ಹಯಾಬುಸಾ ಎಂದರೆ ವೇಗವಾಗಿ ಚಲಿಸುವ ಜಪಾನೀ ಬೈಕ್ ನೆನಪಿಗೆ ತಕ್ಷಣ ಬರುವುದು ಅಲ್ಲವೇ? ಆದರೆ ಜಪಾನಿನ ಬಾಹ್ಯಾಕಾಶ ಸಂಸ್ಥೆ - (ಜಾಕ್ಸ, JAXA) ತನ್ನ ಒಂದು ನೌಕೆಯ ಹೆಸರು ಹಯಾಬುಸಾ 2 ಎಂದು ಇಟ್ಟಿದ್ದಾರೆ. ಈ ನೌಕೆಯನ್ನು ಜಪಾನಿನ ಬಾಹ್ಯಾಕಾಶ ಸಂಸ್ಥೆ ಸೌರವ್ಯೂಹದಾದ್ಯಂತ ಸಂಚರಿಸಿ ರುಯ್ಗು (Ryugu) ಕ್ಷುದ್ರಗ್ರಹವನ್ನು ಸಂಪರ್ಕ ಸಾಧಿಸುವ ಉದ್ದೇಶದಿಂದ  ಡಿಸೆಂಬರ್ 2014 ರಲ್ಲಿ ಉಡಾವಣೆ ಮಾಡಿತ್ತು. ಇದು ಸುಮಾರು ಮೂವತ್ತು ಕೋಟಿ (300 ಮಿಲಿಯನ್) ಕಿಲೋಮೀಟರ್ ದೂರ ಪ್ರಯಾಣಿಸಿ 2018 ರಲ್ಲಿ ರುಯ್ಗು ಕ್ಷುದ್ರಗ್ರಹವನ್ನು ಸ್ಪರ್ಶಿಸಿತ್ತು. ಅಲ್ಲಿಯೇ ಕೆಲ ತಿಂಗಳು ಇದ್ದು ಮಾಹಿತಿ ಮತ್ತು ವಸ್ತು ಸಂಗ್ರಹಣೆ ಮಾಡಿ, 2020 ಯಲ್ಲಿ ಯಶಸ್ವಿಯಾಗಿ ಹಿಂತಿರುಗಿತ್ತು.

Ecology

ಬೆಂಗಳೂರು
27 Jul 2019

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ಒಂದು ತಂಡ ಪಶ್ಚಿಮ ಘಟ್ಟಗಳ ಹಾವುಗಳನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸಲು ಪ್ರಯತ್ನಿಸುತ್ತಿದ್ದರು. ಈ ಕ್ರಮಬದ್ಧ ಅಧ್ಯಯನ ನಡೆಸುವಾಗ ಪಶ್ಚಿಮ ಘಟ್ಟಗಳ ಕಾಡುಗಳಿಗೆ ಸ್ವಂತವಾದ “ಪ್ರೊಹೇಟುಲ್ಲಾ ಆಂಟಿಕಾ” ಎನ್ನುವ ಒಂದು ಬಳ್ಳಿಹಾವನ್ನು ಅಕಸ್ಮಾತಾಗಿ ಕಂಡರು. ಇದು ಒಂದು ಪುರಾತನ ಪ್ರಭೇದವೆಂದು, ಸುಮಾರು ೨೬ ಮಿಲಿಯನ್ ವರುಷಗಳ ಹಿಂದೆ, ಮಧ್ಯ ಒಲಿಗೋಸೀನ್ ಯುಗದಲ್ಲಿ ವಿಕಾಸನಗೊಂಡಿತೆಂದು ಅಂದಾಜಿಸಲಾಗಿದೆ.

