ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಈ ಇರುವೆಗಳಿಗೆ ಹೊಸ ಗೂಡಿನ ದಾರಿ ದೂರವಿಲ್ಲ!

Read time: 1 min
ಬೆಂಗಳೂರು
18 Dec 2019
ಈ ಇರುವೆಗಳಿಗೆ ಹೊಸ ಗೂಡಿನ ದಾರಿ ದೂರವಿಲ್ಲ!

ಗೂಗಲ್ ನಕ್ಷೆಗಳ ಇಂದಿನ ಯುಗದಲ್ಲಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಡಿಮೆ ಸಮಯ ಅಥವಾ ಕಡಿಮೆ ದೂರದಲ್ಲಿ ಹೋಗುವುದು ಇಂದು ಬಹು ಸುಲಭ. ಮೊಬೈಲ್ ಅಪ್ಲಿಕೇಶನ್‌ಗಳಲ್ಲಿನ ಸಂಕೀರ್ಣ ಕ್ರಮಾವಳಿಗಳು, ಸಂಚಾರ, ಮಾರ್ಗ ನಿರ್ಬಂಧಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಇರುವ ದೂರವನ್ನು ಗಣನೆಗೆ ತೆಗೆದುಕೊಂಡು, ಸಂಕೀರ್ಣ ಗಣಿತಗಳ ಮುಖೇನ ಉತ್ತಮ ಮಾರ್ಗವನ್ನು ಆರಿಸಿ ನಮ್ಮ ಮುಂದಿಡುತ್ತವೆ. ಮೊಬೈಲ್ ಹಾಗೂ ಕಂಪ್ಯೂಟರ್ಗಳು ಒಂದೆಡೆ ಆದರೆ, ಇನ್ನೊಂದೆಡೆ, ಕೀಟಗಳೂ ಸಹ, ಅವುಗಳ ಸಣ್ಣ ಮಿದುಳುಗಳೊಂದಿಗೆ, ಇಂತಹ ಅತ್ಯಾಧುನಿಕ ಲೆಕ್ಕಾಚಾರಗಳನ್ನು ಮಾಡಬಹುದು. ದೊಡ್ಡ ಜೇನು ನೊಣಗಳು, ಜೇನುಹುಳುಗಳು ಮತ್ತು ಇರುವೆಗಳು ವಿಭಿನ್ನ ಮಾರ್ಗಗಳನ್ನು ಒಂದಕ್ಕೊಂದು ಹೋಲಿಸಿ, ಹೆಚ್ಚು ಸೂಕ್ತವಾದ ಮಾರ್ಗವನ್ನು ಆರಿಸುತ್ತವೆ ಎಂದು ಕೆಲ ಅಧ್ಯಯನಗಳು ತೋರಿಸಿದೆ. ಈ  ವಿಷಯದಲ್ಲಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಇರುವೆಗಳು ‘ಫೆರೊಮೋನ್’ ಎಂಬ ರಾಸಾಯನಿಕವನ್ನು ಅವಲಂಬಿಸುತ್ತವೆ. ಇವಕ್ಕೆ ಹಿಂಜೋಲು ಇಡುವ (ಟ್ರೈಲ್ ಲೇಯಿಂಗ್ ಅಂಟ್ಸ್) ಇರುವೆಗಳೆಂದು ಹೇಳಲಾಗುತ್ತದೆ.

ಆದರೆ, ಇಂತಹ ರಾಸಾಯನಿಕ ಜಾಡನ್ನು ಇಡದಿರುವ ಇರುವೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೇಗೆ ಹೋಗುತ್ತವೆ? ಇವೂ ಸಹ ಇಂತಹ ಸಂಕೀರ್ಣ ಗಣಿತವನ್ನು  ಮಾಡಿ ಅತ್ಯುತ್ತಮ ಮಾರ್ಗವನ್ನು ಆಯ್ಕೆ ಮಾಡುತ್ತವೆ ಎಂದು ಕೋಲ್ಕತ್ತಾದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಐಐಎಸ್ಇಆರ್) ಸಂಶೋಧಕರ ಹೊಸ ಅಧ್ಯಯನವು ಹೇಳುತ್ತದೆ. ಭಾರತೀಯ ರಾಣಿ-ರಹಿತ, ಜಾಡು ಇಡದ ಇರುವೆಗಳು ತಮ್ಮ ಗೂಡುಗಳನ್ನು ಸ್ಥಳಾಂತರಿಸುವಾಗ ಕಡಿಮೆ ದೂರದ ಮಾರ್ಗವನ್ನು ಕಂಡುಹಿಡಿಯಬಹುದೇ ಎಂದು ಕೇಳಿದೆ. “ಹೌದು” ಎಂದು ಅಧ್ಯಯನದ ಪ್ರಮುಖ ಲೇಖಕರಾದ ಸ್ನಿಗ್ಧ ಮುಖೋಪಾಧ್ಯಾಯ್ ಹೇಳುತ್ತಾರೆ. ಈ ಅಧ್ಯಯನವು ಜರ್ನಲ್ ಆಫ್ ಎಕ್ಸ್ಪರಿಮೆಂಟಲ್ ಬಯಾಲಜಿಯಲ್ಲಿ ಪ್ರಕಟವಾಗಿದೆ.

ಭಾರತೀಯ ಉಪಖಂಡದ ಸ್ಥಳೀಯ ಪ್ರಭೇದವಾದ ಭಾರತೀಯ ರಾಣಿ ರಹಿತ ಇರುವೆ (ಡಯಾಕಾಮ ಇಂಡಿಕಮ್) ನಲ್ಲಿ ಸಂಶೋಧಕರು ಈ ನಡವಳಿಕೆಯನ್ನು ಅಧ್ಯಯನ ಮಾಡಿದ್ದಾರೆ. ಈ ಕಪ್ಪು ಬಣ್ಣದ ಇರುವೆಗಳು ಸುಮಾರು 20-300 ವಯಸ್ಕ ಇರುವೆಗಳನ್ನು ಮತ್ತು ಮೊಟ್ಟೆಗಳನ್ನು ಇಡಬಲ್ಲ ಒಂದು ಇರುವೆಯನ್ನು  ಒಳಗೊಂಡಿರುವ ಸಣ್ಣ ವಸಾಹತುಗಳಲ್ಲಿ ವಾಸಿಸುತ್ತವೆ. ಭೌತಿಕ ಹಾನಿ ಅಥವಾ ಇತರ ಅಂಶಗಳಿಂದಾಗಿ ಅದರ ಗೂಡುಗಳು ತೊಂದರೆಗೊಳಗಾದಾಗ, “ಪರಿಶೋಧಕರು” ಎಂದು ಕರೆಯಲ್ಪಡುವ ಕೆಲವು ವಸಾಹತು ಸದಸ್ಯರು ತಮ್ಮ ಸಂಪೂರ್ಣ ವಸಾಹತು ಪ್ರದೇಶವನ್ನು ಸ್ಥಳಾಂತರಿಸಲು ಹೊಸ ಗೂಡನ್ನು ಹುಡುಕುತ್ತವೆ.

