ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Health

10 Mar 2018

ನೀವು ಎಂದಾದರೂ ಬೇಸಿಗೆಯ ಹಗಲಿನಲ್ಲಿ, ಬಿರುಬಿಸಿಲಿನ ಆಕಾಶವನ್ನು ಬರಿಗಣ್ಣಿನಿಂದ ನಿಟ್ಟಿಸಿದ್ದೀರಾ? ಆಕಾಶದಲ್ಲಿ ನಿಮ್ಮ ದೃಷ್ಟಿ ನೆಟ್ಟಿರುವಾಗ, ಏನೋ ಕಣ್ಣಿನ ಮುಂದೆ ತೇಲಿದಂತೆ ಭಾಸವಾಗಿದ್ದು ಗಮನಿಸಿದ್ದೀರಾ? ಹೀಗೆ ಬೆಳಕನ್ನು ನಿಟ್ಟಿಸಿ ನೋಡುವಾಗ ಕಣ್ಣಿನ ದೃಷ್ಟಿ ಕ್ಷೇತ್ರದಲ್ಲಿ ಏನೋ ಈಜಿದಂತೆ ಎನಿಸುತ್ತದೆ ಅಲ್ಲವೇ? ಇವು ಪಾರದರ್ಶಕವಾದ ಹುಳುಗಳೋ ಅಥವಾ ಯಾವುದೋ ಆತ್ಮವೋ ಎಂದು ಸಾಮಾನ್ಯವಾಗಿ ಜನ ಭಾವಿಸುತ್ತಾರಂತೆ. ಅವು ಕಣ್ಣೀರ ಹನಿಗಳೇನೋ ಎಂದು ನೀವು ಅವನ್ನು ಗಮನಿಸಲು ಪ್ರಾರಂಭಿಸಿದಾಗ, ಅವು ಕಣ್ಮರೆಯಾಗಿ, ನೀವು ನಿಮ್ಮ ನೋಟವನ್ನು ಬದಲಾಯಿಸಿದ ತಕ್ಷಣ ಮತ್ತೆ ಕಾಣಿಸಿಕೊಳ್ಳುತ್ತವೆ.

Bengaluru
7 Mar 2018

ಮರೆಗುಳಿತನದ ಸಾಮಾನ್ಯ ವಿಧವಾಗಿರುವ ಅಲ್ಝೈಮರ್‌ ಅನ್ನು  ಔಷಧೋಪಚಾರದ ಸಹಾಯದಿಂದ ತಕ್ಕಮಟ್ಟಿಗೆ  ನಿಯಂತ್ರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆದಿವೆ.