ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

ಒಂದೇ ಪ್ರಭೇದದ ಎರಡು ಕಪ್ಪೆಗಳ ನಡುವಿನ ಅಂತರ ಒಂದು ಸಾವಿರ ಕಿಲೋಮೀಟರು ದೂರವಾದಾಗ...

Read time: 1 min
Dharwad
23 Sep 2020
ಒಂದೇ ಪ್ರಭೇದದ ಎರಡು ಕಪ್ಪೆಗಳ ನಡುವಿನ ಅಂತರ ಒಂದು ಸಾವಿರ ಕಿಲೋಮೀಟರು ದೂರವಾದಾಗ...

ಪೂರ್ವ ಘಟ್ಟಗಳ ಕ್ರಿಕೆಟ್ ಕಪ್ಪೆ (ಚಿತ್ರ - ಪೃಧ್ವಿ ರಾಜ್)

ಡಾಕ್ಟರ್ ಹೂ’ ಎಂಬ ಜನಪ್ರಿಯ ಸೈ -ಫೈ ಟಿವಿ ಧಾರಾವಾಹಿಯಲ್ಲಿ ಬರುವ , ಟೈಮ್ ಲಾರ್ಡ್ ಆಗಿರುವ ನಾಯಕನು ತನ್ನಂತೆಯೇ ಇನ್ನೊಬ್ಬ ಟೈಮ್ ಲಾರ್ಡ್ ನನ್ನ , ಒಮ್ಮೆ ತನ್ನ ಗ್ರಹಗಳ ಯಾತ್ರೆಯೊಂದರಲ್ಲಿ, ನಿಹಾರಿಕೆಯ ಅಂಚೊಂದರಲ್ಲಿ ಭೇಟಿಯಾದಾಗ ಅತೀವ ಭಾವುಕನಾಗುತ್ತಾನೆ. ಭಾರತದ ಕಪ್ಪೆ ಸಂಶೋಧಕರ ತಂಡವೊಂದು, ಪಶ್ಚಿಮ ಘಟ್ಟಗಳ  ಮಳೆಯ ರಾತ್ರಿಯೊಂದರಲ್ಲಿ ಕಪ್ಪೆಯೊಂದು ಸಿಕ್ಕಿದಾಗ, ಅದೇ ರೀತಿಯ ಭಾವೋತ್ಕರ್ಷವನ್ನು ಅನುಭವಿಸಿರಬಹುದು. ಇದರಲ್ಲಿ ಗಮನಾರ್ಹವಾದುದು ಏನು ಎಂದು ನೀವು ಪ್ರಶ್ನಿಸಬಹುದು. ಈ ಕಪ್ಪೆಯ ಇನ್ನೊಂದು ನಿಕಟ ಸಂಬಂಧಿ ಇರುವುದು, ಸುಮಾರು ಒಂದು ಸಾವಿರ ಕಿಲೋಮೀಟರುಗಳು ದೂರ, ಆದರೆ, ಭಾರತದ ಪೂರ್ವ ಘಟ್ಟಗಳಲ್ಲಿ ಅಷ್ಟೆ. ಈ ದೂರವು ನಿಹಾರಿಕೆಗಳಷ್ಟು ದೂರವಲ್ಲದಿದ್ದರೂ, ಕಪ್ಪೆಗಳಿಗೆ ಕ್ರಮಿಸಲು ಅತೀವ ದೂರವೆನಿಸುತ್ತದೆ. ಈ ಸಂಶೋಧನೆಯು ಪ್ರಾಣಿಗಳ ವರ್ಗೀಕರಣದ ಬಗ್ಗೆ ಮತ್ತು ಪಶ್ಚಿಮ ಘಟ್ಟಗಳ ಮತ್ತು ಇತರ ಪ್ರದೇಶಗಳ  ಜೀವಭೂಗೋಳಶಾಸ್ತ್ರದ ಬಗ್ಗೆ ಕುತೂಹಲಕಾರೀ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

ಪಶ್ಚಿಮ ಘಟ್ಟಗಳ, ಕತ್ತಲಿನ ಮಳೆತೊಯ್ದ ರಾತ್ರಿಯಲ್ಲಿ , ವಟಗುಟ್ಟುವ ಸದ್ದಿನ ನಡುವೆ, ಮೈಗಂಟುವ ಜಿಗಣೆ ಮತ್ತು ಕೆಸರಿನಲ್ಲಿ ಕಪ್ಪೆಗಳನ್ನು ಹುಡುಕುವುದೇ ಒಂದು ಮರೆಯಲಾಗದ ಅನುಭವ. ಅಂಥಹದೊಂದು ರಾತ್ರಿ ಅಮಿತ್ ಹೆಗ್ಗಡೆಯವರಿಗೆ ಒಂದು ಕಪ್ಪೆ ಸಿಕ್ಕಿತು. ಈ ಕಪ್ಪೆಯು ಪೂರ್ವ ಘಟ್ಟಗಳಲ್ಲಿ ಕಂಡುಬರುವ ‘ಕ್ರಿಕೆಟ್’ ಕಪ್ಪೆಯನ್ನು (ಫೆಜರ್ವಾರಿಯಾ ಕಳಿಂಗ) ಹೋಲುವುದನ್ನು ನೋಡಿ ವಿಸ್ಮಯವಾಯಿತು. ಈ ಕಪ್ಪೆಯು ತನ್ನ ಪೂರ್ವಘಟ್ಟಗಳಲ್ಲಿ ಇರುವ ಪ್ರತಿರೂಪದಂತೆ ಸ್ವಲ್ಪ ಮಟ್ಟಿಗೆ ಕಂಡುಬಂದರೂ ಕೆಲವು ವಿಷಯಗಳಲ್ಲಿ ತೀರಾ ಭಿನ್ನವಾಗಿದ್ದಿತು. ಅದರ ಅವಯವಗಳೆಲ್ಲವೂ ಹೋಲಿಕೆಯಲ್ಲಿ ದೊಡ್ಡದಾಗಿಯೋ ಇಲ್ಲವೆ ಉದ್ದವಾಗಿಯೋ ಇದ್ದವು.

“ಯಾರಾದರೂ ಶಾಸ್ತ್ರೀಯ ಪ್ರಾಣಿ ವಗೀಕಾರರು ಕೇವಲ ದೈಹಿಕ ಗುಣಲಕ್ಷಣಗಳನ್ನು ಗಮನಿಸಿದ್ದರೆ, ನಿಸ್ಸಂದೇಹವಾಗಿ  ಇವೆರಡೂ ಬೇರೆ ಪ್ರಭೇದಗಳೆಂದು ಗುರುತಿಸಿಬಿಡುತ್ತಿದ್ದರು” ಎಂದು ಅವರು ಹೇಳುತ್ತಾರೆ.

ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಜೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ಇತರ ಕಪ್ಪೆ ಸಂಶೋದಕರೂಡನೆ , ಅಮಿತ್ ತಾನು ಕಂಡುಹಿಡಿದ ಕಪ್ಪೆಯ ಬಗ್ಗೆ ನಿಕಟವಾಗಿ ಪರಿಶೀಲನೆ ನೆಡೆಸಿದರು. ಕಪ್ಪೆಯನ್ನು ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ, ಮೂತಿಯಿಂದ ತಳದವರೆಗೂ, ವರ್ನಿಯರ್ ಕ್ಯಾಲಿಪ್ಪರ್ ಬಳಸಿ ಅಳತೆ ಮಾಡಲಾಯಿತು. ಒಂದು ಗ್ರಾಫ್ ನಲ್ಲಿ ಈ ಅಳತೆಗಳನ್ನು ನಮೂದಿಸಿ ಪೂರ್ವ ಘಟ್ಟಗಳ ಕ್ರಿಕೆಟ್ ಕಪ್ಪೆಯ ಅಳತೆಗಳೊಂದಿಗೆ ಹೋಲಿಸಲಾಯಿತು. ಅವುಗಳ ಡಿಎನ್ಎ ಗಳನ್ನೂ ಹೋಲಿಸಿ ನೋಡಿ ಅಂತಿಮವಾಗಿ ಎರಡೂ ಕಪ್ಪೆಗಳು ಒಂದೇ ಪ್ರಭೇದವೆಂದು ತೀರ್ಮಾನಿಸಲಾಯಿತು. ಈ ಹೊಸ ಆವಿಷ್ಕಾರವನ್ನು ‘ಝುಟಾಕ್ಸಾ’ ಎಂಬ ಸಂಶೋಧನಾ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ .

ಪಶ್ಚಿಮಘಟ್ಟಗಳ ಕ್ರಿಕೆಟ್ ಕಪ್ಪೆ (ಚಿತ್ರ - ಅಮಿತ್ ಹೆಗ್ಗಡೆ)

