ಆಗಸ್ಟ್ ೨೦೧೯ ರಲ್ಲಿ ಚೆನ್ನೈ ಕಡಲತೀರದ ಉದ್ದಕ್ಕೂ ‘ನೋಕ್ಟಿಲುಕಾ’ ಎಂಬ ಪ್ಲ್ಯಾಂಕ್ಟನ್ (ಪ್ರವಾಹಕ್ಕೆ ವಿರುದ್ಧವಾಗಿ ಈಜಲಾಗದ ಸಣ್ಣ ಸಣ್ಣ ಸಮುದ್ರಜೀವಿಗಳು)ನ ಹರಡುವಿಕೆ ಗೋಚರಿಸಿದ್ದು, ಅವು ಕತ್ತಲಿನಲ್ಲಿ ಆಕರ್ಷಕವಾದ ನಿಯಾನ್ ನೀಲಿ ಬಣ್ಣದಲ್ಲಿ ಪ್ರಕಾಶಿಸುತ್ತಿದ್ದವು. ನೋಡುಗರನ್ನು ಮೂಕವಿಸ್ಮಿತವಾಗಿಸುವ ಈ ಸಣ್ಣ ಜೀವಿಗಳ ಜೈವಿಕದೀಪ್ತಿಯು, ಅಲೆಗಳ ಮೇಲೆ ಬೆಳಕಿನ ನೃತ್ಯದಂತೆ ಕಂಡುಬರುತ್ತದೆ, ಈ ವಿದ್ಯಮಾನದ ಸುಂದರ ಛಾಯಾ ಚಿತ್ರಗಳನ್ನು ಜನರು ಯಥೇಚ್ಚವಾಗಿ ಹಂಚಿಕೊಂಡಿದ್ದಾರೆ. ಆದರೆ, ಸಮುದ್ರವನ್ನು ಹೊಳೆಯುವಂತೆ ಮಾಡುವ ಈ ‘ಬ್ಲೂಮ್ಸ್’ ಅಥವಾ ಈ ಜೀವಿಗಳ ತ್ವರಿತ ಹರಡುವಿಕೆಯು ಅಷ್ಟೇನೂ ಸಂತೋಷ ಕೊಡುವ ವಿಷಯವಲ್ಲ.