ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.
ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ.
ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
ಸ್ಥಳ ಆಧಾರಿತ ಸೇವೆಗಳು ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗವಾಗಿದೆ. ವಿಶೇಷವಾಗಿ ಸ್ಮಾರ್ಟ್ ಫೋನ್ ಮೂಲಕ ಬಳಸುವ ಗೂಗಲ್ ಮ್ಯಾಪ್ಸ್, ಓಲಾ, ಉಬರ್ ನಂತಹ ಆಪ್ ಗಳು ಇಂತಹ ಸ್ಥಳ ಆಧಾರಿತ ಸೇವೆಯ ಮೇಲೆ ಅವಲಂಬಿತವಿವಾಗಿದೆ. ಈ ಸೇವೆಯನ್ನು ಕಲ್ಪಿಸುವುದಕ್ಕೆ ಪೂರಕವಾದ ಅಂಶವೆಂದರೆ ಅಮೇರಿಕಾ ದೇಶಕ್ಕೆ ಸೇರಿದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್), ರಷ್ಯಾದ ಗ್ಲೊನಾಸ್ (GLONAS), ಅಥವಾ ಯುರೋಪ್ ನ ಗೆಲಿಲಿಯೋ (Galileo) ಎಂಬ ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ.
ಲ್ಯಾಕ್ಟಿಕ್ ಆಮ್ಲ ವನ್ನು ವೆಚ್ಚ ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿಯನ್ನಾಗಿಸಲು ಕ್ಷಾರ ಹಾಗೂ ಕಿಣ್ವಗಳ ಬಳಕೆಯಲ್ಲಿ ಸುಧಾರಣೆಯ ಅಗತ್ಯವಿದೆ.
ನಗರ ಪ್ರದೇಶದ ಅಪೌಷ್ಟಿಕತೆಯ ನಿವಾರಣೆಗೆ ರುಚಿಯಾದ ಹಾಗೂ ವೈವಿಧ್ಯಮಯವಾದ ಪೂರಕ ಆಹಾರ ಪದಾರ್ಥಗಳು ಪರಿಹಾರ ನೀಡಬಹುದು
ಜೂನ್ 2019 ರಲ್ಲಿ ಚೆನ್ನೈನ ಜನತೆ ಒಂದು ಭಯಾನಕ ಸಂಗತಿಯನ್ನು ಎದುರಿಸಬೇಕಾಯಿತು - ನಗರದ ಜಲಾಶಯಗಳ ಅಳವಿನ 0.1 ಪ್ರತಿಶತಕ್ಕೆ ನೀರಿನ ಮಟ್ಟ ಇಳಿದುಹೋಗಿತ್ತು. ಹಾಗೆ ನೋಡಿದರೆ ನೀರಿನ ಲಾರಿಗಳು, ಖಾಲಿ ಬಕೆಟ್ ಗಳು, ಉದ್ರಿಕ್ತ ನಾಗರೀಕರು - ಇವುಗಳನ್ನೊಳಗೊಂಡ ದೃಶ್ಯಗಳು, ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ.
ಕರ್ನಾಟಕದ ದಕ್ಷಿಣದಲ್ಲಿರುವ, ಐತಿಹಾಸಿಕವಾಗಿ ಬಂಟ್ವಾಳ ನದಿ ಎಂದು ಕರೆಯಲ್ಪಡುವ ನೇತ್ರಾವತಿ ನದಿಯ ಪ್ರವಾಹವು, ನೈರುತ್ಯ ಮಾನ್ಸೂನ್ ಸಮಯದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಬಂಟ್ವಾಳ ಪಟ್ಟಣದ ಸ್ಥಳೀಯ ನಿವಾಸಿಗಳು ಇನ್ನೂ 1974 ರಲ್ಲಿ ನದಿಯ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಉಂಟಾದ ವಿನಾಶಕಾರಿ ಪ್ರವಾಹದಿಂದ ಹೊರಬಂದು ಪುನಃ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಇದು ಇತ್ತೀಚೆಗೆ 2013 ಮತ್ತು 2015 ರಲ್ಲಿ ಹಾಗೂ 2018 ರಲ್ಲಿ ಪುನರಪ್ಪಳಿಸಿದೆ. ನದಿಯ ನೀರಿನ ಮಟ್ಟದಲ್ಲಿ ಉಂಟಾಗುತ್ತಿರುವ ಎಲ್ಲಾ ಬದಲಾವಣೆಗಳಿಗೆ ಮಳೆ ಸುರಿತದ ಏರಿಳಿತಗಳು ಕಾರಣವೇ?
ಇತ್ತೀಚೆಗೆ ಭಾರತದೊಳಗೆ ಆಲಿವ್ ರಿಡ್ಲೆ ಆಮೆಗಳ ಮರುಪ್ರವೇಶವು, ವಲಸೆ ಬಂದ ಪ್ರಾಣಿಗಳಿಗೆ ಭಾರತೀಯ ಕರಾವಳಿಗಳು ಅಚ್ಚುಮೆಚ್ಚಿನ ತಾಣ ಎಂಬುದನ್ನು ತೋರಿಸಿಕೊಟ್ಟಿದೆ. ಭಾರತದ ೭೫೦೦ ಕಿಲೋಮೀಟರ್ ಉದ್ದದ ಅತಿದೊಡ್ಡ ಕರಾವಳಿಯು, ವಿವಿಧ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ; ದೇಶದ ಒಟ್ಟು ಜನಸಂಖ್ಯೆಯ ಸುಮಾರು ೪೦% ಜನರು, ಇದೇ ಕರಾವಳಿಯುದ್ದಕ್ಕೂ ವಾಸಿಸುತ್ತಿದ್ದಾರೆ. ಕರಾವಳಿಯುದ್ದಕ್ಕೂ ನಡೆಯುವ ಅಭಿವೃದ್ಧಿ ಚಟುವಟಿಕೆಗಳು, ಕರಾವಳಿಯ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯ (ಐಐಟಿ ಬಾಂಬೆ) ಪ್ರಾಧ್ಯಾಪಕರಾದ ಪ್ರೊ. ಅಮಿತ್ ಅರೋರಾ ಮತ್ತು ಸಂಗಡಿಗರು ದಾಳಿಂಬೆ ಬೀಜದಿಂದ ಎಣ್ಣೆಯನ್ನು ತೆಗೆಯುವ ನವೀನ ವಿಧಾನವನ್ನು ಪ್ರಸ್ಥಾಪಿಸಿದ್ದಾರೆ. ಈ ವಿಧಾನವು ಅತ್ಯoತ ಅಗ್ಗವಾಗಿಯೂ, ತ್ಯಾಜ್ಯ ರಹಿತವಾಗಿಯೂ ಇದ್ದು ಅತೀ ಹೆಚ್ಚು ಗುಣಮಟ್ಟದ ಪ್ರೋಟೀನ್ (ಸಸಾರಜನಕ ಆಹಾರ ಪದಾರ್ಥ) ಮತ್ತು ನಾರಿನ ಅಂಶ ನೀಡಬಲ್ಲದು.