ಬೆಂಗಳೂರು
19 Jun 2019

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಕಪ್ಪೆಗಳ ಸಾಮ್ರಾಜ್ಯ ಗೋಚರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮಳೆಗಾಲದಲ್ಲಿ ಎಷ್ಟೋ ಕಪ್ಪೆಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆಯತ್ತ ಮುಖ ಮಾಡುತ್ತವೆ. ಆದರೆ, ಇತ್ತೀಚೆಗಷ್ಟೇ, ಈಶಾನ್ಯ ಭಾರತದ, ಅಸ್ಸಾಂ ರಾಜ್ಯದ ಕಾಡುಗಳಲ್ಲಿ ಪತ್ತೆಯಾದ ಕಪ್ಪೆಯ ಹೊಸ ಪ್ರಭೇದವಾದ “ಮಿಕ್ರಿಲೆಟ್ಟ ಐಶಾನಿ” ಮುಂಗಾರು ಪ್ರಾರಂಭವಾಗುವ ಮುನ್ನವೇ ತನ್ನ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ, ನಂತರ ಮುಂದಿನ ಮಳೆಗಾಲದವರೆಗೆ ಕಾಣಿಸಿಕೊಳ್ಳುವುದಿಲ್ಲ!

ಬೆಂಗಳೂರು
10 Jul 2019

2015ರಲ್ಲಿ, ಅದೊಂದು ಮಾಮೂಲು ಸುದಿನ. ಪುಣೆಯ ಅಘರ್ಕರ್ ಸಂಶೋಧನಾ ಕೇಂದ್ರದ, ವಿಜ್ಞಾನಿಯಾದ ಡಾ. ರಿತೇಶ್ ಕುಮಾರ್ ಚೌಧರಿಯನ್ನು ಕಾಣಲು ಬಂದಿದ್ದ, ಬೆಂಗಳೂರಿನ ಎಂ. ಈ. ಎಸ್. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಿ. ರಾಮಚಂದ್ರ ರಾವ್, ಉತ್ತರ ಕನ್ನಡ ಜಿಲ್ಲೆಯಿಂದ, ಚಿಕ್ಕ ಹೂಗಳಿರುವ, ಹುಲ್ಲಿನಂತೆ ಕಾಣುವ ಕೆಲ ಗಿಡಗಳ ಮಾದರಿಗಳನ್ನು ತಂದು, ಅದನ್ನು ಗುರುತಿಸಲು ಡಾ. ಚೌಧರಿಯ ಸಹಾಯ ಕೋರಿದರು. ಡಾ. ಚೌಧರಿಯವರು ಅದನ್ನು ಕೂಡಲೇ ಒಂದು ‘ಪೈಪ್ವರ್ಟ್’ ಅಥವಾ ಹೂಬಿಡುವ ಏಕದಳದ ಒಂದು ಪ್ರಭೇದ ಎಂದು ಗುರುತಿಸಿದರು. ಆದರೆ, ಇದು ಯಾವ ಪ್ರಭೇದವೆನ್ನುವುದು ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿತ್ತು!

ಬೆಂಗಳೂರು
4 Jan 2019

ಇತ್ತೀಚಿನ ಅಧ್ಯಯನವೊಂದರ ಭಾಗವಾಗಿ, ಕೇರಳದ ಪಶ್ಚಿಮ ಘಟ್ಟಗಳಲ್ಲಿ ಮತ್ತೊಂದು ಹೊಸ ಪ್ರಭೇದದ ಕಪ್ಪೆಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ‘ಮೈಕ್ರೊಹೈಲಾ ಡಾರ್ರೆಲಿ’ ಎಂಬ ಹೆಸರಿನ ಈ ಕಪ್ಪೆ, ‘ಮೈಕ್ರೊಹೈಲಾ’ ಕುಲಕ್ಕೆ ಸೇರಿದ ಜೀವಿಯಾಗಿದೆ; ಈ ಕುಲದ ಕಪ್ಪೆಗಳಿಗೆ ‘ಕಿರಿ ಮೂತಿಯ ಕಪ್ಪೆ’ (ನ್ಯಾರೋ ಮೌಥ್ಡ್ ಫ್ರಾಗ್) ಎಂಬ ಸಾಮಾನ್ಯ ಹೆಸರಿದ್ದು, ಇದಕ್ಕೆ ಕಾರಣ ಅವುಗಳ ತ್ರಿಕೋನಾಕಾರದ ಪುಟ್ಟ ದೇಹ ಮತ್ತು  ಕಿರಿದಾದ ಮೂತಿ.  ಈ ಕುಲದ ಕಪ್ಪೆಗಳು ಜಪಾನ್, ಚೀನಾ, ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಬೆಂಗಳೂರು
1 ಮೇ 2019

