The specimen was collected and sent to ZSI who confirmed that this was the first-ever record of Euthyrrhapha pacifica in India
New Species
ಕಳ್ಳತನದಿಂದ ಸಾಗಾಟವಾಗುತ್ತಿದ್ದ ಹಲವು ಪ್ರಾಣಿಗಳ ನಡುವೆ ಪ್ಯಾಂಗೋಲಿನ್ ನ ಹೊಸ ಪ್ರಭೇದವನ್ನು ಪತ್ತೆ ಮಾಡಲಾಗಿದೆ.
ಸ್ನೆಮಾಸ್ಪಿಸ್ ರಿಷಿವ್ಯಾಲಿಯೆನ್ಸಿಸ್ (ಫೋಟೋ:ಅಕ್ಷಯ್ ಖಾಂಡೇಕರ್)
(ಅ) ಶೋಲ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಶೋಲೈ) [ಚಿತ್ರ ಕೃಪೆ: ಕ. ಅ. ಸುಬ್ರಮಣಿಯನ್]; (ಬೀ) ಬ್ಲೂ-ಲೆಗ್ಗಡ್ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಸಯನೋಫೆಮೊರ) [ಚಿತ್ರ ಕೃಪೆ: ಶಂತನು ಜೋಶಿ]; (ಸೀ) ಮಿರಿಸ್ಟಿಕ ರೀಡ್‌ಟೇಲ್ (ಪ್ರೊಟೊಸ್ಟಿಕ್ಟ ಮಿರಿಸ್ಟಿಕೇನ್ಸಿಸ್) [ಚಿತ್ರ ಕೃಪೆ: ಶಂತನು ಜೋಶಿ]
2015ರಲ್ಲಿ, ಅದೊಂದು ಮಾಮೂಲು ಸುದಿನ. ಪುಣೆಯ ಅಘರ್ಕರ್ ಸಂಶೋಧನಾ ಕೇಂದ್ರದ, ವಿಜ್ಞಾನಿಯಾದ ಡಾ. ರಿತೇಶ್ ಕುಮಾರ್ ಚೌಧರಿಯನ್ನು ಕಾಣಲು ಬಂದಿದ್ದ, ಬೆಂಗಳೂರಿನ ಎಂ. ಈ. ಎಸ್. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಿ. ರಾಮಚಂದ್ರ ರಾವ್, ಉತ್ತರ ಕನ್ನಡ ಜಿಲ್ಲೆಯಿಂದ, ಚಿಕ್ಕ ಹೂಗಳಿರುವ, ಹುಲ್ಲಿನಂತೆ ಕಾಣುವ ಕೆಲ ಗಿಡಗಳ ಮಾದರಿಗಳನ್ನು ತಂದು, ಅದನ್ನು ಗುರುತಿಸಲು ಡಾ. ಚೌಧರಿಯ ಸಹಾಯ ಕೋರಿದರು. ಡಾ. ಚೌಧರಿಯವರು ಅದನ್ನು ಕೂಡಲೇ ಒಂದು ‘ಪೈಪ್ವರ್ಟ್’ ಅಥವಾ ಹೂಬಿಡುವ ಏಕದಳದ ಒಂದು ಪ್ರಭೇದ ಎಂದು ಗುರುತಿಸಿದರು. ಆದರೆ, ಇದು ಯಾವ ಪ್ರಭೇದವೆನ್ನುವುದು ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿತ್ತು!
ಪಶ್ಚಿಮಘಟ್ಟಗಳ ಕಾಡುಗಳು ಭಾರತದ ಜೀವವೈವಿಧ್ಯದ ಹಾಟ್ಸ್ಪಾಟ್ ಎಂದೇ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ, ಈ ಸಮೃದ್ಧ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುವ ಹಲವು ಹೊಸ ಜಾತಿಯ ಉಭಯವಾಸಿಗಳು ಮತ್ತು ಸರೀಸೃಪಗಳು ಪತ್ತೆಯಾಗಿವೆ. ಆದರೆ, ಈ ಬಾರಿ, ಉಭಯಚರಗಳ ಬಗ್ಗೆ ಅಧ್ಯಯನ ನಡೆಸುವ ದೆಹಲಿಯ ವಿಶ್ವವಿದ್ಯಾನಿಲಯದ ಸಂಶೋಧಕರು, ರಸ್ತೆಬದಿಯ ಕೆಸರುಗುಂಡಿಯಂತಹ ಸರಳವಾದ ಸ್ಥಳದಲ್ಲಿ ಅಡಗಿದ್ದ ಹೊಸ ಜಾತಿಯ ಕಪ್ಪೆಯನ್ನು ಕಂಡುಹಿಡಿದಿದ್ದಾರೆ! ಭಾರತ ಸರ್ಕಾರದ ‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ’ಯ ಕ್ರಿಟಿಕಲ್ ಇಕೋಸಿಸ್ಟಮ್ ಪಾರ್ಟ್ನರ್ಶಿಪ್ ಫಂಡ್ನಿಂದ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಅನುದಾನ ಪಡೆದ ತಮ್ಮ ಈ ಸಂಶೋಧನೆಯನ್ನು ‘ಸೈಂಟಿಫಿಕ್ ರಿಪೋರ್ಟ್ಸ್’ ಜರ್ನಲ್ನಲ್ಲಿ ಅವರು ವಿವರಿಸಿದ್ದಾರೆ.