ಪರಿಶೋಧಕರ ಒಂದು ಭಾಗವು ಪ್ರತಿ ವಸಾಹತು ಸದಸ್ಯರನ್ನು ಹೊಸ ಗೂಡಿಗೆ ಮಾರ್ಗದರ್ಶನ ಮಾಡಲು ಏಕಸಾಲು ‘ನಾಯಕ’ರ ಪಾತ್ರವನ್ನು ವಹಿಸುತ್ತದೆ. “ಟ್ಯಾಂಡೆಮ್ ರನ್ನಿಂಗ್” ಅಥವಾ ಒಂದಕ್ಕೆ ಒಂದು ಜೊತೆಗೂಡಿ ಹೋಗುವ  ಪ್ರಕ್ರಿಯೆಯಲ್ಲಿ, ಪ್ರತಿ ‘ನಾಯಕ’ ಇರುವೆ ಅನುಯಾಯಿ ಇರುವೆಗೆ ದಾರಿ ಮಾಡಿಕೊಡುತ್ತದೆ. ಈ ಜೋಡಿ ಹೊಸ ಗೂಡನ್ನು ತಲುಪುವವರೆಗೆ ನಾಯಕ ಇರುವೆಯ ಕಾಲುಗಳು ಮತ್ತು ಹೊಟ್ಟೆಯನ್ನು ಅದರ ಆಂಟೆನಾಗಳೊಂದಿಗೆ ನಿರಂತರವಾಗಿ ಸ್ಪರ್ಶಿಸುವ ಮೂಲಕ ಅನುಯಾಯಿ  ಇರುವೆ ಹಿಂದುಳಿಯುತ್ತದೆ. ಹೀಗೆ, ಇಡೀ ವಸಾಹತು ಸ್ಥಳಾಂತರಗೊಳ್ಳುವವರೆಗೂ ನಾಯಕ ಇರುವೆಗಳು ಎರಡೂ ಗೂಡುಗಳ ನಡುವೆ ಅನೇಕ ಪ್ರವಾಸಗಳನ್ನು ಕೈಗೊಂಡು, ಯಾವ ಅನುಯಾಯಿ ಇರುವೆಯೂ ಹಿಂದುಳಿಯದಂತೆ ನೋಡಿಕೊಂಡು, ಯಶಸ್ವಿಯಾಗಿ ಎಲ್ಲ ಇರುವೆಗಳನ್ನು ಹೊಸ ಗೂಡಿಗೆ ಸ್ಥಳಾಂತರಿಸುತ್ತವೆ. .

ಆದರೆ, ಹೊಸ ನೆಲೆಗೆ ಕಂಡುಕೊಂಡಂತಹ ಈ ಪ್ರಯಾಣವು ಅಷ್ಟು ಸುಲಭವಲ್ಲ. ಇರುವೆಗಳ ಇಡೀ ವಸಾಹತು ಸ್ಥಳಾಂತರಗೊಂಡಾಗ, ಅದು ತಾಪಮಾನ, ತೇವಾಂಶ, ಪರಭಕ್ಷಕಗಳು ಮತ್ತು ಕಳ್ಳರಿಗೆ ಗುರಿಯಾಗುವ ಎಲ್ಲ ಸಾಧ್ಯತೆಗಳಿರುತ್ತವೆ.  ಆದ್ದರಿಂದ, ವಯಸ್ಕ ಇರುವೆಗಳ ಜೊತೆಯಲ್ಲಿ, ಎಳೆಯ ಇರುವೆಗಳು ಮತ್ತು ಸಂಗ್ರಹಿಸಿದ ಆಹಾರವನ್ನು ಸಾಗಿಸುವ ಸಲುವಾಗಿ, ಸ್ಥಳಾಂತರದ ಈ ಕಾರ್ಯವು ಶೀಘ್ರವಾಗಿ ನಡೆಯಬೇಕಾಗಿದೆ. ಹೊಸ ಗೂಡಿಗೆ, ಕಡಿಮೆ ದೂರದ ದಾರಿಯಲ್ಲಿ, ಕಡಿಮೆ ಸಮಯದಲ್ಲಿ, ಇರುವೆಗಳ  ವಸಾಹತುವನ್ನು  ಸ್ಥಳಾಂತರಿಸುವ ಜವಾಬ್ದಾರಿ ‘ನಾಯಕ’ ಇರುವೆಗಳ ಮೇಲೆ ಇರುತ್ತದೆ.