ಇತ್ತೀಚಿನ ಅಧ್ಯಯನವೊಂದರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು, ನಗರೀಕರಣವು ಹೇಗೆ ಓತಿಕೇತಗಳ ಸಾಮಾಜಿಕ ನಡವಳಿಕೆ ಮತ್ತು ಕಾರ್ಯತಂತ್ರಗಳನ್ನುರೂಪಿಸುತ್ತದೆ ಎಂದು ವಿವರಿಸಿದ್ದಾರೆ. ಸಂಶೋಧಕರು ತಮ್ಮ ಅಧ್ಯಯನವನ್ನು ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ವಾಸಿಸುವ ದಕ್ಷಿಣ ಭಾರತದ ಒಂದು ಬಗೆಯ ಓತಿಕೇತ, ರಾಕ್ ಅಗಾಮಗಳ (ಸಾಮ್ಮೊಫಿಲಸ್ ಡೋರ್ಸಲಿಸ್) ಮೇಲೆ ಕೈಗೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಗಂಡು ಓತಿಕೇತಗಳು ಇತರೇ ಗಂಡು ಮತ್ತು ಹೆಣ್ಣು  ಓತಿಕೇತಗಳೊಂದಿಗೆ ಪರಸ್ಪರ ಹೇಗೆ ವರ್ತಿಸುತ್ತವೆ ಎಂಬುದನ್ನು ಅವರು ಅಧ್ಯಯನ ಮಾಡಿದ್ದಾರೆ.

ಬೆಂಗಳೂರು
17 Apr 2019

ನಾವು ಯಾರನ್ನಾದರೂ “ಹೆಚ್ಚು ಅರಣ್ಯಗಳನ್ನು ಬೆಳೆಸಬೇಕೆ” ಎಂದು ಕೇಳಿದರೆ, ಸಾಮಾನ್ಯವಾಗಿ "ಖಂಡಿತವಾಗಲೂ ಬೆಳೆಸಬೇಕು; ಅರಣ್ಯಗಳು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ" ಎಂದೋ, "ಕಾಡು ಸಾವಿರಾರು ಜೀವಿಗಳ ಆವಾಸಸ್ಥಾನ" ಎಂದೋ ಉತ್ತರ ಕೇಳಿಬರುತ್ತದೆ. ಆದರೆ, ಈಗಿರುವ ಒಂದು ಬಗೆಯ ಭೂದೃಶ್ಯವನ್ನು ಕೃತಕವಾಗಿ ಕಾಡನ್ನಾಗಿ ಬದಲಾಯಿಸುವುದು ಎಲ್ಲಾ ಸಂದರ್ಭಗಳಲ್ಲಿ ಅತ್ಯುತ್ತಮ ಆಯ್ಕೆಯಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಕಾಡು ಬೆಳೆಸುವುದೆಂದರೆ ಒಳ್ಳೆಯದೇ ಎಂಬ ನಮ್ಮ ದೃಢವಾದ ನಂಬಿಕೆಗೆ ವ್ಯತಿರಿಕ್ತವಾಗಿ, ಕೃತಕವಾಗಿ ಕಾಡುಗಳನ್ನು ಬೆಳೆಸುವುದು ಕೆಲವೊಮ್ಮೆ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿಯನ್ನೇ ಮಾಡುತ್ತದೆ.

