You are here

Western Ghats

ಹೊಸ ದೆಹಲಿ | Mar 27
ರಸ್ತೆಬದಿಯ ಕೆಸರುಗುಂಡಿಯಲ್ಲಿ ಪತ್ತೆಯಾದ ರಹಸ್ಯ ಜೀವನಶೈಲಿಯ ಕಪ್ಪೆ!

ಪಶ್ಚಿಮಘಟ್ಟಗಳ ಕಾಡುಗಳು ಭಾರತದ ಜೀವವೈವಿಧ್ಯದ ಹಾಟ್ಸ್ಪಾಟ್ ಎಂದೇ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ, ಈ ಸಮೃದ್ಧ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುವ ಹಲವು ಹೊಸ ಜಾತಿಯ ಉಭಯವಾಸಿಗಳು ಮತ್ತು ಸರೀಸೃಪಗಳು ಪತ್ತೆಯಾಗಿವೆ. ಆದರೆ, ಈ ಬಾರಿ, ಉಭಯಚರಗಳ ಬಗ್ಗೆ ಅಧ್ಯಯನ ನಡೆಸುವ ದೆಹಲಿಯ ವಿಶ್ವವಿದ್ಯಾನಿಲಯದ ಸಂಶೋಧಕರು, ರಸ್ತೆಬದಿಯ ಕೆಸರುಗುಂಡಿಯಂತಹ ಸರಳವಾದ ಸ್ಥಳದಲ್ಲಿ ಅಡಗಿದ್ದ ಹೊಸ ಜಾತಿಯ ಕಪ್ಪೆಯನ್ನು ಕಂಡುಹಿಡಿದಿದ್ದಾರೆ! ಭಾರತ ಸರ್ಕಾರದ ‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ’ಯ ಕ್ರಿಟಿಕಲ್ ಇಕೋಸಿಸ್ಟಮ್ ಪಾರ್ಟ್ನರ್ಶಿಪ್ ಫಂಡ್ನಿಂದ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಅನುದಾನ ಪಡೆದ ತಮ್ಮ ಈ ಸಂಶೋಧನೆಯನ್ನು ‘ಸೈಂಟಿಫಿಕ್ ರಿಪೋರ್ಟ್ಸ್’ ಜರ್ನಲ್ನಲ್ಲಿ ಅವರು ವಿವರಿಸಿದ್ದಾರೆ.

General, Science, Ecology, Deep-dive
ಬೆಂಗಳೂರು | Jan 4
ಮೈಕ್ರೊಹೈಲಾ ಡಾರ್ರೆಲಿ | ಚಿತ್ರ: ಎಸ್. ಡಿ. ಬಿಜು

ಇತ್ತೀಚಿನ ಅಧ್ಯಯನವೊಂದರ ಭಾಗವಾಗಿ, ಕೇರಳದ ಪಶ್ಚಿಮ ಘಟ್ಟಗಳಲ್ಲಿ ಮತ್ತೊಂದು ಹೊಸ ಪ್ರಭೇದದ ಕಪ್ಪೆಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ‘ಮೈಕ್ರೊಹೈಲಾ ಡಾರ್ರೆಲಿ’ ಎಂಬ ಹೆಸರಿನ ಈ ಕಪ್ಪೆ, ‘ಮೈಕ್ರೊಹೈಲಾ’ ಕುಲಕ್ಕೆ ಸೇರಿದ ಜೀವಿಯಾಗಿದೆ; ಈ ಕುಲದ ಕಪ್ಪೆಗಳಿಗೆ ‘ಕಿರಿ ಮೂತಿಯ ಕಪ್ಪೆ’ (ನ್ಯಾರೋ ಮೌಥ್ಡ್ ಫ್ರಾಗ್) ಎಂಬ ಸಾಮಾನ್ಯ ಹೆಸರಿದ್ದು, ಇದಕ್ಕೆ ಕಾರಣ ಅವುಗಳ ತ್ರಿಕೋನಾಕಾರದ ಪುಟ್ಟ ದೇಹ ಮತ್ತು  ಕಿರಿದಾದ ಮೂತಿ.  ಈ ಕುಲದ ಕಪ್ಪೆಗಳು ಜಪಾನ್, ಚೀನಾ, ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

General, Science, Ecology, News
ಬೆಂಗಳೂರು | Sep 15

ಯುನೈಟೆಡ್ ಕಿಂಗ್ಡಮ್ನ ಪ್ಲೈಮೌತ್ ವಿಶ್ವವಿದ್ಯಾಲಯ, ಅಮೇರಿಕಾದ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ,  ಲಂಡನ್ ನ ಇಂಪೀರಿಯಲ್ ಕಾಲೇಜ್ ಮತ್ತು ಭಾರತದ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿನ ಬಂಡೆಗಳಿಂದಾವೃತವಾದ ಪ್ರಸ್ಥಭೂಮಿಗಳಲ್ಲಿ ‘ಬ್ಯಾಟ್ರಾಕೊಖೈಟ್ರಿಯಮ್ ಡೆಂಡ್ರೊಬಾಟಿಡಿಸ್’ನ ಪ್ರಭುತ್ವವನ್ನು ಶೋಧಿಸಿದ್ದಾರೆ. 

General, Science, Ecology, Health, Deep-dive
Bengaluru | Jun 8
Photo : Prudvi Raj

ಭಾರತದ ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ತಲಾ ಒಂದೊಂದು ಹೊಸ ಜಾತಿಯ ಚಿಮ್ಮಂಡೆ ಕಪ್ಪೆಗಳನ್ನು ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಪ್ರಾಣಿವಿಜ್ಞಾನ ಸಮೀಕ್ಷೆ ಮತ್ತು ಉತ್ತರ ಒರಿಸ್ಸಾ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.

General, Science, Ecology, Deep-dive
Kodaikanal | Mar 24
Photo : Vignesh Kamath / Research Matters

ಪಶ್ಚಿಮ ಘಟ್ಟ ಶ್ರೇಣಿ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಮಾನವ ಚಟುವಟಿಕೆಗಳು ಈ ಹಚ್ಚ ಹಸುರಿನ ಕಾಡುಗಳ ಉಳಿವಿಗೆ ಬೆದರಿಕೆ ಒಡ್ಡುತ್ತಿವೆ. ಇಂತಹ ಬದಲಾವಣೆಗಳನ್ನು ನಿಖರವಾಗಿ ತಿಳಿಯಲು ಸಂಶೋಧಕರು 40 ವರ್ಷಗಳಲ್ಲಿ ಸಸ್ಯವರ್ಗದ ಹೊದಿಕೆಯಲ್ಲಾದ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದಾರೆ.

General, Science, Ecology, Society, Policy, Deep-dive