂದಾಜು ಮಾಡಲು ಸಕ್ರಿಯ ಮತ್ತು ನಿಷ್ಕ್ರಿಯ ವಿಧಾನಗಳನ್ನು ಬಳಸಿಕೊಂಡು ಪುನರುತ್ಪಾದಿಸಿದ ಅರಣ್ಯ ಭಾಗಗಳಿಂದ ಹನ್ನೊಂದು ಜೈವಿಕ ಸೂಚಕಗಳನ್ನು ಈ ಅಧ್ಯಯನವು ಮೌಲ್ಯಮಾಪನ ಮಾಡಿದೆ. ಸಂಶೋಧಕರು ಈ ಪ್ರಯತ್ನಗಳನ್ನು ಈ ಪ್ರದೇಶದ ಅಸ್ಪೃಷ್ಟ ಮಳೆಕಾಡು ಭಾಗಗಳೊಂದಿಗೆ ಹೋಲಿಸಿ ನೋಡಿದಾಗ, ವಿವಿಧ ಹಂತಗಳಲ್ಲಿ ನಿಷ್ಕ್ರಿಯ ಚೇತರಿಕೆಗಿಂತ ಸಕ್ರಿಯ ಪುನಶ್ಚೇತನ ಉತ್ತಮ ಎಂದು ಫಲಿತಾಂಶಗಳು ತೋರಿಸಿವೆ.

ಅಸ್ಪೃಷ್ಟ ಮಳೆಕಾಡುಗಳಿಂದ, ಪುನಶ್ಚೇತನಗೊಳಿಸಲಾದ ತಾಣಗಳ ಅಂತರದ ಹೆಚ್ಚಳದೊಂದಿಗೆ ಸಕ್ರಿಯ ಪುನಶ್ಚೇತನದ ಪರಿಣಾಮಗಳು ಹೆಚ್ಚಾಗುತ್ತವೆ ಎಂಬ ಕಲ್ಪನೆಯೊಂದಿಗೆ ಸಂಶೋಧಕರು ಪ್ರಾರಂಭಿಸಿದರು.

“ಇದಕ್ಕೆ ಒಂದು ಕಾರಣವೆಂದರೆ ಕೋತಿಗಳು ಮತ್ತು ಹಾರ್ನ್‌ಬಿಲ್‌ಗಳಂತಹ ಪ್ರಾಣಿಪಕ್ಷಿಗಳು ಬೀಜಗಳನ್ನು ಹರಡಲು ವಿವಿಕ್ತ ಕಾಡುಗಳ ಭಾಗಗಳಿಗೆ ಭೇಟಿ ನೀಡುವ ಸಾಧ್ಯತೆಗಳು ಕಡಿಮೆ” ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕ ಹಾಗೂ ಈ ಅಧ್ಯಯನದ ಲೇಖಕರಲ್ಲಿ ಒಬ್ಬರಾದ, ಡಾ. ಆನಂದ್ ಒಸುರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಸಕ್ರಿಯವಾಗಿ ಪುನಶ್ಚೇತನಗೊಳಿಸಲಾದ ತಾಣಗಳು ಅವುಗಳ ನಿಷ್ಕ್ರಿಯವಾಗಿ ವೃದ್ಧಿಯಾದ ಪ್ರತಿರೂಪಗಳಿಗಿಂತ, ಮಳೆಕಾಡುಗಳ ಚೇತರಿಕೆಯ ಮೇಲೆ ಸಕಾರಾತ್ಮಕ ಮತ್ತು ಸ್ಥಿರವಾದ ಪರಿಣಾಮವನ್ನು ಬೀರುತ್ತವೆ ಎಂದು ಫಲಿತಾಂಶಗಳು ತೋರಿಸಿವೆ. ಈ ತಾಣಗಳು ಪ್ರಮುಖ ಮರ ಪ್ರಭೇದಗಳ ವೈವಿಧ್ಯತೆಯನ್ನು ಮತ್ತು ಹೆಚ್ಚಿನ ಸಾಂದ್ರತೆಯನ್ನು  ಪ್ರದರ್ಶಿಸಿವೆ. ಸ್ಥಳೀಯ ಮರಗಳನ್ನು ನೆಡುವ ಮೊದಲು ಲಂಟಾನಾದಂತಹ ಸ್ಥಳೀಯೇತರ ಆಕ್ರಮಣಕಾರಿ ಕಳೆಗಳನ್ನು ತೆಗೆದುಹಾಕುವುದನ್ನು ಸಕ್ರಿಯ ಪುನಶ್ಚೇತನ ಒಳಗೊಂಡಿದೆ.

ಈ ತಾಣಗಳು ಪ್ರತಿ 0.04 ಹೆಕ್ಟೇರ್ ಪ್ಲಾಟ್‌ಗೆ ಸರಾಸರಿ 14 ಮರ ಪ್ರಭೇದಗಳನ್ನು ಹೊಂದಿದ್ದರೆ, ನೈಸರ್ಗಿಕವಾಗಿ ಪುನರ್ವೃದ್ಧಿಯಾದ ತಾಣಗಳು ಕೇವಲ 8 ಮಾತ್ರ ಹೊಂದಿದ್ದವು. ಈ ಶೋಧನೆಯು, ಅಸ್ಪೃಷ್ಟ ಮಳೆಕಾಡುಗಳಿಂದ ಪುನರ್ವೃದ್ಧಿಯಾದ ತಾಣಗಳ ಅಂತರದ ಹೆಚ್ಚಳದೊಂದಿಗೆ ಸಕ್ರಿಯ ಪುನರ್ವೃದ್ಧಿಯ ಪರಿಣಾಮಗಳು ಹೆಚ್ಚಾಗುತ್ತವೆ ಎಂಬ ಸಂಶೋಧಕರ ಊಹೆಗೆ ಅನುಗುಣವಾಗಿದ್ದು,  ಇಲ್ಲಿ ಅಸ್ಪೃಷ್ಟ ಹಾಗೂ ಸಮೀಪವಿರುವ ಕಾಡಿನ ಭಾಗಗಳ ನಡುವೆಯ ದೂರ ಹೆಚ್ಚಾದಂತೆ, ಸಕ್ರಿಯ ಪುನಶ್ಚೇತನದ ಪರಿಣಾಮಗಳೂ ಹೆಚ್ಚಾಗುತ್ತಿವೆ ಎಂದು ಫಲಿತಾಂಶಗಳು ತೋರಿಸುತ್ತವೆ.