ಪ್ರಭೇದಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಬಲ್ಲ ೧೬ ಎಸ್  ಆರ್ ಏನ್ ಎ  ಎಂಬ ಒಂದು ವಂಶವಾಹಿಯನ್ನು ( ಜೀನ್ಸ್ ) ಸಂಶೋಧಕರು ಅನುಕ್ರಮ (ಸೀಕ್ವೆನ್ಸ್))  ಮಾಡಿದರು. ಈ ಅನುಕ್ರಮವನ್ನು  ಭಾರತದಲ್ಲಿ ಇರುವ ಇತರ ಕ್ರಿಕೆಟ್ ಕಪ್ಪೆಗಳ ಅನುಕ್ರಮಗಳೊಂದಿಗೆ  ಹೋಲಿಸಿ ನೋಡಿದರು. ಭಾರತದಲ್ಲಿ ಇದುವರೆಗೂ ೩೭ ವಿವಿಧ ಕ್ರಿಕೆಟ್ ಕಪ್ಪೆಗಳ  ಪ್ರಭೇದಗಳು ಪತ್ತೆಯಾಗಿವೆ. ಈ ವಂಶವಾಹಿಗಳ ವಿಶ್ಲೇಷಣೆಯಲ್ಲಿ ಪಶ್ಚಿಮ ಘಟ್ಟದ ಕಪ್ಪೆಯು , ಪೂರ್ವ ಘಟ್ಟದ ಕಪ್ಪೆಯೊಡನೆ ಎಷ್ಟು ಹೋಲುತ್ತಿತ್ತೆಂದರೆ, ಎರಡನ್ನೂ ಒಂದೇ ಪ್ರಭೇದವೆಂದು ಗುರುತಿಸಲೇಬೇಕಾದ ಅನಿವಾರ್ಯತೆ ಕಂಡುಬಂದಿತು. ಅವುಗಳನ್ನೇನಾದರೂ ನೀವು ಬರಿಗಣ್ಣಿನಲ್ಲಿ ನೋಡಿದರೆ ಖಂಡಿತಾ ನಂಬಲು ಸಾಧ್ಯವಾಗುವುದಿಲ್ಲ!

ಸಂಶೋಧಕರು ಈ ಡಿಎನ್ಎ ಅನುಕ್ರಮಗಳನ್ನು ಬಳಸಿಕೊಂಡು ಒಂದು ‘ಫೈಲೋಜೆನೆಟಿಕ್  ಟ್ರೀ’ (ವಂಶವೃಕ್ಷ)  ಕಟ್ಟಿದರು. ಈ  ‘ಫೈಲೋಜೆನೆಟಿಕ್  ಟ್ರೀ ‘ ಎಂಬುದು ಜೀವಿಗಳ ನಡುವೆ ಇರುವ ಜೀವವಿಕಾಸದ ಸಂಬಂಧವನ್ನು ತೋರುವ ಮರದಾಕೃತಿಯ ರೇಖಾ ಚಿತ್ರ. “ಫೈಲೋಜೆನೆಟಿಕ್ ಅಥವಾ ವಂಶವೃಕ್ಷ ಅಧ್ಯಯನವು, ಪಶ್ಚಿಮ ಘಟ್ಟಗಳಲ್ಲಿ ದೊರಕಿರುವ ಈ ಕಪ್ಪೆಯು ಪೂರ್ವ ಘಟ್ಟದ ಕಪ್ಪೆಯ ಸ್ವಲ್ಪ ವಿಭಿನ್ನ ಜನಾಂಗಕ್ಕೆ ಸೇರಿದೆಯೆಂದು ಸ್ಪಷ್ಟಪಡಿಸಿದೆ” ಎಂದು ಅಮಿತ್ ಈ ಆವಿಷ್ಕಾರದ ಬಗ್ಗೆ ಹೇಳುತ್ತಾರೆ. ಈ ಎರಡೂ ಕಪ್ಪೆಗಳು ಒಂದೇ ಪ್ರಭೇದದವುಗಳೆಂದು ಪ್ರತಿಪಾದಿಸುವಂತೆ ಎರಡರ ನಡುವಿನ ಅನುವಂಶಿಕ ಅನುಕ್ರಮಗಳ  ನಡುವಿನ ವ್ಯತ್ಯಾಸ ಕೇವಲ ೦.೨ % ನಷ್ಟು ಇದೆ.