ಈ ನಡವಳಿಕೆಯನ್ನು ಆಳವಾಗಿ ಅಧ್ಯಯನ ಮಾಡಲು, ಸಂಶೋಧಕರು ಪ್ರಯೋಗಾಲಯದಲ್ಲಿ ಹಲವಾರು ಪ್ರಯೋಗಗಳನ್ನು ರೂಪಿಸಿದರು. ತಮ್ಮ ಮೊದಲ ಪ್ರಯೋಗದಲ್ಲಿ, ಹಳೆಯ ಮತ್ತು ಹೊಸದಾದ ಗೂಡುಗಳ ನಡುವಿನ ಒಂದೇ ಉದ್ದದ ಎರಡು ಮಾರ್ಗಗಳನ್ನು ‘ನಾಯಕ’ರ ಇರುವೆಗಳು ಅನ್ವೇಷಿಸುತ್ತವೆಯೇ ಎಂದು ಅವರು ತನಿಖೆ ನಡೆಸುವ ಉದ್ದೇಶದಿಂದ, ಹಳೆಯ ಮತ್ತು ಹೊಸ ಗೂಡುಗಳನ್ನು ಪ್ರತಿನಿಧಿಸುವ ಎರಡು ಪೆಟ್ಟಿಗೆಗಳನ್ನು ಸ್ಥಾಪಿಸಿ, ಅವುಗಳನ್ನು ಒಂದೇ ಉದ್ದದ ಮರದ ಸೇತುವೆಗಳ ಮೂಲಕ ಜೋಡಿಸಿ, ಹಳೆಯದರಿಂದ ಹೊಸ ಗೂಡಿಗೆ ಇರುವೆಗಳ ವಸಾಹತುವನ್ನು ಸ್ಥಳಾಂತರಿಸಲಾಯಿತು. ಸ್ಥಳಾಂತರ ಪ್ರಾರಂಭವಾಗುವ ಮೊದಲು, ‘ನಾಯಕ’ ಇರುವೆಗಳು ಎರಡೂ ಮಾರ್ಗಗಳನ್ನು ಅನ್ವೇಷಿಸಿ, ತಮ್ಮ ವಸಾಹತುವನ್ನು ಯಶಸ್ವಿಯಾಗಿ ಒಂದು ಗೂಡಿನಿಂದ ಇನ್ನೊಂದಕ್ಕೆ ಸ್ಥಳಾಂತರಿಸಲು ಎರಡೂ ಮಾರ್ಗಗಳನ್ನು ಬಳಸಿದವು.

ಎರಡನೆಯ ಪ್ರಯೋಗದಲ್ಲಿ, ಕಡಿಮೆ ದೂರದ ಮಾರ್ಗವನ್ನು ನೇರವಾದ ಸೇತುವೆಯ ರೂಪದಲ್ಲಿ ನಿರ್ಮಿಸಲಾಯಿತು ಮತ್ತು ಹೆಚ್ಚು ದೂರದ ಮಾರ್ಗವನ್ನು ಬಾಗಿದ ಸೇತುವೆಯೊಂದಿಗೆ ನಿರ್ಮಿಸಲಾಯಿತು. ‘ನಾಯಕ’ ಇರುವೆಗಳಿಗೆ ತಮ್ಮ ಹೊಸ ಗೂಡನ್ನು ತಲುಪಲು ಈ ಎರಡು ಮಾರ್ಗಗಳ ನಡುವೆ ಸೂಕ್ತವಾದ್ದನ್ನು ಆರಿಸಬೇಕಾಗಿತ್ತು. ಸುಮಾರು 60% ನಷ್ಟು ನಾಯಕ ಇರುವೆಗಳು ಸ್ಥಳಾಂತರಕ್ಕಾಗಿ ಕಡಿಮೆ ದೂರದ ಮಾರ್ಗವನ್ನು ಆರಿಸಿಕೊಂಡರೆ, ಸುಮಾರು 37% ಇರುವೆಗಳು ಎರಡೂ ಮಾರ್ಗಗಳನ್ನು ಆರಿಸಿಕೊಂಡವು. ಇರುವೆಗಳ ಒಂದು ಸಣ್ಣ ಭಾಗ ಮಾತ್ರ ಉದ್ದದ ಮಾರ್ಗವನ್ನು ಆರಿಸಿಕೊಂಡಿತು.

