ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Society

ಬೆಂಗಳೂರು
20 Jan 2020

ನಾವೆಲ್ಲರೂ ಓದುವುದನ್ನು ಹೇಗೆ ಕಲಿತೆವು ಎಂದು ನೆನಪಿಸಿಕೊಂಡರೆ- ಮೊದಲಿಗೆ ನಾವು ಪ್ರತಿಯೊಂದು ಅಕ್ಷರ ಹೇಗೆ ಉಚ್ಚರಿಸುವುದು ಎಂದು ಕಲಿಯುತ್ತೇವೆ. ನಂತರ ಪೂರ್ತಿ ಪದ(ಗಳು)  ಮತ್ತು  ವಾಕ್ಯಗಳನ್ನು ಸುಲಭವಾಗಿ ಹೇಳಲು ಕಲಿಯುತ್ತೇವೆ. ಆದರೆ, ನಾವು ಓದಲು ಕಲಿಯುವಾಗ, ನಮ್ಮ ಮೆದುಳಿನಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬೆಂಗಳೂರು
20 Nov 2019

ನಾವೆಲ್ಲರೂ ಸಿಂಧೂ ನಾಗರಿಕತೆಯ ಬಗ್ಗೆ ಕೇಳಿದ್ದೇವೆ. ಸುಮಾರು ಕ್ರಿಸ್ತ ಪೂರ್ವ ಮೂರನೇ ಸಹಸ್ರಮಾನದ ಅವಧಿಯಲ್ಲಿ ಈ ಪುರಾತನ ಕಂಚಿನ ಯುಗದ ನಾಗರಿಕತೆಯು, ವಾಯುವ್ಯ ಏಷ್ಯಾದಲ್ಲಿ ಅಭಿವೃದ್ಧಿ ಹೊಂದಿತು. ಈ ನಾಗರಿಕತೆಯು ಉತ್ತಮವಾದ ಹಗೇವು (ಧಾನ್ಯಾಗಾರ)ಗಳು, ಒಳಚರಂಡಿ ವ್ಯವಸ್ಥೆ ಮತ್ತು ವ್ಯವಸ್ಥಿತವಾಗಿ ನಿರ್ಮಿಸಲಾಗಿದ್ದ ನಗರಗಳಾದ ಹರಪ್ಪಾ ಮತ್ತು ಮೊಹೆಂಜೊದಾರೊಗಳಿಗೆ ಪ್ರಸಿದ್ಧವಾಗಿದೆ. ಇದರ ಅಭಿವೃದ್ಧಿ ಮತ್ತು ಅವನತಿಗಳ ಬಗ್ಗೆ ವಿಸ್ತಾರವಾಗಿ ಗೊತ್ತಿಲ್ಲದಿದ್ದರೂ, ಇದರ ಕುರಿತಾದ ಅನೇಕ ಸಿದ್ಧಾಂತಗಳಿವೆ. ಈ ಕಾರಣಕ್ಕಾಗಿ ಇತಿಹಾಸಕಾರರು ಒಂದು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಮುಂಬೈ
18 Sep 2019

ಶಾಲೆಯಲ್ಲಿ ಕಲಿಯಬೇಕಾದರೆ ಗಣಿತದ ತರಗತಿ ನೆನಪಿದೆಯೇ? ಗಣಿತ ನಮ್ಮಲ್ಲಿ ಬಹುಪಾಲು ಜನರಿಗೆ ಕಬ್ಬಿಣದ ಕಡಲೆಯಾಗಿತ್ತಲ್ಲವೇ? ಅರ್ಧಕ್ಕಿಂತ ಸೂತ್ರಗಳನ್ನು ಸುಮ್ಮನೆ ಬಾಯಿಪಾಠ ಮಾಡಿ ಪರಿಕ್ಷೆಯಲ್ಲಿ ಬರೆಯುತ್ತಿದ್ದುದು ನೆನಪಿದೆಯೇ? ಇಂತಹ ತಲೆನೋವಿನ ಸೂತ್ರಗಳಲ್ಲಿ ಗೋಳದ ಮೇಲ್ಮೈ ವಿಸ್ತೀರ್ಣದ ಸೂತ್ರವೂ ಸಹ ನಾವು ಬಾಯಿಪಾಠ ಮಾಡಿ ಬರೆದ ಸೂತ್ರಗಳಲ್ಲಿ ಒಂದು. ಆ ಅದ್ಭುತವಾದ ಸೂತ್ರಕ್ಕೆ ನಾವು ಹೇಗೆ ಬಂದಿದ್ದೇವೆ ಎಂಬುದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೆ ನಾವು ಅದನ್ನು ವಿವಿಧ ಸಂದರ್ಭಗಳಲ್ಲಿ ಬಳಸಿದ್ದೇವೆ.

ಬೆಂಗಳೂರು
29 ಮೇ 2019

ಜಾಗತಿಕವಾಗಿ, ಹುಟ್ಟಿದ ನಂತರ ಕಿವುಡುತನದ ಪರೀಕ್ಷೆಗೆ ಒಳಪಡುವ ಪ್ರತಿ 1000 ಹಸುಗೂಸುಗಳಲ್ಲಿ 6 ಮಕ್ಕಳು ಕಿವುಡುತನದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಮತ್ತು ಅವರಲ್ಲಿ  200ಕ್ಕಿಂತಲೂ ಕಡಿಮೆ ಮಕ್ಕಳಿಗೆ ಮಾತ್ರ ವಾಕ್ ಚಿಕಿತ್ಸಕರು ಲಭ್ಯವಿದ್ದಾರೆ. ಭಾರತದಂತಹ ದೇಶಗಳಲ್ಲೂ ಪರಿಸ್ಥಿತಿ ಕೆಟ್ಟದಾಗಿದ್ದು, ಬಡತನದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುತ್ತದೆ  ಮತ್ತು ಆರೋಗ್ಯ ಸೇವೆಗಳು ಅಷ್ಟು ಸುಲಭವಾಗಿ ಲಭ್ಯವಿರುವುದಿಲ್ಲ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, ಭಾರತೀಯ ಸನ್ನಿವೇಶದಲ್ಲಿ ವಿಶೇಷವಾಗಿ ಉಪಯುಕ್ತವಾಗುವ ಒಂದು ಶ್ರವಣ ಸಾಧನವನ್ನು ರೂಪಿಸಿದ್ದಾರೆ.

ಬೆಂಗಳೂರು
24 Apr 2019

ನಮ್ಮ ಬೆಂಗಳೂರಿನ ವಾಹನಗಳು ಟ್ರಾಫಿಕ್ ನ ಸಮಸ್ಯೆಯಿಂದ ವೇಗವಾಗಿ ಚಲಿಸದೇ ಇರಬಹುದು. ಆದರೆ ಬೆಳವಣಿಗೆಯ ದೃಷ್ಟಿಯಿಂದ ಬೆಂಗಳೂರು ಇಂದಿಗೂ ಕೂಡ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು.ಹೀಗೆ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ, ‘ನಗರ ಸುಧಾರಣೆಯ’ ಮೂಲ ಅರ್ಥ ನಮ್ಮೆಲ್ಲರ ದೃಷ್ಟಿಯಲ್ಲಿ ರಸ್ತೆ, ನೀರು , ನೈರ್ಮಲ್ಯಾಭಿವೃದ್ಧಿ, ಅನಿಯಮಿತ ವಸತಿಗಳ ನಿರ್ಮೂಲನೆ ಇತ್ಯಾದಿ ಆಗಿರಬಹುದು. ಇಂತಹ ಯೋಜನೆಗಳನ್ನು ನಾವು ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ವ್ಯಾಪಕವಾಗಿ ನೋಡುತ್ತೇವೆ ಕೂಡ.

ಬೆಂಗಳೂರು
21 ಮೇ 2018

ವೈವಿಧ್ಯತೆಯಲ್ಲಿ ಶ್ರೀಮಂತವೆನಿಸಿದ ತಾಣವಾದ ಭಾರತದಲ್ಲಿ ಹಲವಾರು ಬಗೆಯ ಸಂಸ್ಕೃತಿಗಳನ್ನು ನಾವು ಕಾಣಬಹುದು. ಇಲ್ಲಿ ಮಾತನಾಡಲಾಗುವ ಹೆಚ್ಚಿನ ಸಂಖ್ಯೆಯ ಭಾಷೆಗಳೇ ಇದಕ್ಕೆ ಒಂದು ಪ್ರಮಾಣಪತ್ರವಾಗಿದೆ. ಈ ಭಾಷೆಗಳನ್ನು ಕಲಿಯುವುದು ಆಸಕ್ತಿಕರವೇನೋ ಹೌದು; ಜೊತೆಗೇ, ಅವುಗಳನ್ನು ಅಧ್ಯಯನ ಮಾಡುವುದು ಇನ್ನೊಂದು ಕಾರಣಕ್ಕಾಗಿ ಆಕರ್ಷಕವಾಗಿದೆ; ಅದೇನೆಂದರೆ ಭಾರತೀಯ ಆರ್ಯ ಭಾಷಿಕರು ಕ್ರಿಸ್ತ ಪೂರ್ವ ೧೫೦೦ರಲ್ಲಿ ಆಗಮಿಸುವ ಮೊದಲು, ಭಾರತೀಯ ಉಪಖಂಡದಲ್ಲಿ ವಾಸವಾಗಿದ್ದ ದ್ರಾವಿಡರ ಅಲ್ಪ-ಪ್ರಸಿದ್ಧ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಈ ಭಾಷೆಗಳು ನಮಗೆ ಸಹಾಯ ಮಾಡುತ್ತವೆ. ಇಲ್ಲಿಯವರೆಗೆ, ದ್ರಾವಿಡರ ಮೂಲ ಮತ್ತು ದೇಶದಾದ್ಯಂತ ಅವರ ಪ್ರಸರಣದ ಬಗ್ಗೆ ಹೆಚ್ಚು ತಿಳಿದಿಲ್ಲ.

ಬೆಂಗಳೂರು
21 Mar 2019

‘ದಿ ಲಾನ್ಸೆಟ್ ಡಯಾಬಿಟಿಸ್ ಅಂಡ್ ಎಂಡೋಕ್ರೈನಾಲಜಿ’ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನಗಳ ಸರಣಿಯಲ್ಲಿ, ಭಾರತ, ಯು.ಕೆ ಮತ್ತು ಆಸ್ಟ್ರೇಲಿಯಾದ ಸಂಶೋಧಕರ ತಂಡವು ಸಾಂಕ್ರಾಮಿಕವೆಂಬಂತೆ ಹೆಚ್ಚುತ್ತಿರುವ ಟೈಪ್ 2 ಮಧುಮೇಹದ ಬಗ್ಗೆ, ಅದರ ಪ್ರಚಲಿತ ಚಿಕಿತ್ಸೆಯ ಬಗ್ಗೆ, ಜೊತೆಗೆ ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಈ ನಿಟ್ಟಿನಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಪ್ ಟು ಡೇಟ್ ಮಾಹಿತಿ ನೀಡುತ್ತದೆ.

ಮುಂಬಾಯಿ
15 Nov 2018

ಕರ್ನಾಟಕದ ದಕ್ಷಿಣದಲ್ಲಿರುವ, ಐತಿಹಾಸಿಕವಾಗಿ ಬಂಟ್ವಾಳ ನದಿ ಎಂದು ಕರೆಯಲ್ಪಡುವ ನೇತ್ರಾವತಿ ನದಿಯ ಪ್ರವಾಹವು, ನೈರುತ್ಯ ಮಾನ್ಸೂನ್ ಸಮಯದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಬಂಟ್ವಾಳ ಪಟ್ಟಣದ ಸ್ಥಳೀಯ ನಿವಾಸಿಗಳು ಇನ್ನೂ 1974 ರಲ್ಲಿ ನದಿಯ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಉಂಟಾದ ವಿನಾಶಕಾರಿ ಪ್ರವಾಹದಿಂದ ಹೊರಬಂದು ಪುನಃ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಇದು ಇತ್ತೀಚೆಗೆ 2013 ಮತ್ತು 2015 ರಲ್ಲಿ ಹಾಗೂ 2018 ರಲ್ಲಿ ಪುನರಪ್ಪಳಿಸಿದೆ. ನದಿಯ ನೀರಿನ ಮಟ್ಟದಲ್ಲಿ ಉಂಟಾಗುತ್ತಿರುವ ಎಲ್ಲಾ ಬದಲಾವಣೆಗಳಿಗೆ ಮಳೆ ಸುರಿತದ ಏರಿಳಿತಗಳು ಕಾರಣವೇ?

Bengaluru
3 Jan 2019

ಹೊಸ ವರ್ಷ ಬಂದಾಯಿತು, ಆದರೆ ನಾವಿನ್ನು ೨೦೧೮ರ ವರ್ಷಾಗಮನವನ್ನು ಕಳೆದ ವರ್ಷದಲ್ಲಿ ಪ್ರಾರಂಭಿಸಿದ ಕೆಲವು ಚಟುವಟಿಗೆಗಳನ್ನು ಮೆಲಕು ಹಾಕುತ್ತಿದ್ದೇವೆ. ಅವುಗಳಲ್ಲಿ ಪ್ರಮುಖವಾದುದ್ದು  ಪ್ರಾದೇಶಿಕ ಭಾಷೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಹೊರತರುವುದು. ಪ್ರಾರಂಭಿಕವಾಗಿ ನಾವು ಮೊದಲು ಕನ್ನಡದಲ್ಲಿ ಲೇಖನಗಳನ್ನು ಈಗ ಕಳೆದು ಮೂರು-ನಾಲ್ಕು ವರ್ಷಗಳಿಂದ ಬರೆಯುತ್ತಿದ್ದೇವೆ. ಇದಕ್ಕೆ ನಮಗೆ 'ಪ್ರಜಾವಾಣಿ'ಯಿಂದಲೂ ಬಹಳಷ್ಟು ಪ್ರೋತ್ಸಾಹ ದೊರೆಯಿತು. ಪ್ರತಿ ಸೋಮವಾರ, 'ವಿಜ್ಞಾನ ಲೋಕದಿಂದ' ಎಂಬ ಅಂಕಣದಲ್ಲಿ ನಮ್ಮ ಲೇಖನಗಳು ಮುದ್ರಣವಾಗುತ್ತಿತ್ತು. ಕಳೆದ ವರ್ಷ ನಾವು ಹಿಂದಿ, ಮರಾಠಿ ಮತ್ತು ಅಸ್ಸಾಮೀಸ್ ನಲ್ಲೂ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದೆವು. ಈ ವರ್ಷ ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ  ಬಹಳಷ್ಟು ಲೇಖನಗಳು, ಪಾಡ್ಕ್ಯಾಸ್ಟ್ಗಳು, ಮತ್ತು ಇತರೆ ರೀತಿಯಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಇಲ್ಲಿ ಕಳೆದ ವರ್ಷ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದ ಕೆಲವು ಆಯ್ದ ಲೇಖನಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.