2016 ರಲ್ಲಿ, ಒಂದು ದಿನ, ಕ್ಷೇತ್ರ ಪರಿಸರ ವಿಜ್ಞಾನಿ ವಿಘ್ನೇಶ್ ಕಾಮತ್ ಅವರು ತಮಿಳುನಾಡಿನ ಕಾಲಕ್ಕಾಡ್ ಮುಂಡಂತುರೈ ಹುಲಿ ಅಭಯಾರಣ್ಯದಲ್ಲಿ (ಕೆಎಂಟಿಆರ್) ಕಪ್ಪೆಗಳನ್ನು ಅಧ್ಯಯನ ಮಾಡುತ್ತಿದ್ದಾಗ, ಆಕಸ್ಮಿಕವಾಗಿ ಕಾಡಿನ ಮಧ್ಯೆ ನೀಲಗಿರಿ ಲಂಗೂರಿನ (ಬುಕ್ಕ/ಮುಸುವ/ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಉದ್ದನೆಯ ಬಾಲಹೊಂದಿರುವ ಕರಿಮೂತಿಯ ಕಪಿ) ಭಾಗಶಃ ತಿನ್ನಲಾಗಿದ್ದ ಶವವನ್ನು ಗಮನಿಸಿದರು. ಕುತೂಹಲಕಾರಿಯಾದ ಅವರು, ಈ ಕಪಿಯನ್ನು ಯಾವ ಪ್ರಾಣಿ ಈ ರೀತಿ ಭಕ್ಷಿಸಿದೆ ಎಂದು ನೋಡಬಯಸಿದರು.

ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.
By Sudhira H S
ಬೆಂಗಳೂರು / Jul 6, 2022