ಕಡಿಮೆ ಮತ್ತು ಹೆಚ್ಚು ದೂರವಿದ್ದ ಮಾರ್ಗಗಳ ಸಂಯೋಜನೆಯನ್ನು ಹೊಂದಿರುವ ಮೂರನೆಯ ಪ್ರಯೋಗ, ಇರುವೆಗಳು ತಮ್ಮ ಮಾರ್ಗಗಳನ್ನು ಆರಿಸುವಾಗ, ಇರುವೆಗಳ ಬಲ ಅಥವಾ ಎಡ ಆದ್ಯತೆಗಳನ್ನು ಪರೀಕ್ಷಿಸುವ ಉದ್ದೇಶವನ್ನು ಹೊಂದಿತ್ತು. ಹಳೆಯ ಗೂಡಿನಿಂದ ಹೊಸದಕ್ಕೆ ವಿವಿಧ ಉದ್ದಗಳ ನಾಲ್ಕು ಮಾರ್ಗಗಳು ಇದ್ದವು. ಸ್ಥಾಪಿಸಿದ ಈ ಮರದ ಸೇತುವೆಯು ಒಂದೇ ಪ್ರವೇಶದ್ವಾರ ಮತ್ತು ನಿರ್ಗಮನವನ್ನು ಹೊಂದಿದ್ದು, ಇರುವೆಗಳಿಗೆ ಎರಡು ನಿರ್ಧಾರ ಬಿಂದುಗಳಿದ್ದವು. ಪ್ರತಿ ಸ್ಥಳದಲ್ಲಿ, ಇರುವೆಗಳಿಗೆ  ಕಡಿಮೆ - ಹೆಚ್ಚು ದೂರದ ಮಾರ್ಗಗಳ ನಡುವೆ ಆಯ್ಕೆಯ ಅವಕಾಶವಿತ್ತು. ಸ್ಥಳಾಂತರ ಪ್ರಾರಂಭವಾಗುವ ಮೊದಲು ಎಲ್ಲಾ ನಾಲ್ಕು ಆಯ್ಕೆಗಳನ್ನು ‘ನಾಯಕ’ ಇರುವೆಗಳು ಪರಿಶೋಧಿಸಿದವು ಎಂದು ಫಲಿತಾಂಶಗಳು ಹೇಳುತ್ತವೆ. ಆದಾಗ್ಯೂ, ಇರುವೆಗಳಲ್ಲಿ ಅರ್ಧಕ್ಕಿಂತ ಹೆಚ್ಚು  ಇರುವೆಗಳು ಜೊತೆಗೂಡುವ ಚಾಲನೆಯಲ್ಲಿ, ಎರಡೂ ನಿರ್ಧಾರ ಹಂತಗಳಲ್ಲಿ ಕಡಿಮೆ ಮಾರ್ಗವನ್ನು ಆರಿಸಿಕೊಂಡವು.

“ಇರುವೆಗಳು ತಮ್ಮ ಹಾದಿಯಲ್ಲಿ ರಾಸಾಯನಿಕ ಸೂಚನೆಗಳ ಸಹಾಯವಿಲ್ಲದೇ,  ಕಡಿಮೆ ದೂರದ ಮಾರ್ಗವನ್ನು ಕಂಡುಹಿಡಿದು, ಅದನ್ನು ಆಯ್ಕೆ ಮಾಡಬಹುದು ಎಂದು ನಮ್ಮ ಸಂಶೋಧನೆಯ ಫಲಿತಾಂಶಗಳು ತೋರಿಸುತ್ತವೆ. ಈ ಶೋಧನೆಯ ವೈಶಿಷ್ಟ್ಯವೆಂದರೆ, ಈ ಪ್ರಭೇದಗಳಲ್ಲಿ ಈ ಇರುವೆಗಳು ಇತರ ಕಾರ್ಯವಿಧಾನಗಳಿಗೆ ಒಂದೇ ರೀತಿಯ ಕಾರ್ಯವಿಧಾನವನ್ನು ಬಳಸಬೇಕಾಗಿಲ್ಲ,” ಎಂದು ಐಐಎಸ್ಇಆರ್ ಕೋಲ್ಕತ್ತಾದ ಇರುವೆ ಪ್ರಯೋಗಾಲಯದ  ಪ್ರಧಾನ ತನಿಖಾಧಿಕಾರಿ ಮತ್ತು ಅಧ್ಯಯನದ ಒಬ್ಬ ಲೇಖಕರಾದ ಪ್ರೊ. ಸುಮನಾ ಅನ್ನಗಿರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಆದರೆ, ಇಂತಹ ಕಾರ್ಯವಿಧಾನಗಳನ್ನು ಈ ಇರುವೆಗಳು ಹೇಗೆ ನಿಭಾಯಿಸುತ್ತವೆ? ಇದರ ಬಗ್ಗೆ ಅಷ್ಟು ಮಾಹಿತಿ ಲಭ್ಯವಿಲ್ಲ.

