ಒಮ್ಮೆ ಕಲ್ಪಿಸಿಕೊಳ್ಳಿ. ಆ ಮೋಡ ಕವಿದ ಮುಸ್ಸಂಜೆ. ಮೇಘ ತುಂಬಿದ ಬಾನು. ಆ ಬಾನಿನಿಂದ ನಿಧಾನವಾಗಿ ಕೆಳಗಿಳಿದು ಭೂಮಿಯನ್ನು ತಾಕಿದ ಮಳೆಹನಿಗಳು. ಈ ಮಳೆಹನಿಗಳ ಸ್ಪರ್ಷದಿಂದ ಹಸಿಯಾದ ಭೂಮಿಯ ಮಣ್ಣು. ಮಣ್ಣಿನಿಂದ ಹೊರಸೂಸುವ ಆ ಭೂಮಿಯ ಸುಗಂಧ. ಎಂತಹ ಅದ್ಭುತ ಅನುಭವವಲ್ಲವೆ? ಈ ಹೊಸ-ಮಳೆಹನಿಯ ಹಸಿಯಾದ ಭೂಮಿಯ ಸುವಾಸನೆ ನಿಮಗೆ ಎಂದಾದರೂ ಅದನ್ನು ತಿನ್ನಬೇಕೆನ್ನುವ ಪ್ರಚೋದನೆಯನ್ನು ನೀಡಿದೆಯೆ? ಗಾಬರಿ ಪಡಬೇಡಿ, ಅನೇಕ ಸಸ್ತನಿಗಳಲ್ಲಿ ಇದು ಸಾಮಾನ್ಯ.
ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.
ಬೆಂಗಳೂರು / Jul 6, 2022