ಪ್ರಕೃತಿಯಲ್ಲಿ, ಒಂದೇ ಪ್ರಭೇದಕ್ಕೆ ಸೇರಿದ ಪ್ರಾಣಿಗಳು, ಕಿರು ಉಭಯವಾಸಿಗಳಾದ ಕಪ್ಪೆಗಳೊನ್ನೊಳಗೊಂಡಂತೆ , ಒಂದು ಸಣ್ಣ ಭೌಗೋಳಿಕ ಪ್ರದೇಶದಲ್ಲಿ ಹರಡಿಕೊಂಡಂತೆ ಇರುತ್ತವೆ. ಆದರೆ, ಸಾವಿರಾರು ಕಿಲೋಮೀಟರ್ ಅಂತರವಿರುವಂತೆ, ಎರಡು ವಿಭಿನ್ನ ಪರ್ವತ ಶ್ರೇಣಿಗಳಲ್ಲಿ ಈ ಎರಡು ಕಪ್ಪೆಯ ಮಾದರಿಗಳು ಕಂಡುಬಂದಿರುವುದು, ಇವುಗಳಲ್ಲಿ ಎಷ್ಟರ ಮಟ್ಟಿಗೆ ಹರಡುವ ಸಾಮರ್ಥ್ಯವಿದೆಯೆಂದು ಸಂಶೋಧಕರು ಪುನರ್ಪರಿಶೀಲಿಸುವಂತೆ ಮಾಡಿದೆ. ಅವರು, ಈಗ ಪೂರ್ವ ಘಟ್ಟಗಳು, ಭಾರತದ ಉತ್ತರಪೂರ್ವ ಹಸಿರುತುಂಬಿದ ಭಾಗಗಳನ್ನು ಪಶ್ಚಿಮ ಘಟ್ಟಗಳೊಡನೆ ಕೂಡಿಸಬಹುದಾದ ಕೊಂಡಿಯಾಗುವ ಸಾಧ್ಯತೆ ಇದೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಆದರೆ ಈ ಎರಡೂ ಮಾದರಿಗಳು  ಗಾತ್ರದಲ್ಲಿ ಏಕಿಷ್ಟು ವಿಭಿನ್ನವಾಗಿವೆ? ಇವುಗಳು ವಾಸಿಸುವ ಆವಾಸಸ್ಥಾನ ಬೇರೆ ಬೇರೆ ಎತ್ತರಗಳಲ್ಲಿ ಇವೆ. ಈ ಆವಾಸಸ್ಥಾನಗಳಿಗೆ ಹೊಂದಿಕೊಳ್ಳುವ ಸಲುವಾಗಿ ಈ ರೀತಿ ಭಿನ್ನವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. “ ಇದು ಒಂದು ಸ್ಥಳೀಯ ಹೊಂದಾಣಿಕೆಯಾಗಿರಬಹುದು , ಅಥವಾ ಎರಡು ಭಿನ್ನ ಭೌಗೋಳಿಕ ಪ್ರಾಂತ್ಯಗಳಿಗೆ ಹೊಂದಿಕೊಂಡಿರಬಹುದು , ಇಲ್ಲವೇ ವೇಗವಾಗಿ ಬದಲಾಗುತ್ತಿರುವ ಹವಾಮಾನ ಇದಕ್ಕೆ ಕಾರಣವಿರಬಹುದು” ಎಂದು ಅಮಿತ್ ವಿವರಿಸುತ್ತಾರೆ . ಮುಂದುವರಿದು, “ಇದನ್ನು ವಿಶದವಾಗಿ ತಿಳಿಯಲು ಈ ಕಪ್ಪೆಗಳ ಅನುವಂಶಿಕ ಮತ್ತು ಜೈವಿಕ ಇತಿಹಾಸದ ಹೆಚ್ಚು ಅಧ್ಯಯನದ ಅಗತ್ಯವಿದೆ ” ಎನ್ನುತ್ತಾರೆ .

ಈ ಪ್ರಸ್ತುತ ಆವಿಷ್ಕಾರದಿಂದ , ಕಪ್ಪೆಗಳು ಎಷ್ಟು ವಿಸ್ತಾರವಾಗಿ ಹರಡಬಲ್ಲವು ಮತ್ತು ಅವುಗಳ ಶಾರೀರಿಕ ಗುಣಗಳನ್ನು ರಚಿಸುವಲ್ಲಿ ಹವಾಮಾನ ಇಲ್ಲವೇ ಪರಿಸರ ಎಷ್ಟು ಪ್ರಮುಖ ಪಾತ್ರವಹಿಸಬಲ್ಲದು ಎಂಬುದನ್ನು ಕಂಡುಕೊಳ್ಳಬಹುದು . ಕಪ್ಪೆಗಳ ಅನುವಂಶೀಯ ಅಧ್ಯಯನವು ಎಷ್ಟು ಮುಖ್ಯವೆಂದು, ದಿನಂಪ್ರತಿ ಹೊಸ ಪ್ರಭೇದಗಳು ಗುರುತಿಸಲ್ಪಡುತ್ತಿರುವ ಈ ಕಾಲದಲ್ಲಿ ಅತ್ಯಂತ ಅವಶ್ಯಕವಾಗಿದೆ. ಇದರಿಂದ ಕಪ್ಪೆಗಳು ನಿರ್ವಂಶವಾಗದಂತೆ ತಡೆಯಲು ಸಂರಕ್ಷಣಾ ನೀತಿಯನ್ನು ರಚಿಸುವಲ್ಲಿ ಸಹಾಯವಾಗುತ್ತದೆ.