3 Jun 2018

ಪಶ್ಚಿಮ ಘಟ್ಟಗಳು ಜೀವ ವೈವಿಧ್ಯದಿಂದ ಸಮೃದ್ಧವಾಗಿರುವ ಪರಿಸರ ವ್ಯವಸ್ಥೆ; ಅದಕ್ಕೆ ಇದನ್ನು 'ಜೀವವೈವಿಧ್ಯತೆಯ ಹಾಟ್ಸ್ಪಾಟ್' ಎಂದು ವಿಜ್ಞಾನಿಗಳು ಘೋಷಿಸುತ್ತಾರೆ. ಆದರೆ ಈ ಘೋಷಣೆಯನ್ನು ಬೆಂಬಲಿಸಲು ಪುರಾವೆ ಹೇಗೆ ಸಿಗುತ್ತದೆ ಗೊತ್ತೇ? ಅದಕ್ಕೆ ಯಾವುದೇ ಒಂದು ಪರಿಸರ ವ್ಯವಸ್ಥೆಯಲ್ಲಿ ದೊರೆಯುವ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಮೂಲಕ, ಜೀವವೈವಿಧ್ಯದ ಸಮೃದ್ಧಿಗೆ ಸಾಕ್ಷಿ ಒದಗಿಸುತ್ತಾರೆ.

ಹೊಸ ದೆಹಲಿ
27 Mar 2019

ಪಶ್ಚಿಮಘಟ್ಟಗಳ ಕಾಡುಗಳು ಭಾರತದ ಜೀವವೈವಿಧ್ಯದ ಹಾಟ್ಸ್ಪಾಟ್ ಎಂದೇ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ, ಈ ಸಮೃದ್ಧ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುವ ಹಲವು ಹೊಸ ಜಾತಿಯ ಉಭಯವಾಸಿಗಳು ಮತ್ತು ಸರೀಸೃಪಗಳು ಪತ್ತೆಯಾಗಿವೆ. ಆದರೆ, ಈ ಬಾರಿ, ಉಭಯಚರಗಳ ಬಗ್ಗೆ ಅಧ್ಯಯನ ನಡೆಸುವ ದೆಹಲಿಯ ವಿಶ್ವವಿದ್ಯಾನಿಲಯದ ಸಂಶೋಧಕರು, ರಸ್ತೆಬದಿಯ ಕೆಸರುಗುಂಡಿಯಂತಹ ಸರಳವಾದ ಸ್ಥಳದಲ್ಲಿ ಅಡಗಿದ್ದ ಹೊಸ ಜಾತಿಯ ಕಪ್ಪೆಯನ್ನು ಕಂಡುಹಿಡಿದಿದ್ದಾರೆ! ಭಾರತ ಸರ್ಕಾರದ ‘ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ’ಯ ಕ್ರಿಟಿಕಲ್ ಇಕೋಸಿಸ್ಟಮ್ ಪಾರ್ಟ್ನರ್ಶಿಪ್ ಫಂಡ್ನಿಂದ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಅನುದಾನ ಪಡೆದ ತಮ್ಮ ಈ ಸಂಶೋಧನೆಯನ್ನು ‘ಸೈಂಟಿಫಿಕ್ ರಿಪೋರ್ಟ್ಸ್’ ಜರ್ನಲ್ನಲ್ಲಿ ಅವರು ವಿವರಿಸಿದ್ದಾರೆ.

ಬೆಂಗಳೂರು
15 Sep 2018

ಯುನೈಟೆಡ್ ಕಿಂಗ್ಡಮ್ನ ಪ್ಲೈಮೌತ್ ವಿಶ್ವವಿದ್ಯಾಲಯ, ಅಮೇರಿಕಾದ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ,  ಲಂಡನ್ ನ ಇಂಪೀರಿಯಲ್ ಕಾಲೇಜ್ ಮತ್ತು ಭಾರತದ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿನ ಬಂಡೆಗಳಿಂದಾವೃತವಾದ ಪ್ರಸ್ಥಭೂಮಿಗಳಲ್ಲಿ ‘ಬ್ಯಾಟ್ರಾಕೊಖೈಟ್ರಿಯಮ್ ಡೆಂಡ್ರೊಬಾಟಿಡಿಸ್’ನ ಪ್ರಭುತ್ವವನ್ನು ಶೋಧಿಸಿದ್ದಾರೆ.