7-15 ವರ್ಷಗಳ ನಂತರ ಸಕ್ರಿಯವಾಗಿ ಪುನಶ್ಚೇತನಗೊಳಿಸಲಾದ ತಾಣಗಳಲ್ಲಿ, ನೆಲದ-ಮೇಲಿನ  ಇಂಗಾಲದ ಶೇಖರಣೆ 47% ರಷ್ಟು ಉತ್ತಮವಾಗಿದೆ ಎಂದು ಕಂಡುಬಂದಿದೆ. ಹವಾಮಾನ ತಗ್ಗಿಸುವಿಕೆಯ ಗುರಿಗಳನ್ನು ಪೂರೈಸಲು ಕಾರ್ಬನ್ ಸಂಗ್ರಹವು ನಿರ್ಣಾಯಕ. ಹಾಗಾಗಿ, ಮರಗಳನ್ನು ನೆಟ್ಟು ಕಾರ್ಬನ್ ಅನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಅವಶ್ಯಕತೆ ಇದೆ.

ಮುಂದೊಂದು ದಿನ  ಸಕ್ರಿಯ ಪುನಶ್ಚೇತನಕ್ಕೊಳಪಟ್ಟಂತಹ ಮಳೆಕಾಡುಗಳು ಕಳೆದುಕೊಂಡ ವೈಭವವನ್ನು ಪಡೆಯಬಹುದು ಎಂಬ ಭರವಸೆಯನ್ನು ನಿರ್ಮಿಸಿದರೂ, ಆಕ್ರಮಣಕಾರಿ ಸಸ್ಯಗಳು ಬೇಗ ಹರಡಿಕೊಳ್ಳುವಂತಹ ಸಮಸ್ಯೆಗಳು ನಿರ್ಮಾಣವಾಗುವ ಸೂಚನೆಗಳಿವೆ.

“ಸಕ್ರಿಯವಾಗಿ ವೃದ್ಧಿಯಾದಂತಹ ಕಾಡುಗಳ ಕೆಳಭಾಗಗಳಲ್ಲಿ ಆಕ್ರಮಣಕಾರಿ ಪ್ರಭೇದಗಳು ಅಭಿವೃದ್ಧಿ ಹೊಂದುತ್ತಿರುವುದನ್ನು ನಾವು ಕಂಡೆವು”ಎಂದು ಡಾ ಒಸುರಿ ಹೇಳುತ್ತಾರೆ.

ಮುಂದಿನ ಅಧ್ಯಯನಗಳು, ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಆಕ್ರಮಣಕಾರಿ ಕಳೆಗಳ ಪ್ರಭೇದಗಳನ್ನು ವಿರೋಧಿಸುವ ಸ್ಥಳೀಯ ಗಿಡಮರ ಪ್ರಭೇದಗಳ ಪುನರ್ವೃದ್ಧಿಯನ್ನು ಸುಧಾರಿಸುವ ವಿಧಾನಗಳನ್ನು ರೂಪಿಸುವ ಗುರಿಗಳನ್ನು ಹೊಂದಿವೆ.

ಯಶಸ್ವಿ ಅರಣ್ಯ ಚೇತರಿಕೆಗಾಗಿ, ದೀರ್ಘಾವಧಿಯ ಪುನಶ್ಚೇತನದ ಕಾರ್ಯಕ್ರಮಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

“ಈ ರೀತಿಯ ಅಧ್ಯಯಗಳು, ನಡೆಯುತ್ತಿರುವ ಪುನಶ್ಚೇತನದ ಪ್ರಯತ್ನಗಳ ಪರಿಣಾಮಕಾರಿತ್ವದ ಅಥವಾ ಅದರ ಕೊರತೆಯ ಮೇಲೆ ಬೆಳಕು ಚೆಲ್ಲುತ್ತವೆ. ಹಾಗಾಗಿ, ದೀರ್ಘಾವಧಿಯಲ್ಲಿ ಇಂತಹ ವಿವಿಧ ನಿಯತಾಂಕಗಳ ಚೇತರಿಕೆಯ ವ್ಯಾಪ್ತಿ ಮತ್ತು ಅದರ ದರಗಳ ಬಗ್ಗೆ ಅರ್ಥೈಸಿಕೊಳ್ಳಲು ನಾವು ಪ್ರತಿ ಕೆಲವು ವರ್ಷಗಳಿಗೊಮ್ಮೆ ಈ ತರಹದ ಅಧ್ಯಯನಗಳನ್ನು ನಡೆಸುವ ಗುರಿಯನ್ನು ಹೊಂದಿದ್ದೇವೆ." ಎಂದು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.