ಹೆಸರಿಗೆ ತಕ್ಕಂತೆ ಕಾಸ್ಮಿಕ್ ಕಿರಣಗಳು ಅಮೋಘವಾದ ಕಿರಣಗಳು. ದೂರದ ಬ್ರಹ್ಮಾಂಡದಲ್ಲಿನ ವಿಪರೀತ ಘಟನೆಗಳಿಂದ ಉತ್ಪನ್ನವಾಗುವ ಈ ಕಿರಣಗಳು ಭೂಮಿಯನ್ನು ತಲುಪುವ ಮುನ್ನ ಬೆಳಕಿನ ವೇಗದ ಸಮೀಪದ ವೇಗದಲ್ಲಿ ಬಾಹ್ಯಾಕಾಶದೊಳಗೆ ಬಹಳ ದೂರ ಸಂಚರಿಸುತ್ತವೆ. ಇವುಗಳಲ್ಲಿ ಕೆಲವು ಕಿರಣಗಳನ್ನು ಭೂಮಿಯ ವಾಯುಮಂಡಲ ಹೀರಿಕೊಳ್ಳುತ್ತದೆ, ಇನ್ನು ಹಲವು ಕಿರಣಗಳು ಭೂಮಿಯ ಮೇಲ್ಪದರದವರೆಗೆ ಚಲಿಸುತ್ತವೆ. ಈ ಕಾಸ್ಮಿಕ್ ಕಿರಣಗಳೊಳಗೆ ಏನಿದೆ, ಯಾವ ಖಗೋಳ ಘಟನೆಗಳಿಂದ ಇವು ಹುಟ್ಟುತ್ತವೆ, ಇವನ್ನೇಕೆ ನಾವು ಭೂಮಿಯ ಮೇಲೆ ಗಮನಿಸುತ್ತೇವೆ - ಈ ಪ್ರಶ್ನೆಗಳು ಕಾಸ್ಮಿಕ್ ಕಿರಣಗಳು ಆವಿಷ್ಕಾರಗೊಂಡ 1912 ನೇ ಇಸವಿಯಿಂದ ಖಗೋಳ ವಿಜ್ಞಾನಿಗಳನ್ನು ಚಕಿತಗೊಳಿಸಿವೆ.
ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.
ಬೆಂಗಳೂರು / Jul 6, 2022