"ದೃಷ್ಟಿ, ಘ್ರಾಣ, ಸ್ಪರ್ಶ ಮತ್ತು ಮಾರ್ಗ ಏಕೀಕರಣದಂತಹ ಸಂವೇದನಾ ವ್ಯವಸ್ಥೆಗಳು ಕಡಿಮೆ ದೂರ ಇರುವ ಮಾರ್ಗವನ್ನು ಆಯ್ಕೆ ಮಾಡುವುದರಲ್ಲಿ ತೊಡಗಿಕೊಂಡಿವೆ. ಮುಂದಿನ ಪ್ರಯೋಗಗಳಲ್ಲಿ, ಇರುವೆಗಳಲ್ಲಿ ಇಂತಹ ಸಂವೇದನಾ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ ನಾವು ಈ ಪ್ರಕ್ರಿಯೆಗಳನ್ನು  ಇನ್ನೂ ಆಳವಾಗಿ ಪರಿಶೀಲಿಸಲಿದ್ದೇವೆ." ಎಂದು ಸ್ನಿಗ್ಧ ಮುಖೋಪಾಧ್ಯಾಯ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಇರುವೆಗಳಂತೆ ಚಿಕ್ಕದಾಗಿ ಇರುವ ಕೀಟಗಳಲ್ಲಿನ ಗೂಡುಗಳನ್ನು ಸ್ಥಳಾಂತರಿಸುವಂತಹ ಗುರಿ-ಆಧಾರಿತ ಕಾರ್ಯಗಳಲ್ಲಿ ಒಳಗೊಂಡಿರುವ ಸೂಕ್ಷ್ಮ ವ್ಯತ್ಯಾಸಗಳನ್ನು ಈ ಅಧ್ಯಯನವು ವಿವರಿಸುತ್ತದೆ. ಪ್ರಾಣಿಗಳ ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಇದು ಯಾವ ಪರಿಣಾಮಗಳನ್ನು ಬೀರುತ್ತದೆ?

"ಈ ಪ್ರಕ್ರಿಯೆಯು ಜೀವಿಗಳ ಉಳಿವು-ಅಳಿವು ಮತ್ತು ಅವುಗಳ ಯುಕ್ತತೆಗೆ ನೇರ ಪರಿಣಾಮ ಬೀರುವುದರಿಂದ ಸ್ಥಳಾಂತರದಂತಹ ಗುರಿ-ಆಧಾರಿತ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಈ ನಿರ್ದಿಷ್ಟ ಅಧ್ಯಯನವು ಈ ಪ್ರಭೇದದ ಇರುವೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಅವಕಾಶ ಮಾಡಿಕೊಟ್ಟರೂ, ನೂರಾರು ಇತರ ರಾಸಾಯನಿಕಹಿಂಜಾಲು ಇಡದ ಇರುವೆಗಳ ನಡವಳಿಕೆಯನ್ನು ಅರ್ಥೈಸಿಕೊಳ್ಳಲು ಈ ಅಧ್ಯಯನವು ನಮಗೆ ಸಹಾಯ ಮಾಡುತ್ತದೆ ”ಎಂದು ಪ್ರೊ. ಅನ್ನಗಿರಿ ವಿವರಿಸುತ್ತಾರೆ.